ಆಂಧ್ರದ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ ವಕೀಲ ಆತ್ಮಹತ್ಯೆಗೆ ಯತ್ನ

ಶುಕ್ರವಾರದಂದು ಕರ್ನೂಲ್ ಜಿಲ್ಲೆಯ ನಂದ್ಯಾಲ್ ಕೋರ್ಟ್ ಬಳಿ ವಕೀಲನೋಬ್ಬನು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ನಡೆದಿದೆ.

Last Updated : Feb 9, 2019, 01:59 PM IST
ಆಂಧ್ರದ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ ವಕೀಲ ಆತ್ಮಹತ್ಯೆಗೆ ಯತ್ನ title=
photo:ANI

ನವದೆಹಲಿ: ಶುಕ್ರವಾರದಂದು ಕರ್ನೂಲ್ ಜಿಲ್ಲೆಯ ನಂದ್ಯಾಲ್ ಕೋರ್ಟ್ ಬಳಿ ವಕೀಲನೋಬ್ಬನು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ನಡೆದಿದೆ.

ಆತ್ಮಹತ್ಯೆಗೆ ಪ್ರಯತ್ನಿಸಿದ ವ್ಯಕ್ತಿಯನ್ನು ಅನಿಲ್ ಕುಮಾರ್ ಎಂದು ಗುರುತಿಸಲಾಗಿದ್ದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ದೃಶ್ಯ ರಿಕಾರ್ಡ್ ಆಗಿದೆ ಎಂದು ತಿಳಿದುಬಂದಿದೆ.ಈ ಘಟನೆಯ ವಿಚಾರವಾಗಿ ಪ್ರಯತ್ನಿಸಿದ ವಕೀಲ ಅನಿಲ್ ಕುಮಾರ್ ತಂದೆ ವೆಂಕಟ ರಾಮಯ್ಯ "ನನ್ನ ಮಗ ಎಂದಿನಂತೆ ಕೋರ್ಟ್ ಗೆ ಹೋಗಿದ್ದಾನೆ,ಏನಾಯಿತು ಎಂದು ನಮಗೆ ತಿಳಿಯಲಿಲ್ಲ, ಕೆಲವು ತಿಂಗಳ ಹಿಂದೆ ಅಷ್ಟೇ ಆತ ತನ್ನ ಕಾನೂನು ಪದವಿಯನ್ನು ಪಡೆದಿದ್ದ ಎನ್ನಲಾಗಿದೆ.

ಈ ಘಟನೆ ನಡೆದಾಗ ಅಲ್ಲಿ ನೆರೆದಿದ್ದ ವಕೀಲರೆಲ್ಲರು ಕೂಡ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.ವೈದ್ಯರು ಹೇಳುವಂತೆ ಇನ್ನು ಅನಿಲ್ ಕುಮಾರ್ ಸ್ಥಿತಿ ಗಂಭೀರ ಎಂದು ಹೇಳಲಾಗುತ್ತಿದೆ. 

Trending News