ಆಫ್ಘಾನ್ ನಿಂದ ಜನರನ್ನು ಭಾರತಕ್ಕೆ ಸ್ಥಳಾಂತರಿಸುವ ಕೇಂದ್ರದ ಕಾರ್ಯ ಶ್ಲಾಘನೀಯ -ಪಿಣರಾಯಿ ವಿಜಯನ್

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾನುವಾರ (ಆಗಸ್ಟ್ 22) ಯುದ್ದ ಪೀಡಿತ ಅಫ್ಘಾನಿಸ್ತಾನದಿಂದ ಕೇರಳೀಯರು ಸೇರಿದಂತೆ ಭಾರತೀಯರನ್ನು ಸ್ಥಳಾಂತರಿಸುವ ಕೇಂದ್ರದ ಪ್ರಯತ್ನಗಳು ಶ್ಲಾಘನೀಯ ಎಂದು ಹೇಳಿದರು.

Last Updated : Aug 22, 2021, 11:09 PM IST
  • ಭಾನುವಾರ, ಭಾರತವು ಮೂರು ವಿವಿಧ ವಿಮಾನಗಳಲ್ಲಿ ತನ್ನ 329 ಪ್ರಜೆಗಳು ಮತ್ತು ಇಬ್ಬರು ಅಫ್ಘಾನ್ ಶಾಸಕರು ಸೇರಿದಂತೆ ಕನಿಷ್ಠ 400 ಜನರನ್ನು ಸ್ಥಳಾಂತರಿಸಿದೆ ಎಂದು ಪಿಟಿಐ ವರದಿ ಮಾಡಿದೆ.
  • ಭಾರತೀಯ ವಾಯುಪಡೆಯ (IAF) C-17 ಹೆವಿ-ಲಿಫ್ಟ್ ಮಿಲಿಟರಿ ಸಾರಿಗೆ ವಿಮಾನದಲ್ಲಿ ಸುಮಾರು 107 ಭಾರತೀಯರು ಮತ್ತು 23 ಅಫಘಾನ್ ಸಿಖ್ಖರು ಮತ್ತು ಹಿಂದೂಗಳನ್ನು ಕಾಬೂಲ್ ನಿಂದ ದೆಹಲಿಯ ಸಮೀಪದ ಹಿಂಡನ್ ವಾಯುನೆಲೆಗೆ ಕರೆತರಲಾಯಿತು.
ಆಫ್ಘಾನ್ ನಿಂದ ಜನರನ್ನು ಭಾರತಕ್ಕೆ ಸ್ಥಳಾಂತರಿಸುವ ಕೇಂದ್ರದ ಕಾರ್ಯ ಶ್ಲಾಘನೀಯ -ಪಿಣರಾಯಿ ವಿಜಯನ್  title=
ಸಂಗ್ರಹ ಚಿತ್ರ

ನವದೆಹಲಿ: ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾನುವಾರ (ಆಗಸ್ಟ್ 22) ಯುದ್ದ ಪೀಡಿತ ಅಫ್ಘಾನಿಸ್ತಾನದಿಂದ ಕೇರಳೀಯರು ಸೇರಿದಂತೆ ಭಾರತೀಯರನ್ನು ಸ್ಥಳಾಂತರಿಸುವ ಕೇಂದ್ರದ ಪ್ರಯತ್ನಗಳು ಶ್ಲಾಘನೀಯ ಎಂದು ಹೇಳಿದರು.

ಆಗಸ್ಟ್ 15 ರಂದು ಕಾಬೂಲ್ ಅನ್ನು ಉಗ್ರಗಾಮಿ ಗುಂಪು ವಶಪಡಿಸಿಕೊಂಡಾಗಿನಿಂದ ತಾಲಿಬಾನ್ ಭಯದಲ್ಲಿದ್ದ ಅಫ್ಘಾನಿಸ್ತಾನದಿಂದ ಭಾರತೀಯರನ್ನು ಸ್ಥಳಾಂತರಿಸುವ ಮತ್ತು ಸ್ವದೇಶಕ್ಕೆ ಕರೆತಂದಿದ್ದಕ್ಕಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಜಯನ್ (Pinarayi Vijayan) ಟ್ವೀಟ್ ನಲ್ಲಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಇದನ್ನೂ ಓದಿ: Controversy On Vaccine: 'ಲಸಿಕೆಯಲ್ಲಿ ಹಸುವಿನ ರಕ್ತ, ಭಾರತದಲ್ಲಿ ಬಳಕೆ ಬೇಡ

ಭಾನುವಾರ, ಭಾರತವು ಮೂರು ವಿವಿಧ ವಿಮಾನಗಳಲ್ಲಿ ತನ್ನ 329 ಪ್ರಜೆಗಳು ಮತ್ತು ಇಬ್ಬರು ಅಫ್ಘಾನ್ ಶಾಸಕರು ಸೇರಿದಂತೆ ಕನಿಷ್ಠ 400 ಜನರನ್ನು ಸ್ಥಳಾಂತರಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಭಾರತೀಯ ವಾಯುಪಡೆಯ (IAF) C-17 ಹೆವಿ-ಲಿಫ್ಟ್ ಮಿಲಿಟರಿ ಸಾರಿಗೆ ವಿಮಾನದಲ್ಲಿ ಸುಮಾರು 107 ಭಾರತೀಯರು ಮತ್ತು 23 ಅಫಘಾನ್ ಸಿಖ್ಖರು ಮತ್ತು ಹಿಂದೂಗಳನ್ನು ಕಾಬೂಲ್ ನಿಂದ ದೆಹಲಿಯ ಸಮೀಪದ ಹಿಂಡನ್ ವಾಯುನೆಲೆಗೆ ಕರೆತರಲಾಯಿತು.

ಇದನ್ನೂ ಓದಿ: "ಕೇರಳ ಬಿಜೆಪಿಗೆ ಸ್ಥಳವಲ್ಲ, ಕೋಮುವಾದ ಅಥವಾ ಧಾರ್ಮಿಕ ವಿಭಜನೆಯನ್ನು ಸ್ವೀಕರಿಸುವುದಿಲ್ಲ"

ಭಾರತವು ಅಮೆರಿಕ, ಕತಾರ್, ತಜಕಿಸ್ತಾನ್ ಮತ್ತು ಇತರ ಹಲವು ಸ್ನೇಹಪರ ದೇಶಗಳೊಂದಿಗೆ ಸಮನ್ವಯದಿಂದ ತೆರವು ಕಾರ್ಯಾಚರಣೆಗಳನ್ನು ಜಾರಿಗೊಳಿಸಿತು.ಐಎಎಫ್ ವಿಮಾನವು ಹಿಂಡನ್ ವಾಯುನೆಲೆಯಲ್ಲಿ ಬಂದಿಳಿದ ನಂತರ ಸ್ಥಳಾಂತರಿಸಲ್ಪಟ್ಟ ಇಬ್ಬರು ಅಫ್ಘಾನ್ ಶಾಸಕರಲ್ಲಿ ಒಬ್ಬರಾದ ನರೇಂದರ್ ಸಿಂಗ್ ಖಾಲ್ಸಾ ಕುಸಿದುಬಿದ್ದರು. ಕಳೆದ 20 ವರ್ಷಗಳಲ್ಲಿ ಅಫ್ಘಾನಿಸ್ತಾನದಲ್ಲಿ ಮಾಡಿದ ಪ್ರಗತಿಯನ್ನು ಕಳೆದುಕೊಂಡಿದೆ ಎಂದು ಅವರು ವಿಷಾದಿಸಿದರು. "ಕಳೆದ 20 ವರ್ಷಗಳಲ್ಲಿ ನಿರ್ಮಿಸಿದ ಎಲ್ಲವೂ ಈಗ ಮುಗಿದಿದೆ. ಈಗ ಶೂನ್ಯವಾಗಿದೆ, "ಎಂದು ಅವರು ಕಣ್ಣೀರು ಸುರಿಸಿದ್ದಾರೆ.

ಇದನ್ನೂ ಓದಿ: COVID-19: ಕೇಂದ್ರದಿಂದ 66 ಕೋಟಿ ಡೋಸ್‌ಗಳಷ್ಟು ಲಸಿಕೆ ಖರೀದಿಗೆ ಆರ್ಡರ್..!

ಸರ್ಕಾರಿ ಮೂಲಗಳ ಪ್ರಕಾರ, ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ತನ್ನ ಪ್ರಜೆಗಳನ್ನು ಸ್ಥಳಾಂತರಿಸಲು ಭಾರತಕ್ಕೆ ಕಾಬೂಲ್‌ನಿಂದ ದಿನಕ್ಕೆ ಎರಡು ವಿಮಾನಗಳನ್ನು ನಡೆಸಲು ಅನುಮತಿ ನೀಡಲಾಗಿದೆ.

ತಾಲಿಬಾನ್ ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ ಸಾವಿರಾರು ಜನರು ಅಫ್ಘಾನಿಸ್ತಾನವನ್ನು ತೊರೆಯಲು ಹತಾಶ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅನೇಕ ದೇಶಗಳು ತಮ್ಮ ಸಿಕ್ಕಿಬಿದ್ದ ನಾಗರಿಕರನ್ನು ಮತ್ತು ಅಫಘಾನ್ ಪ್ರಜೆಗಳನ್ನು ಹಿಂಸಾತ್ಮಕ ಉಗ್ರಗಾಮಿ ಗುಂಪಿನಿಂದ ಸ್ಥಳಾಂತರಿಸುತ್ತಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News