Covid Care Center: ರಾಷ್ಟ್ರ ರಾಜಧಾನಿಯಲ್ಲಿ ನಗರದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್

ದೆಹಲಿಯಲ್ಲಿ ವಾಸಿಸುವ ಜನರಿಗೆ ನೆಮ್ಮದಿಯ ಸುದ್ದಿ ಇದೆ. ಕೊರೊನಾವೈರಸ್ ಸೋಂಕಿತ ರೋಗಿಗಳಿಗಾಗಿ ನಗರದ ಅತಿದೊಡ್ಡ ಕೋವಿಡ್ ಆರೈಕೆ ಕೇಂದ್ರ ದೆಹಲಿಯ ಛತ್ರಪುರದಲ್ಲಿ ಪ್ರಾರಂಭವಾಗಿದೆ.  

Written by - Yashaswini V | Last Updated : Apr 26, 2021, 01:30 PM IST
  • ದೆಹಲಿಯಲ್ಲಿ ಕರೋನಾ ಸ್ಥಿತಿ ಗಂಭೀರ
  • ಈ ಹಿನ್ನಲೆಯಲ್ಲಿ ದೆಹಲಿಯಲ್ಲಿ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಆರಂಭ
  • ಈ ಕೋವಿಡ್ ಆರೈಕೆ ಕೇಂದ್ರದ ಒಟ್ಟು ಸಾಮರ್ಥ್ಯ 2500 ಹಾಸಿಗೆಗಳು
Covid Care Center: ರಾಷ್ಟ್ರ ರಾಜಧಾನಿಯಲ್ಲಿ ನಗರದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್  title=
Image courtesy: Twitter

ನವದೆಹಲಿ: ದಿನೇ ದಿನೇ ತಾರಕಕ್ಕೇರುತ್ತಿರುವ ಕೊರೊನಾವೈರಸ್ ಅಟ್ಟಹಾಸದ ನಡುವೆ ರಾಷ್ಟ್ರ ರಾಜಧಾನಿ ದೆಹಲಿ ನಿವಾಸಿಗಳಿಗೆ ನೆಮ್ಮದಿಯ ಸುದ್ದಿ ಇದೆ. ದೆಹಲಿಯ ಛತ್ರಪುರದ ರಾಧಾ ಸ್ವಾಮಿ ಆವರಣದಲ್ಲಿ ನಗರದ ಅತಿದೊಡ್ಡ ರಾಧಾ ಸಾಮಿ ಕೋವಿಡ್ ಕೇರ್ ಸೆಂಟರ್ ಇಂದಿನಿಂದ ಪ್ರಾರಂಭವಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕ್ಯಾಬಿನೆಟ್ ಮಂತ್ರಿಗಳೊಂದಿಗೆ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿದರು.

ಸಿಎಂ ಕೇಜ್ರಿವಾಲ್ ಟ್ವೀಟ್:
ಈ ಕುರಿತಂತೆ ಮಾಹಿತಿ ನೀಡಿರುವ ಸಿಎಂ ಅರವಿಂದ್ ಕೇಜ್ರಿವಾಲ್, 'ಇಂದು ಬೆಳಿಗ್ಗೆ ರಾಧಾ ಸ್ವಾಮಿ ಕ್ಯಾಂಪಸ್‌ಗೆ (Radha Saomi Covid Care Center) ಭೇಟಿ ನೀಡಿದ್ದೇ ಎಂದು  ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಪ್ರಸ್ತುತ, ಈ ಕೇಂದ್ರವನ್ನು 500 ಆಮ್ಲಜನಕ ಹಾಸಿಗೆಗಳೊಂದಿಗೆ ಪ್ರಾರಂಭಿಸಲಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಹಾಸಿಗೆಗಳ ಸಂಖ್ಯೆಯನ್ನು ಎರಡೂವರೆ ಸಾವಿರಕ್ಕೆ ಹೆಚ್ಚಿಸಲಾಗುವುದು. ನಾವು ಇಲ್ಲಿ 200 ಐಸಿಯು ಹಾಸಿಗೆಗಳನ್ನು ಸಹ ಪ್ರಾರಂಭಿಸುತ್ತೇವೆ. ಈ ಸಹಾಯಕ್ಕಾಗಿ ನಾವು ಬಾಬಾಜಿಗೆ ಕೃತಜ್ಞರಾಗಿರುತ್ತೇವೆ. ಇದರೊಂದಿಗೆ, ಇಲ್ಲಿ ಚಿಕಿತ್ಸೆಗಾಗಿ  ಐಟಿಬಿಪಿಯ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳನ್ನು ಒದಗಿಸಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು ಎಂದವರು ಬರೆದಿದ್ದಾರೆ.

ಇದನ್ನೂ ಓದಿ - Corona Second Wave: ಕೋವಿಡ್ ನಿರ್ವಹಣೆಗೆ Googleನಿಂದ 135 ಕೋಟಿ ರೂ. ನೆರವು

ಉಲ್ಲೇಖಿತ ರೋಗಿಗಳಿಗೆ ಮಾತ್ರ ಪ್ರವೇಶ ನೀಡಲಾಗುವುದು
ಮಾಹಿತಿಯ ಪ್ರಕಾರ, ಈ ರಾಧಾ ಸಾಮಿ ಕೋವಿಡ್ ಆರೈಕೆ ಕೇಂದ್ರದಲ್ಲಿ (Covid Care Center) ಉಲ್ಲೇಖಿತ ರೋಗಿಗಳನ್ನು ಮಾತ್ರ ದಾಖಲಿಸಲಾಗುತ್ತದೆ. ಆರಂಭದಲ್ಲಿ ಇಲ್ಲಿ 100 ರೋಗಿಗಳಿಗೆ ಚಿಕಿತ್ಸೆ ಒದಗಿಸಲಾಗುವುದು. ನಂತರ ಈ ಸಂಖ್ಯೆಯನ್ನು 500 ಕ್ಕೆ ಹೆಚ್ಚಿಸಲಾಗುತ್ತದೆ. ಈ ಕೋವಿಡ್ ಆರೈಕೆ ಕೇಂದ್ರದ ಒಟ್ಟು ಸಾಮರ್ಥ್ಯ 2500 ಹಾಸಿಗೆಗಳು. 24 ಗಂಟೆಗಳ ಕಾಲ ಇಲ್ಲಿ ಕಾರ್ಯನಿರ್ವಹಿಸಲಿರುವ ಈ ಕೋವಿಡ್ ಕೇರ್ ಕೇಂದ್ರಕ್ಕೆ ದೆಹಲಿ ಸರ್ಕಾರ ಸಹಾಯವಾಣಿ ಸಂಖ್ಯೆಗಳನ್ನು ಸಹ ನೀಡಿದೆ. ರೋಗಿಯನ್ನು ಕರೆತರುವ ಮೊದಲು, ಜನರು ಇಲ್ಲಿಗೆ ಕರೆ ಮಾಡಿ ದಾಖಲಾತಿಗೆ ಸಂಬಂಧಿಸಿದ ಔಪಚಾರಿಕತೆ ಮತ್ತು ಖಾಲಿ ಹಾಸಿಗೆಯ ಸ್ಥಿತಿಯನ್ನು ತಿಳಿಯಲು ಸಾಧ್ಯವಾಗುತ್ತದೆ.

ಕೋವಿಡ್ ಆರೈಕೆ ಕೇಂದ್ರದ ಸಹಾಯವಾಣಿ ಸಂಖ್ಯೆ:

  • 011-26655547
  • 011-26655548
  • 011-26655549
  • 011-26655949
  • 011-26655969

ಇದನ್ನೂ ಓದಿ - Covid-19 ರೋಗಿಯನ್ನು ಯಾವಾಗ ಆಸ್ಪತ್ರೆಗೆ ಸೇರಿಸಬೇಕು? ಕೇವಲ 6 ನಿಮಿಷಗಳಲ್ಲಿ ಈ ರೀತಿ ಪತ್ತೆ ಹಚ್ಚಿ

ಕೈಗಾರಿಕೋದ್ಯಮಿಗಳ ಸಹಾಯ ಕೋರಿದ ಸಿಎಂ :
ಏತನ್ಮಧ್ಯೆ, ದೆಹಲಿಯಲ್ಲಿ ಆಮ್ಲಜನಕದ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಈಗ ಕೈಗಾರಿಕೋದ್ಯಮಿಗಳಿಗೆ ಮನವಿ ಮಾಡಿದ್ದಾರೆ. ಈ ಸಂಬಂಧ ದೇಶದ ದೊಡ್ಡ ಕೈಗಾರಿಕೋದ್ಯಮಿಗಳಾದ ಟಾಟಾ, ಬಿರ್ಲಾ, ಬಜಾಜ್, ಅಂಬಾನಿ ಸೇರಿದಂತೆ ಇನ್ನೂ ಹಲವರಿಗೆ ಸಿಎಂ ಪತ್ರ ಬರೆದಿದ್ದು, ನಿಮ್ಮಲ್ಲಿ ಆಮ್ಲಜನಕ ಮತ್ತು ಟ್ಯಾಂಕರ್ ಇದ್ದರೆ ದೆಹಲಿ ಸರ್ಕಾರಕ್ಕೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ. 

ದೆಹಲಿಯ ಪರಿಸ್ಥಿತಿ ಗಂಭೀರವಾಗಿದೆ:
ದೆಹಲಿಯ ಕೊರೊನಾವೈರಸ್‌ನ ಪರಿಸ್ಥಿತಿ ನಿರಂತರವಾಗಿ ಗಂಭೀರವಾಗುತ್ತಿದೆ. ದೆಹಲಿಯಲ್ಲಿ ಈವರೆಗೆ ಒಟ್ಟು 10 ಲಕ್ಷ 27 ಸಾವಿರ 715 ಕರೋನಾ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 9 ಲಕ್ಷ 18 ಸಾವಿರ 875 ಜನರನ್ನು ಚಿಕಿತ್ಸೆಯ ನಂತರ ಗುಣಮುಖರಾಗಿದ್ದಾರೆ. ಅದೇ ಸಮಯದಲ್ಲಿ, ಸಕ್ರಿಯ ರೋಗಿಗಳ ಸಂಖ್ಯೆ 94 ಸಾವಿರ 592 ಕ್ಕೆ ಏರಿದೆ. ದೆಹಲಿಯಲ್ಲಿ ಕರೋನಾದಿಂದ ಈವರೆಗೆ ಒಟ್ಟು 14 ಸಾವಿರ 248 ಜನರು ಸಾವನ್ನಪ್ಪಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News