ಶಬರಿಮಲೈ: ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದ ಸಂತೋಷ್ ಹೆಗಡೆ

ಕೇರಳದ ಶಬರಿಮಲೈ ದೇವಸ್ತಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೋ ಪ್ರವೆಶಿಸಿಸಲು ಅವಕಾಶ ನೀಡಿರುವ ತೀರ್ಪನ್ನು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ  ಎನ್. ಸಂತೋಷ್ ಹೆಗ್ಡೆ ಸ್ವಾಗತಿಸಿದ್ದಾರೆ.

Last Updated : Sep 28, 2018, 08:02 PM IST
ಶಬರಿಮಲೈ: ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದ ಸಂತೋಷ್ ಹೆಗಡೆ title=

ನವದೆಹಲಿ: ಕೇರಳದ ಶಬರಿಮಲೈ ದೇವಸ್ತಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೋ ಪ್ರವೆಶಿಸಿಸಲು ಅವಕಾಶ ನೀಡಿರುವ ತೀರ್ಪನ್ನು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ  ಎನ್. ಸಂತೋಷ್ ಹೆಗ್ಡೆ ಸ್ವಾಗತಿಸಿದ್ದಾರೆ.

ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸಂತೋಷ್ ಹೆಗಡೆ "ನಾನು ಈ ತೀರ್ಪನ್ನು  ಸಂಪೂರ್ಣವಾಗಿ ಒಪ್ಪುತ್ತೇನೆ. ದಶಕಗಳಿಂದಲೂ ಮಹಿಳೆಯರು ತಾರತಮ್ಯಕ್ಕೊಳಗಾಗಿದ್ದಾರೆ ದೇವರು ಪುರುಷರಿಗೆ ಮತ್ತು ಮಹಿಳೆಗೆ ಸಮಾನವಾಗಿದ್ದಾನೆ " ಎಂದು ತಿಳಿಸಿದ್ದಾರೆ . 

ದೇವಸ್ಥಾನಕ್ಕೆ ಮಹಿಳೆಯರನ್ನು ನಿಷೇಧಿಸುವುದಕ್ಕೆ ಅವರ ಜೈವಿಕ  ವ್ಯತ್ಯಾಸಗಳು ಕಾರಣವಾಗಬಾರದು ಎಂದು ಹೇಳಿದ ಹೆಗಡೆ ಇತ್ತೀಚಿಗೆ ಸುಪ್ರೀಂ ಕೋರ್ಟ್ ಕೆಲವು ಧನಾತ್ಮಕ ಮತ್ತು ಉತ್ತಮ ತೀರ್ಪುಗಳನ್ನು ನೀಡುತ್ತಿದೆ ಎಂದು ಶ್ಲಾಘಿಸಿದರು.

ಮುಖ್ಯ ನ್ಯಾಯಮೂರ್ತಿ ದಿಪಾಕ್ ಮಿಶ್ರಾ ಅವರ ನೇತೃತ್ವದ ಸಂವಿಧಾನಿಕ ಪೀಠವು ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿಷೇಧ ಲಿಂಗ ತಾರತಮ್ಯ ಮತ್ತು ಹಿಂದೂ ಮಹಿಳೆಯರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಅವರು ತೀರ್ಪಿನಲ್ಲಿ ತಿಳಿಸಿದ್ದಾರೆ.

Trending News