ದಿನಕ್ಕೆ 40 ಸಾವಿರ ಸಂಪಾದನೆ ಮಾಡ್ತಾರೆ ಈ ಬಿಗ್ ಬಾಸ್ ಚೆಲುವೆ... ಹೇಗೆ ಅಂತ ಗೊತ್ತಾದ್ರೆ ಶಾಕ್‌ ಆಗ್ತೀರಾ!!

bigg boss contestant: ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಜನಪ್ರಿಯತೆ ಅಷ್ಟಿಷ್ಟಲ್ಲ. ಈ ಕಾರ್ಯಕ್ರಮದ ಮೂಲಕವೇ ಇಂದಿನ ಸಾಕಷ್ಟು ಸೆಲೆಬ್ರಿಟಿಗಳು ಖ್ಯಾತಿ ಗಳಿಸಿದ್ದಾರೆ..

Written by - Savita M B | Last Updated : Jun 30, 2024, 08:00 PM IST
  • ಇತ್ತೀಚೆಗಷ್ಟೇ 3ನೇ ಸೀಸನ್ ಶುರುವಾಗಿದೆ
  • ಇತ್ತೀಚಿನ ಸಂಚಿಕೆಯಲ್ಲಿ, ಚಂದ್ರಿಕಾ ತಮ್ಮ ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ
 ದಿನಕ್ಕೆ 40 ಸಾವಿರ ಸಂಪಾದನೆ ಮಾಡ್ತಾರೆ ಈ ಬಿಗ್ ಬಾಸ್ ಚೆಲುವೆ... ಹೇಗೆ ಅಂತ ಗೊತ್ತಾದ್ರೆ ಶಾಕ್‌ ಆಗ್ತೀರಾ!! title=

Chandrika Gera: ಬಿಗ್ ಬಾಸ್ ಶೋ ಮೊದಲು ಹುಟ್ಟಿದ್ದು ಹಿಂದಿಯಲ್ಲಿ. ಅಲ್ಲಿ ಈಗಾಗಲೇ 17 ಸೀಸನ್‌ಗಳು ಮುಗಿದಿದ್ದು, ಎರಡು OTT ಸೀಸನ್‌ಗಳು ಪೂರ್ಣಗೊಂಡಿವೆ. ಸದ್ಯ OTT 3 ನೇ ಸೀಸನ್ ಪ್ರಾರಂಭವಾಗಲಿದೆ. ಆದರೆ ಈ ಬಾರಿ ಅನಿಲ್ ಕಪೂರ್ ಹೋಸ್ಟ್ ಆಗಿದ್ದಾರೆ.

 ಇತ್ತೀಚೆಗಷ್ಟೇ 3ನೇ ಸೀಸನ್ ಶುರುವಾಗಿದೆ.. 16 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಆದರೆ ಅದರಲ್ಲಿ ಒಬ್ಬ ಹುಡುಗಿ ಎಲ್ಲರ ಗಮನ ಸೆಳೆದಿದ್ದು ಆಕೆಯೇ ಚಂದ್ರಿಕಾ ಗೇರಾ ದೀಕ್ಷಿತ್. ವಡಾ ಪಾವ್ ಬ್ಯುಸಿನೆಸ್‌ನೊಂದಿಗೆ ಜನಪ್ರಿಯತೆಯನ್ನು ಪಡೆದ ಚಂದ್ರಿಕಾ ಸದ್ಯ ಬಿಗ್‌ಬಾಸ್‌ ಮನೆಯಲ್ಲಿ ಮಿಂಚುತ್ತಿದ್ದಾರೆ.. 

ಇದನ್ನೂ ಓದಿ-ಸ್ವಂತ ತಮ್ಮನ ಮೇಲೆಯೇ ಕೈ ಮಾಡಿದ ನಟ ಚಿರಂಜೀವಿ..! ರಾಮ-ಲಕ್ಷ್ಮಣರಂತಿದ್ದ ಅಣ್ಣ-ತಮ್ಮಂದಿರ ಮಧ್ಯ ಏನಾಯಿತು..?

ದೆಹಲಿಯ ಸೈನಿಕ್ ವಿಹಾರದಲ್ಲಿರುವ ಚಂದ್ರಿಕಾ ವಡಾ ಪಾವ್ ಹೆಚ್ಚು ಪ್ರಸಿದ್ಧವಾಗಿದೆ. ಇತ್ತೀಚೆಗೆ ದೀಕ್ಷಿತ್ ಅವರನ್ನು ಬಿಗ್ ಬಾಸ್ OTT 3 ರ ಮೊದಲ ಸ್ಪರ್ಧಿ ಎಂದು ಅಧಿಕೃತವಾಗಿ ಘೋಷಿಸಲಾಯಿತು. ಅಧಿಕೃತವಾಗಿ ಸುದ್ದಿ ಬಂದ ತಕ್ಷಣ ಸಾಮಾಜಿಕ ಜಾಲತಾಣದಲ್ಲಿ ಅವರ ಬಗೆಗಿನ ಚರ್ಚೆ ಶುರುವಾಗಿದೆ.. ಸಿಂಪಲ್ ಫುಡ್ ಸ್ಟಾಲ್ ನಡೆಸುತ್ತಿರುವ ಹುಡುಗಿಯೊಬ್ಬಳು ಟಿವಿ ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ..  

ಇತ್ತೀಚಿನ ಸಂಚಿಕೆಯಲ್ಲಿ, ಚಂದ್ರಿಕಾ ತಮ್ಮ ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ದೆಹಲಿಯ ರಸ್ತೆಗಳಲ್ಲಿ ವಡಾಪಾವ್ ಮಾರಾಟ ಮಾಡುವ ಮೂಲಕ ದಿನಕ್ಕೆ 40 ಸಾವಿರ ರೂಪಾಯಿ ಗಳಿಸುತ್ತೇನೆ ಎಂದು ಚಂದ್ರಿಕಾ ಹೇಳಿದ್ದಾರೆ. ಇದನ್ನು ಕೇಳಿದ ಸಹ ಸ್ಪರ್ಧಿಗಳು ಮೂಕವಿಸ್ಮಿತರಾಗಿದ್ದಾರೆ.. 

ಚಂದ್ರಿಕಾ ತನ್ನ ವಡಾ ಪಾವ್ ಫುಡ್ ಸ್ಟಾಲ್ ಅನ್ನು ಪ್ರಾರಂಭಿಸುವ ಮೊದಲು ಹಲ್ದಿರಾಮ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಮಗನಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಾಗ ಆರೈಕೆ ಮಾಡುವವರು ಯಾರೂ ಇಲ್ಲದ ಕಾರಣ ಕೆಲಸ ಬಿಟ್ಟಿದ್ದರು. ಆಕೆಯ ಪತಿ ರಾಪಿಡೋ ಓಡಿಸುತ್ತಾರೆ.. 

ಇದನ್ನೂ ಓದಿ-ಆ ಜಾಗದಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಬೇಕೆನಿಸಿತು.. ಆದರೆ..! ಸೂಪರ್‌ ಸ್ಟಾರ್‌ ನಟಿ ಶಾಕಿಂಗ್‌ ಹೇಳಿಕೆ

ಎಷ್ಟು ದಿನ ಹೀಗೆ ಬದುಕಬೇಕು ಎಂದು ಯೋಚಿಸುತ್ತಾ ವಡಾಪಾವ್ ವ್ಯಾಪಾರ ಶುರುಮಾಡಿದ ಚಂದ್ರಿಕಾ ಸದ್ಯ ಅದರಿಂದಲೇ ಸಾಕಷ್ಟು ಖ್ಯಾತಿ ಜೊತೆಗೆ ಹಣ್ಣವನ್ನು ಗಳಿಸಿದ್ದಾರೆ.. 

ಇನ್ನು ಚಂದ್ರಿಕಾ ದೀಕ್ಷಿತ್ ಅವರ ಫುಡ್‌ ವ್ಲಾಗ್ ವೀಡಿಯೊವನ್ನು ಫುಡ್ ವ್ಲಾಗರ್ ಅಮಿತ್ ಜಿಂದಾಲ್ ಪೋಸ್ಟ್ ಮಾಡಿದರು ಆಗ ಚಂದ್ರಿಕಾ ಅವರ ವ್ಯಾಪರವೂ ಹೆಚ್ಚಿ.. ಅವರ ಅಂಗಡಿ ಸಖತ್‌ ವೈರಲ್‌ ಆಯಿತು.. ಎಲ್ಲಕ್ಕಿಂತ ಮುಖ್ಯವಾಗಿ ಆ ವಿಡಿಯೋದಲ್ಲಿ ಚಂದ್ರಿಕಾ.. ವಡಾಪಾವ್ ಮಾಡುವ ವಿಧಾನ ಎಲ್ಲರನ್ನೂ ಆಕರ್ಷಿಸಿತ್ತು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News