ಚೆನ್ನೈ: ಕಳೆದ ಎರಡು ವಾರಗಳಿಂದ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರ ಆರೋಗ್ಯ ಚಿಂತಾಜನಕವಾಗಿದ್ದು, ಮುಂದಿನ 24 ಗಂಟೆ ಅವರು ಜೀವರಕ್ಷಕ ಸಾಧನ ಮತ್ತು ಚಿಕಿತ್ಸೆಗೆ ಹೇಗೆ ಸ್ಪಂದಿಸುತ್ತಾರೆ ಎಂಬುದು ಅವರ ಆರೋಗ್ಯವನ್ನು ನಿರ್ಧರಿಸಲಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಅರವಿಂದನ್ ಸೆಲ್ವರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸ್ಪತೆ ಸೋಮವಾರ ರಾತ್ರಿ ಈ ವರದಿ ಬಿಡುಗಡೆ ಮಾಡಿದ ಬಳಿಕ ತಮಿಳುನಾಡಿನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕರುಣಾನಿಧಿ ಅವರ ಅಂಗಾಂಗಗಳನ್ನು ಸಹಜ ಸ್ಥಿತಿಯಲ್ಲಿಡುವುದು ಸವಾಲಾಗಿದೆ. ಆಸ್ಪತ್ರೆಯ ತಜ್ಞರ ತಂಡ ಅವರ ಆರೋಗ್ಯವನ್ನು ಕ್ಷಣಕ್ಷಣಕ್ಕೂ ಗಮನಿಸುತ್ತಿದೆ ಎಂದು ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜ್ವರ ಹಾಗೂ ಮೂತ್ರನಾಳ ಸೋಂಕಿನಿಂದ ಬಳಲುತ್ತಿದ್ದ 94 ವರ್ಷದ ಎಂ.ಕರುಣಾನಿಧಿ ಅವರನ್ನು ಜುಲೈ 28ರಂದು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು.
Latest visuals from outside Chennai's Kauvery hospital where former Tamil Nadu CM M Karunanidhi is undergoing treatment. The hospital stated a decline in his medical condition yesterday pic.twitter.com/PXCIVPoMzo
— ANI (@ANI) August 7, 2018
DMK leader Kanimozhi meets people gathered outside Chennai's Kauvery hospital where her father and former Tamil Nadu CM M Karunanidhi is undergoing treatment. The hospital stated a decline in his medical condition yesterday. pic.twitter.com/l87nQ0PwJf
— ANI (@ANI) August 7, 2018