'ಜಾರ್ಜ್ ಫರ್ನಾಂಡೀಸ್ ರಂತಹ ರೆಬೆಲ್ ನಾಯಕರ ಅಗತ್ಯವಿದೆ' ಎಂದಿದ್ದ ಅಡ್ವಾಣಿ

ಜಾರ್ಜ್ ಫೆರ್ನಾಂಡಿಸ್ ಜನ್ಮದಿನದಂದು ದೆಹಲಿಯ ಅವರ ನಿವಾಸದಲ್ಲಿ ಅಡ್ವಾಣಿ ಫರ್ನಾಂಡೀಸ್ ಅವರನ್ನು ಒಬ್ಬ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.

Last Updated : Jan 29, 2019, 10:57 AM IST
'ಜಾರ್ಜ್ ಫರ್ನಾಂಡೀಸ್ ರಂತಹ ರೆಬೆಲ್ ನಾಯಕರ ಅಗತ್ಯವಿದೆ' ಎಂದಿದ್ದ ಅಡ್ವಾಣಿ title=
File Image

ನವದೆಹಲಿ: ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ಅಲ್ಝಮೈರ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಜಾರ್ಜ್ ಫರ್ನಾಂಡಿಸ್ 88 ನೇ ಹುಟ್ಟುಹಬ್ಬದಂದು ಹಿರಿಯ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ  ಫರ್ನಾಂಡಿಸ್ ಅವರನ್ನು ರೆಬೆಲ್ ನಾಯಕ ಎಂದು ಕರೆದಿದ್ದರು. 'ಸದಾಕಾಲ ಜಾರ್ಜ್ ಫರ್ನಾಂಡೀಸ್ ರಂತಹ ರೆಬೆಲ್ ನಾಯಕರ ಅಗತ್ಯವಿದೆ' ಎಂದು ಅವರು ಹೇಳಿದ್ದರು.

"ಹೊಸ ಪೀಳಿಗೆಯ ಜನರು ಸಾವಿರಾರು ಬಡ-ಗುರುಗಳ ಧ್ವನಿಯಾಗಿದ್ದ ಸಮಾಜವಾದಿ ನಾಯಕ ಜಾರ್ಜ್ ಫೆರ್ನಾಂಡಿಸ್ನನ್ನು ನೆನಪಿಸಿಕೊಳ್ಳುತ್ತಾರೆ. ತುರ್ತು ಪರಿಸ್ಥಿತಿಯಲ್ಲಿ ಜಾರ್ಜ್ ಇಂದಿರಾ ಗಾಂಧಿ ಮತ್ತು ಸಂಜಯ್ ಗಾಂಧಿಯವರ ಉಸಿರುಗಟ್ಟಿಸಿದ್ದರು."  ಜಾರ್ಜ್ ಫೆರ್ನಾಂಡೀಸ್ ರಂತಹ ಬಂಡಾಯ ನಾಯಕರ ಅಗತ್ಯ ಯಾವಾಗಲೂ ಇರುತ್ತದೆ. ಏಕೆಂದರೆ, ಅಂತವರಿಲ್ಲದೆ ದೇಶದ ಪ್ರಗತಿ ಸಾಧ್ಯವಿಲ್ಲ ಎಂದು ಅಡ್ವಾಣಿ ನುಡಿದಿದ್ದರು.

ಜಾರ್ಜ್ ಫೆರ್ನಾಂಡಿಸ್ ಜನ್ಮದಿನದಂದು ದೆಹಲಿಯ ಅವರ ನಿವಾಸದಲ್ಲಿ ಅಡ್ವಾಣಿ ಫರ್ನಾಂಡೀಸ್ ಅವರನ್ನು ಒಬ್ಬ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದ್ದಾರೆ. 'ನಾನು ಅನೇಕ ವರ್ಷಗಳಿಂದ ಅವರೊಂದಿಗೆ ಸಂಸತ್ತಿನಲ್ಲಿದ್ದಿದ್ದೇನೆ. ಅವರೊಬ್ಬ ಅದ್ಭುತ ವ್ಯಕ್ತಿ. ಬಂಡಾಯ ನಾಯಕರ ಅಗತ್ಯ ದೇಶಕ್ಕೆ ಸದಾ ಅಗತ್ಯವಿದೆ. ಅಂತಹವರಿಲ್ಲದೆ ಏನೂ ಸಾಧ್ಯವಿಲ್ಲ' ಎಂದು ಅವರು ತಿಳಿಸಿದ್ದರು.

'ಯಾವುದೇ ಬಂಡಾಯ ಇರದಿದ್ದರೆ, ದೇಶಕ್ಕೆ ಸ್ವಾತಂತ್ರ್ಯ ಸಿಗುತ್ತಿರಲ್ಲ. ಜಾರ್ಜ್ ನಂತಹ ಗಾರ್ಡಿಯನ್ ಮುಖಂಡರು ಬರುತ್ತಲೇ ಇರುವುದರಿಂದ ದೇಶದ ಪ್ರಗತಿ ಮತ್ತು ಅಭಿವೃದ್ಧಿ ಸಾಧ್ಯ' ಎಂದು ಅಡ್ವಾಣಿ ಬಣ್ಣಿಸಿದ್ದರು.

ಜಾರ್ಜ್ ಫರ್ನಾಂಡೀಸ್ ಬಗೆಗಿನ 5 ವಿಷಯಗಳು:

1. ಭಾರತೀಯ ಸಂಸತ್ತಿನ ಅಧಿಕೃತ ವೆಬ್ಸೈಟ್ ಪ್ರಕಾರ, ಅವರು 3 ಜೂನ್ 1930 ರಂದು ಮಂಗಳೂರಿನಲ್ಲಿ ಜನಿಸಿದರು.

2. ಜಾರ್ಜ್ ಫೆರ್ನಾಂಡಿಸ್ ಹಿಂದಿ, ಇಂಗ್ಲಿಷ್, ತಮಿಳು, ಮರಾಠಿ, ಕನ್ನಡ, ಉರ್ದು, ಮಲೆಯಾಳಂ, ತುಳು, ಕೊಂಕಣಿ ಮತ್ತು ಲ್ಯಾಟಿನ್ ಭಾಷೆಗಳನ್ನು ಬಲ್ಲವರಾಗಿದ್ದರು. 

3. ಮಂಗಳೂರಿನಲ್ಲಿ ಬೆಳೆದ ಫರ್ನಾಂಡಿಸ್ 16 ವರ್ಷದವರಾಗಿದ್ದಾಗ ಮನೆಯವರು ಅವರನ್ನು ಕ್ರಿಶ್ಚಿಯನ್ ಮಿಷನರಿಯಲ್ಲಿ ಪಾದ್ರಿಯಾಗಲು ತರಬೇತಿ ಪಡೆಯಲು ಬೆಂಗಳೂರಿಗೆ ಕಳುಹಿಸಿದರೆ, ಅಲ್ಲಿ ಆಚಾರಕ್ಕೂ ವಿಚಾರಕ್ಕೂ ಇದ್ದ ವೆತ್ಯಯದಿಂದ ಜಿಗುಪ್ಸೆಗೊಂಡ ಅವರು ಹೊರಬಂದರು. ತಮ್ಮ 18 ನೇ ವಯಸ್ಸಿನಲ್ಲಿ ಚರ್ಚ್ ತೊರೆದು, ಉದ್ಯೋಗ ಹುಡುಕಿಕೊಂಡು ಬಾಂಬೆಗೆ ತೆರಳಿದರು.

4. ಚೋಪಡಿ ಬೆಂಚುಗಳ ಮೇಲೆ ಮಲಗುತಿದ್ದ ಫರ್ನಾಂಡಿಸ್ ಸೋಷಿಯಲಿಸ್ಟ್ ಪಾರ್ಟಿ ಮತ್ತು ಟ್ರೇಡ್ ಯೂನಿಯನ್ ಚಳುವಳಿಯ ಕಾರ್ಯಕ್ರಮಗಳಲ್ಲಿ ಸತತವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಜಾರ್ಜ್ ಸ್ವತಃ ವಿವರಿಸಿದ್ದಾರೆ. ಫರ್ನಾಂಡಿಸ್ನ ಮುಂಚಿನ ಚಿತ್ರಣವು ಪ್ರಚಂಡ ಬಂಡಾಯಗಾರನಾಗಿದ್ದಿತು. ಆ ಸಮಯದಲ್ಲಿ, ರಾಮ್ ಮನೋಹರ್ ಲೋಹಿಯಾ ಫರ್ನಾಂಡಿಸ್ ಅವರಿಗೆ ಸ್ಫೂರ್ತಿಯಾಗಿದ್ದರಂತೆ.

5. 1950 ರ ದಶಕದಲ್ಲಿ ಟ್ಯಾಕ್ಸಿ ಡ್ರೈವರ್ ಒಕ್ಕೂಟದ ಅಧ್ಯಕ್ಷರಾದರು.  1961 ರಿಂದ 1968ರ ಅವಧಿಯಲ್ಲಿ ಮುಂಬಯಿ ಮುನಿಸಿಪಲ್ ಕಾರ್ಪೋರೇಷನ್ನಿನ ಸದಸ್ಯರಾಗಿ ಜನಪ್ರಿಯ ಸೇವೆ ಸಲ್ಲಿಸಿದರು. 1967ರಲ್ಲಿ ಸಂಯುಕ್ತ ಸೋಷಿಯಲಿಸ್ಟ್ ಪಕ್ಷದಿಂದ ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಪರ್ಧಿಸಿ ಸದಾಶಿವ ಕಣೋಜಿ ಪಾಟಿಲ್ ಅಂತಹ ಜನಪ್ರಿಯ ಕಾಂಗ್ರೆಸ್ ನಾಯಕರನ್ನು ಭಾರೀ ಅಂತರದಿಂದ ಸೋಲಿಸಿದರು.
 

Trending News