ರಾಂಚಿ: ಮೇವು ಹಗರಣದಲ್ಲಿ ದೋಷಿಯಾಗಿರುವ ಮಾಜಿ ಬಿಹಾರ ಮುಖ್ಯಮಂತ್ರಿ ಲಾಲು ಪ್ರಸಾದ್ ಅವರ ತಾತ್ಕಾಲಿಕ ಜಾಮೀನನ್ನು ಜುಲೈ 3 ರವರೆಗೆ ವಿಸ್ತರಿಸಿದೆ. ಅಲ್ಲದೆ ರಾಂಚಿ ಹೈಕೋರ್ಟ್ ಜೂನ್ 29 ರಂದು ಜಾಮೀನು ಅವಧಿಯ ವಿಸ್ತರಣೆ ಅರ್ಚಿಯನ್ನು ಸಹ ವಿಚಾರಣೆಗೆ ಒಳಪಡಿಸಲಿದೆ.
ಈ ಮುಂಚೆ ಮುಂಬೈ ಏಷ್ಯನ್ ಹಾರ್ಟ್ ಇನ್ಸ್ಟಿಟ್ಯೂಟ್ ನಲ್ಲಿ ಹೃದಯ ಸಂಬಂಧಿ ಖಾಯಿಲೆ ವಿಚಾರವಾಗಿ ಚಿಕಿತ್ಸೆಯನ್ನು ಪಡೆದುಕೊಂಡರು. ಲಾಲೂ ಪ್ರಸಾದ್ ಅವರನ್ನು ರಾಂಚಿಯ ವಿಶೇಷ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯವು ಏಪ್ರಿಲ್ನಲ್ಲಿ ಮೂರರಿಂದ 14 ವರ್ಷದ ವರೆಗೆ ಜೈಲು ಶಿಕ್ಷೆ ವಿಧಿಸಿತ್ತು.
37 ಆರೋಪಿಗಳಲ್ಲಿ ಒ.ಪಿ.ದಿವಾಕರ್ ಅವರಿಗೆ 14 ವರ್ಷಗಳ ಜೈಲು ಶಿಕ್ಷೆ ಮತ್ತು 2 ಕೋಟಿ ರೂ. ದಂಡ ವಿಧಿಸಲಾಗಿತ್ತು. 15 ಇತರ ಜನರಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು 1 ಕೋಟಿ ರೂ ದಂಡ ವಿಧಿಸಲಾಯಿತು.
ಪಾಟ್ನಾ ಹೈಕೋರ್ಟ್ ಆದೇಶದ ಅನುಸಾರ 1996 ರ ಏಪ್ರಿಲ್ 15 ರಂದು ಸಿಬಿಐ ಪ್ರಕರಣವನ್ನು ದಾಖಲಿಸಿದೆ.ದಮಕಾ ಜಿಲ್ಲೆಯಲ್ಲಿ 34.91 ಕೋಟಿ ರೂಪಾಯಿಗಳನ್ನು ಖಜಾನೆಯಲ್ಲಿ ತೆಗೆದುಕೊಂಡ ವಿಚಾರವಾಗಿ ಈ ಪ್ರಕರಣವನ್ನು ದಾಖಲಿಸಲಾಗಿತ್ತು.