Landslide In HP : ಹಿಮಾಚಲ ಪ್ರದೇಶದ ಕಿನ್ನೌರ್ ನಲ್ಲಿ ಭೂ ಕುಸಿತ , 45 ಮಂದಿ ನಾಪತ್ತೆ

ಭೀಕರ ಭೂಕುಸಿತದ   ಹಿನ್ನೆಲೆಯಲ್ಲಿ, ಸುಮಾರು 45 ಜನ ಅವಶೇಷಗಳ ಅಡಿಯಲ್ಲಿ ಸಿಲುಕಿ ಕೊಂಡಿದ್ದಾರೆ ಎನ್ನಲಾಗಿದೆ.  ಇವರೆಲ್ಲಾ ಹಿಮಾಚಲ್ ರೋಡ್ವೇಸ್ ನಲ್ಲಿ (Himachal Roadways) ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ

Written by - Ranjitha R K | Last Updated : Aug 11, 2021, 03:44 PM IST
  • ಕಿನ್ನೌರ್ ಜಿಲ್ಲೆಯ NH-5 ರಲ್ಲಿ ಭೂ ಕುಸಿತ
  • ಅವಶೇಷಗಳ ಅಡಿ ಸಿಲುಕಿರುವ ಬ್ಸ್ಫ್ ಮತ್ತು ವಾಹನಗಳು
  • ಸುಮಾರು 45 ಜನರು ಅವಶೇಷಗಳ ಅಡಿ ಸಿಲುಕಿರುವ ಶಂಕೆ
Landslide In HP : ಹಿಮಾಚಲ ಪ್ರದೇಶದ ಕಿನ್ನೌರ್ ನಲ್ಲಿ ಭೂ ಕುಸಿತ , 45 ಮಂದಿ ನಾಪತ್ತೆ  title=
ಕಿನ್ನೌರ್ ಜಿಲ್ಲೆಯ NH-5 ರಲ್ಲಿ ಭೂ ಕುಸಿತ (photo ANI)

ನವದೆಹಲಿ : ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ (Kinnaur District) ಭೂಕುಸಿತ ಸಂಭವಿಸಿದೆ. ಹಿಮಾಚಲದ ನಿಗುಲ್ಸೇರಿಯ ರಾಷ್ಟ್ರೀಯ ಹೆದ್ದಾರಿ -5 ರಲ್ಲಿ ಇದ್ದಕ್ಕಿದ್ದಂತೆ  ಭೂಕುಸಿತ (Landslide in Kinnaur) ಸಂಭವಿಸಿದೆ. ಬೆಟ್ಟದ ಒಂದು ಭಾಗ ಇದ್ದಕ್ಕಿದಂತೆ ಕುಸಿದಿದೆ. ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸುಗಳು ಸೇರಿದಂತೆ ಅನೇಕ ವಾಹನಗಳು ಸಿಲುಕಿಕೊಂಡಿವೆ. ಒಂದೇ ತಿಂಗಳಲ್ಲಿ ಕಿನ್ನೌರ್‌ನಲ್ಲಿ ಸಂಭವಿಸಿದ  ಎರಡನೇ ದೊಡ್ಡ ಭೂಕುಸಿತ ಇದಾಗಿದೆ. 

45 ಜನರು ಸಿಲುಕಿರುವ ಆತಂಕ : 
ಭೀಕರ ಭೂಕುಸಿತದ (Landslide in Kinnaur)  ಹಿನ್ನೆಲೆಯಲ್ಲಿ, ಸುಮಾರು 45 ಜನ ಅವಶೇಷಗಳ ಅಡಿಯಲ್ಲಿ ಸಿಲುಕಿ ಕೊಂಡಿದ್ದಾರೆ ಎನ್ನಲಾಗಿದೆ.  ಇವರೆಲ್ಲಾ ಹಿಮಾಚಲ್ ರೋಡ್ವೇಸ್ ನಲ್ಲಿ (Himachal Roadways) ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಮೂಲಗಳ ಪ್ರಕಾರ, ಅಪಘಾತದ ನಂತರ ಬಸ್ಸಿನ ಚಾಲಕ ಅಪಘಾತ ಸ್ಥಳದಿಂದ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಸ್ಥಳೀಯ ಆಡಳಿತ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. NDRF ತಂಡ ಕೂಡಾ ರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸಿದೆ. ಅಪಘಾತದ ಸ್ಥಳದಲ್ಲಿ ಈಗಲೂ ಕಲ್ಲುಗಳು ಬೀಳುತ್ತಿವೆ ಎನ್ನಲಾಗಿದೆ.  ಇದರಿಂದಾಗಿ ಪರಿಹಾರ ಕಾರ್ಯಕ್ಕೆ ತಡೆಯಾಗುತ್ತಿದೆ . 

 

ಇದನ್ನೂ ಓದಿ : ಅಧಿಕೃತವಾಗಿ ವಿಚ್ಛೇದನ ಪಡೆದ ಟಾಪರ್ ಐಎಎಸ್ ದಂಪತಿ ಟೀನಾ ಡಾಬಿ, ಅಥರ್‌ ಖಾನ್‌..!

 ಹರಿದ್ವಾರಕ್ಕೆ ತೆರಳುತ್ತಿದ್ದ  ಹರಿಯಾಣ ರೋಡ್ ವೇಸ್ ಬಸ್ : 
ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆಯ (HRTC)  ಬಸ್ ರೆಕಾಂಗ್ ಪಿಯೊದಿಂದ ಶಿಮ್ಲಾ ಮೂಲಕ ಹರಿದ್ವಾರಕ್ಕೆ ಹೋಗುತ್ತಿತ್ತು. ಆದರೆ  ಬಸ್ಸಿನಲ್ಲಿ ಎಷ್ಟು ಜನ ಪ್ರಯಾಣಿಸುತ್ತಿದ್ದರು ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲ. ವರದಿಗಳ ಪ್ರಕಾರ, ಬಸ್ಸಿನಲ್ಲಿ 40-45 ಜನರು ಇದ್ದರು ಎನ್ನಲಾಗಿದೆ. ಕಿನ್ನೌರ್ ಜಿಲ್ಲಾ ಕೇಂದ್ರ ರೆಕಾಂಗ್ ಪಿಯೊದಿಂದ 61 ಕಿಮೀ ದೂರದಲ್ಲಿರುವ ನಿಗುಲ್ಸಾರಿ ಬಳಿಯ ರಾಷ್ಟ್ರೀಯ ಹೆದ್ದಾರಿ 5 ರಲ್ಲಿ ಭೂಕುಸಿತ (Landslide) ಸಂಭವಿಸಿದೆ. 

NDRF ಪರಿಹಾರ ಮತ್ತು ರಕ್ಷಣೆಗಾಗಿ ಕರೆ ನೀಡಿದೆ
ಶಿಮ್ಲಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ (Jai Ram Thakur), ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ತ್ವರಿತಗೊಳಿಸುವಂತೆ ಕಿನ್ನೌರ್ ಆಡಳಿತಕ್ಕೆ ನಿರ್ದೇಶನ ನೀಡಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ, ಜನರನ್ನು ರಕ್ಷಿಸಲು NDRF ಅಣು ಕರೆಸಲಾಗಿದೆ. 

ಇದನ್ನೂ ಓದಿ : Jio ಕಂಪನಿಯ ಈ ಪ್ಲಾನ್ ನೊಂದಿಗೆ ಉಚಿತವಾಗಿ ಪಡೆಯಿರಿ ಮೊಬೈಲ್ ಫೋನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News