ಪ್ರಧಾನಿ ಮೋದಿ ಕ್ಷೇತ್ರ ವಾರಣಾಸಿಯಲ್ಲಿ ದಾಳಿ ನಡೆಸಲು ಎಲ್‌ಇಟಿ ಸಂಚು!

ಗುಪ್ತಚರ ಸಂಸ್ಥೆಗಳ ವರದಿಯ ಪ್ರಕಾರ, ಎಲ್‌ಇಟಿ ಒಂದು ದೊಡ್ಡ ಭಯೋತ್ಪಾದಕ ದಾಳಿ ನಡೆಸಲು ಯೋಜಿಸುತ್ತಿದೆ ಮತ್ತು ಈ ಉದ್ದೇಶಕ್ಕಾಗಿ ವಾರಣಾಸಿಯಲ್ಲಿ ನೆಲೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ.  

Last Updated : Aug 28, 2019, 10:20 AM IST
ಪ್ರಧಾನಿ ಮೋದಿ ಕ್ಷೇತ್ರ ವಾರಣಾಸಿಯಲ್ಲಿ ದಾಳಿ ನಡೆಸಲು ಎಲ್‌ಇಟಿ ಸಂಚು! title=

ನವದೆಹಲಿ: ಭಾರತದ ಪ್ರಮುಖ ನಗರಗಳಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರ ಗುಂಪು ದಾಳಿ ನಡೆಸಲು ಯೋಜಿಸುತ್ತಿದೆ ಎಂದು ಕೆಲ ದಿನಗಳಿಂದ ಹೇಳಲಾಗುಟ್ಟಿದೆ. ಭಯೋತ್ಪಾದಕರು ದಾಳಿ ನಡೆಸಲು ಭಾರತದಲ್ಲಿ ಹೊಸ ಸ್ಥಳಗಳನ್ನು ಅನ್ವೇಷಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಜೀ ನ್ಯೂಸ್‌ಗೆ ಲಭ್ಯವಾಗಿರುವ ಕೇಂದ್ರ ಗುಪ್ತಚರ ಸಂಸ್ಥೆಗಳ ವರದಿಯ ಪ್ರಕಾರ, ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕರು ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾಗಿರುವ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನೆಲೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ವರದಿಯ ಪ್ರಕಾರ, ಈ ಸಂಘಟನೆಯು ಪ್ರಮುಖ ಭಯೋತ್ಪಾದಕ ದಾಳಿಯನ್ನು ನಡೆಸಲು ಯೋಜಿಸುತ್ತಿದೆ ಮತ್ತು ಈ ಉದ್ದೇಶಕ್ಕಾಗಿ ವಾರಣಾಸಿಯಲ್ಲಿ ನೆಲೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ.

ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸಲು ಈ ಪ್ರದೇಶದಲ್ಲಿ ನೆಲೆಯನ್ನು ಸ್ಥಾಪಿಸುವ ಕಾರ್ಯಸಾಧ್ಯತೆಯನ್ನು ಅನ್ವೇಷಿಸಲು ಕೆಲವು ಎಲ್‌ಇಟಿ ಭಯೋತ್ಪಾದಕರು ಕಳೆದ ಕೆಲವು ತಿಂಗಳುಗಳಿಂದ ವಾರಣಾಸಿಗೆ ಪ್ರಯಾಣಿಸಿದ್ದಾರೆ ಎಂದು ಮೂಲಗಳು ಜೀ ನ್ಯೂಸ್‌ಗೆ ತಿಳಿಸಿವೆ.

ಗುಪ್ತಚರ ಸಂಸ್ಥೆಗಳ ವರದಿಯಲ್ಲಿ ಉಮರ್ ಮಡ್ನಿ ಎಂಬ ಭಯೋತ್ಪಾದಕ ಮತ್ತು ನೇಪಾಳ ಮೂಲದ ಮತ್ತೊಬ್ಬ ಭಯೋತ್ಪಾದಕ ಮೇ ತಿಂಗಳಿನಲ್ಲಿ ನಾಲ್ಕು ದಿನಗಳ ಕಾಲ ವಾರಣಾಸಿಯಲ್ಲಿ ಉಳಿದುಕೊಂಡಿದ್ದರೆಂದು ಉಲ್ಲೇಖಿಸಲಾಗಿದೆ. ಈ ಪ್ರದೇಶದಲ್ಲಿ ಎಲ್‌ಇಟಿ ನೆಟ್‌ವರ್ಕ್ ಅನ್ನು ಹೇಗೆ ಬಲಪಡಿಸಬಹುದು ಎಂಬುದರ ಕುರಿತು ಅವರು ಗುಪ್ತವಾಗಿ ಮಾಹಿತಿ ಸಂಗ್ರಹಿಸಿದ್ದಾರೆ. ಪವಿತ್ರ ಪಟ್ಟಣದಲ್ಲಿ ದೊಡ್ಡ ಭಯೋತ್ಪಾದಕ ದಾಳಿ ನಡೆಸಲು ಮೋಡಸ್ ಒಪೆರಾಂಡಿ ಬಗ್ಗೆ ಭಯೋತ್ಪಾದಕರು ಚರ್ಚಿಸಿದರು ಎನ್ನಲಾಗಿದೆ.

ಅವರು ಮೇ 7 ರಿಂದ ಮೇ 11 ರವರೆಗೆ ವಿಶ್ರಾಂತಿ ಗೃಹದಲ್ಲಿ ವಾರಣಾಸಿಯಲ್ಲಿ ಕ್ಯಾಂಪ್ ಮಾಡಿದರು. ತಮ್ಮ ವಾಸ್ತವ್ಯದ ಅವಧಿಯಲ್ಲಿ, ಉಮರ್ ಮಡ್ನಿ ಈ ವಿಷಯದಲ್ಲಿ ಹಲವಾರು ಜನರನ್ನು ಭೇಟಿಯಾದರು.

ಉಮರ್ ಮಡ್ನಿ ಎಲ್‌ಇಟಿಯ ನೇಮಕಾತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಕಳೆದ ಕೆಲವು ತಿಂಗಳುಗಳಿಂದ, ಅವರು ಹಲವಾರು ಯುವಕರನ್ನು ಆಮೂಲಾಗ್ರವಾಗಿ ಸಜ್ಜುಗೊಳಿಸಲು ಪ್ರಯತ್ನಿಸುತ್ತಿರುವುದಾಗಿ ಮೂಲಗಳು ಸಂಶಯ ವ್ಯಕ್ತಪಡಿಸಿವೆ.

ವಾರಣಾಸಿ ಪ್ರಧಾನಿ ಮೋದಿಯವರ ಲೋಕಸಭಾ ಕ್ಷೇತ್ರವಾಗಿರುವುದರಿಂದ, ಪಾಕಿಸ್ತಾನ ಮೂಲದ ಭಯೋತ್ಪಾದಕರ ಈ ಪ್ರಯತ್ನವನ್ನು ವಿಫಲಗೊಳಿಸಲು ಭದ್ರತಾ ಸಂಸ್ಥೆಗಳು ಕಟ್ಟೆಚ್ಚರದಿಂದ ಕಾರ್ಯ ನಿರ್ವಹಿಸಲಿವೆ ಎಂದು ಹೇಳಲಾಗಿದೆ.

ಉತ್ತರಪ್ರದೇಶದ ಫೈಜಾಬಾದ್ ಮತ್ತು ಗೋರಖ್‌ಪುರ ಪ್ರದೇಶಗಳಲ್ಲಿ ನೆಲೆಗಳನ್ನು ಸ್ಥಾಪಿಸಲು ಎಲ್‌ಇಟಿ ಪ್ರಯತ್ನಿಸುತ್ತಿದೆ ಎಂದು ಗುಪ್ತಚರ ಸಂಸ್ಥೆಗಳು ಕೇಂದ್ರ ಗೃಹ ಸಚಿವಾಲಯಕ್ಕೆ ತಿಳಿಸಿವೆ. ವರದಿಯ ಪ್ರಕಾರ, ಯುವಕರನ್ನು ಸೆಳೆದು ತಮ್ಮ ಗುಂಪಿಗೆ ಸೇರಿಸಿಕೊನು ತರಬೇತಿ ನೀಡಿ, ಈ ನೆಲೆಗಳನ್ನು ಬಳಸಿಕೊಂಡು ದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಎಲ್‌ಇಟಿ ಯೋಜಿಸುತ್ತಿತ್ತು.
 

Trending News