Lesbian Couple : ಪ್ರೀತಿಗಾಗಿ ʼಲಿಂಗʼ ಬದಲಿಸಿಕೊಂಡ ಯುವತಿ.. ʼಹೆಣ್ಣು ಗಂಡಾದʼ ಮೇಲೂ ಸಿಗಲಿಲ್ಲ ಗೆಳತಿ..!

Lesbian Couple love story : ಪ್ರೀತಿ ಮಾಯೆ ಅಂತಾರಲ್ಲ ಅದು ಎಷ್ಟೋ ಸರಿ ನಿಜ ಅನಿಸುತ್ತೆ. ಪ್ರೀತಿ ಪಡೆಯಲು ಪ್ರೇಮಿಗಳು ಎನನ್ನಾದರೂ ಮಾಡೋಕೆ ರೆಡಿಯಾಗಿರ್ತಾರೆ ಅನ್ನೋ ಅದೇಷ್ಟೋ ಸಂಗತಿಗಳು ನಮ್ಮ ಮುಂದಿವೆ. ಇದೀಗ ಉತ್ತರ ಪ್ರದೇಶದ ಝಾನ್ಸಿ ವ್ಯಾಪ್ತಿಯಲ್ಲಿ ನಡೆದ ವಿಚಿತ್ರ ಪ್ರೇಮಕಥೆಯೊಂದು ಬೆಳಕಿಗೆ ಬಂದಿದ್ದು, ಈ ಲವ್‌ ಕಹಾನಿ ಕೇಳಿದ್ರೆ ಶಾಕ್‌ ಆಗೋದಂತು ಗ್ಯಾರಂಟೀ.

Written by - Krishna N K | Last Updated : Jan 21, 2023, 03:47 PM IST
  • ಪ್ರೀತಿ ಮಾಯೆ ಅಂತಾರಲ್ಲ ಅದು ಎಷ್ಟೋ ಸರಿ ನಿಜ ಅನಿಸುತ್ತೆ.
  • ಉತ್ತರ ಪ್ರದೇಶದ ಝಾನ್ಸಿ ವ್ಯಾಪ್ತಿಯಲ್ಲಿ ನಡೆದ ವಿಚಿತ್ರ ಪ್ರೇಮಕಥೆಯೊಂದು ಬೆಳಕಿಗೆ ಬಂದಿದೆ.
  • ಪ್ರೀತಿಗಾಗಿ ಹುಡುಗಿಯಾಗಿದ್ದ ಸನಾ ಹುಡುಗನಾಗಿ ಬದಲಾದಲಾದರೂ ಸಹ ಪ್ರೀತಿ ಸಿಗಲಿಲ್ಲ.
Lesbian Couple : ಪ್ರೀತಿಗಾಗಿ ʼಲಿಂಗʼ ಬದಲಿಸಿಕೊಂಡ ಯುವತಿ.. ʼಹೆಣ್ಣು ಗಂಡಾದʼ ಮೇಲೂ ಸಿಗಲಿಲ್ಲ ಗೆಳತಿ..! title=

UP Lesbian Couple : ಪ್ರೀತಿ ಮಾಯೆ ಅಂತಾರಲ್ಲ ಅದು ಎಷ್ಟೋ ಸರಿ ನಿಜ ಅನಿಸುತ್ತೆ. ಪ್ರೀತಿ ಪಡೆಯಲು ಪ್ರೇಮಿಗಳು ಎನನ್ನಾದರೂ ಮಾಡೋಕೆ ರೆಡಿಯಾಗಿರ್ತಾರೆ ಅನ್ನೋ ಅದೇಷ್ಟೋ ಸಂಗತಿಗಳು ನಮ್ಮ ಮುಂದಿವೆ. ಇದೀಗ ಉತ್ತರ ಪ್ರದೇಶದ ಝಾನ್ಸಿ ವ್ಯಾಪ್ತಿಯಲ್ಲಿ ನಡೆದ ವಿಚಿತ್ರ ಪ್ರೇಮಕಥೆಯೊಂದು ಬೆಳಕಿಗೆ ಬಂದಿದ್ದು, ಈ ಲವ್‌ ಕಹಾನಿ ಕೇಳಿದ್ರೆ ಶಾಕ್‌ ಆಗೋದಂತು ಗ್ಯಾರಂಟೀ.

ಹೌದು.. ಪ್ರೀತಿಯ ಬಲೆಯಲ್ಲಿ ಬಿದ್ದದ್ದ ಇಬ್ಬರು ಸಲಿಂಗಿ ಯುವತಿಯರು ಪರಸ್ಪರ ಪ್ರೀತಿಸುತ್ತಿದ್ದರು. ಅವರಲ್ಲಿ ಒಬ್ಬರು ಹುಡುಗನಾಗಿ ಲೈಂಗಿಕ ಬದಲಾವಣೆಗೆ ಒಳಗಾಗಿದ್ದರು. ಹುಡಗನಾಗಿ ಬಂದ ನಂತರ ತನ್ನ ಗೆಳತಿ ಮತ್ತೊಬ್ಬ ಹುಡುಗನನ್ನು ಪ್ರೀತಿಸುತ್ತಿರುವ ವಿಚಾರ ತಿಳಿದಿದೆ. ಇದರಿಂದಾಗಿ ತೃತೀಯಲಿಂಗಿ ಯುವತಿ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾಳೆ. ಈ ಕುರಿತು ಸಂಪೂರ್ಣ ಕಥೆ ಇಲ್ಲಿದೆ ನೋಡಿ.

ಇದನ್ನೂ ಓದಿ: ʼಭಾರತ್‌ ಜೋಡೋ ಯಾತ್ರೆʼ ಜಮ್ಮ & ಕಾಶ್ಮೀರ ಪ್ರವೇಶಿಸುತ್ತಿದ್ದಂತೆ ʼನಿಗೂಢ ಸ್ಟೋಟʼ : 6 ಮಂದಿಗೆ ಗಾಯ

2016 ರಲ್ಲಿ, ಸನಾ ಎಂಬ ಹುಡುಗಿ ಝಾನ್ಸಿ ಪ್ರದೇಶದ ಪ್ರೇಮ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಅದೇ ಮನೆಯ ಮಾಲೀಕರ ಮಗಳು ಸೋನಾಲ್ ಶ್ರೀವಾಸ್ತವ್ ಜೊತೆ ಸ್ನೇಹ ಬೆಳೆಸಿದ್ದಳು. ಈ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿತು. ಇಬ್ಬರೂ ಒಟ್ಟಿಗೆ ವಾಸಿಸಲು ನಿರ್ಧರಿಸಿದರು. 2017ರಲ್ಲಿ ಸೋನಾಲ್ ಮನೆಯಲ್ಲಿ ಇವರಿಬ್ಬರ ಪ್ರೇಮ ಪ್ರಕರಣ ಬೆಳಕಿಗೆ ಬಂದಿತ್ತು. ದೊಡ್ಡ ಜಗಳ ನಡೆದಿತ್ತು. ಕೂಡಲೇ ಸನಾಳನ್ನು ಮನೆ ಖಾಲಿ ಮಾಡಿ ಕಳುಹಿಸಲಾಗಿತ್ತು.

ಆ ಬಳಿಕ ಮನೆಯವರೊಂದಿಗೆ ಜಗಳವಾಡಿಕೊಂಡು ಸನಾ ಜತೆ ವಾಸವಾಗಲು ಸೋನಾಲ್ ಮನೆ ಬಿಟ್ಟಿದ್ದಳು. 2017ರಲ್ಲಿ ಇಬ್ಬರ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಆದರೆ, ಎರಡು ಕುಟುಂಬದವರು ರಾಜಿ ಮಾಡಿಕೊಂಡಿದ್ದರು. ಬಳಿಕ ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿ ಇರಲು ಎರಡೂ ಕುಟುಂಬಗಳ ಅನುಮತಿ ಪಡೆದಿದ್ದರು.  2020 ರಲ್ಲಿ, ಸೋನಾಲ್ ಕೋರಿಕೆಯಂತೆ ಸನಾ ಲಿಂಗ ಪರಿವರ್ತನೆಗೆ ಒಳಗಾಗಿದ್ದರು. ಈ ಪ್ರಕ್ರಿಯೆಗೆ ಸನಾ 12 ಲಕ್ಷ ರೂ. ಖರ್ಚು ಮಾಡಿ ಸನಾ ಸೊಹೈಲ್‌ಳಾಗಿ ಬದಲಾಗಿದರು.

ಇದನ್ನೂ ಓದಿ: ದೆಹಲಿಯಲ್ಲಿ ನಡೆಯುವ 74ನೇ ಗಣರಾಜ್ಯೋತ್ಸವ ಪರೇಡ್‌ ನೋಡಬೇಕೆ : ಈ ರೀತಿ ಟಿಕೆಟ್‌ ಬುಕ್‌ ಮಾಡಿ..!

ಆದರೆ ಅವನು ಅವಳಾದ ನಂತರ ದೈಹಿಕವಾಗಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗಿತ್ತು. ಸುಮಾರು ಒಂದು ವರ್ಷದ ನಂತರ, ದೇಹವನ್ನು ಹೊಂದಿಸಲಾಯಿತು. ಆದರೆ ಅಷ್ಟರಲ್ಲಿ ಸೋನಾಲ್ ಅನಿರೀಕ್ಷಿತ ಟ್ವಿಸ್ಟ್ ಕೊಟ್ಟಿದ್ದಾರೆ. ಅವಳು ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದಳು. ಆಗ ಸನಾ ತನ್ನನ್ನು ಮದುವೆಯಾಗುವಂತೆ ಸೊಹೈಲ್‌ಳನ್ನು ಕೇಳಿಕೊಂಡಳು. ಆದ್ರೆ ಸೋನಾಲ್ ನಿರಾಕರಿಸಿದಳು.

ಇದೀಗ ಸೋನಾ ಸೋಹೈಲ್ ವಂಚನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಸೋನಲ್‌ಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆಕೆ ಜಾಮೀನಿನ ಮೇಲೆ ಹೊರಗಿದ್ದು, ಈ ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 23 ರಂದು ನಡೆಯಲಿದೆ. ಪ್ರೀತಿಗಾಗಿ ಹುಡುಗಿಯಾಗಿದ್ದ ಸನಾ ಹುಡುಗನಾಗಿ ಬದಲಾದಲಾದರೂ ಸಹ ಪ್ರೀತಿ ಸಿಗಲಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News