ನವದೆಹಲಿ: ನೀವು ಸಹ Jio ನ ಸಂಖ್ಯೆಯನ್ನು ಬಳಸುತ್ತಿದ್ದರೆ, ನಿಮಗೂ ಸಹ ಕೋಟ್ಯಾಧಿಪತಿಯಾಗುವ ಅವಕಾಶವಿದೆ. ನೀವು ಮನೆಯಲ್ಲಿ ಕುಳಿತು ಜಿಯೋ ಸಂಖ್ಯೆ ಸಹಾಯದಿಂದ ಲಕ್ಷಾಂತರ ರೂ. ಬಹುಮಾನಗಳನ್ನು ಗೆಲ್ಲಲು ಸಾಧ್ಯ. ವಾಸ್ತವವಾಗಿ, ಸೋನಿ ಚಾನೆಲ್ ನಲ್ಲಿ ಕೌನ್ ಬನೇಗ ಕರೋಡ್ಪತಿ(KBC 10) ಕಾರ್ಯಕ್ರಮದ 10ನೇ ಸೀಸನ್ ಪ್ರಾರಂಭಿಸಿದೆ. KBC ಯ 10 ನೇ ಸೀಸನ್ ನಲ್ಲಿ ಜಿಯೋ ಸಂಖ್ಯೆ ಹೊಂದಿರುವ ಗ್ರಾಹಕರಿಗೆ ಲಕ್ಷಾಂತರ ರೂ. ಬಹುಮಾನ ಗಳಿಸುವ ಅವಕಾಶವಿದೆ. ಒಂದು ವೇಳೆ ನಿಮ್ಮ ಬಳಿಯೂ ಜಿಯೋ ನಂಬರ್ ಇದ್ದಲ್ಲಿ ನೀವು ಮನೆಯಲ್ಲೇ ಕುಳಿತು ಲಕ್ಷಾಂತರ ರೂ. ಬಹುಮಾನ ಗಳಿಸುವುದು ಹೇಗೆ ಎಂಬುದನ್ನು ತಿಳಿಯಿರಿ.
ಜಿಯೋ ಬಳಕೆದಾರರು ಪ್ರಶಸ್ತಿಯನ್ನು ಗೆಲ್ಲಲು ಜಿಯೋ ಕೆಬಿಸಿ ಪೇ(Jio KBC Pay Along) ಅನ್ನು ಆಡಬೇಕು, ನೀವು ಇದನ್ನು ಮಾಡಿದರೆ ನೀವು ಲಕ್ಷಾಂತರ ರೂ. ಬಹುಮಾನಗಳನ್ನು ಗೆಲ್ಲಲು ಸಾಧ್ಯ. ಕೆಬಿಸಿಯ ಒಂಬತ್ತನೇ ಸೀಸನ್ ನಂತೆಯೇ ಕಾರ್ಯಕ್ರಮ ಸಂದರ್ಭದಲ್ಲಿ ಮೊಬೈಲ್ನಲ್ಲಿ ಜಿಯೋಚಾಟ್ ಆಪ್(Jiochat App) ಮೂಲಕ ಪ್ರಶ್ನೆಗಳಿಗೆ ಉತ್ತರಿಸುವುದರ ಜೊತೆಗೆ ಹಾಟ್ ಸೀಟ್ ಅನ್ನು ತಲುಪುವ ಮೂಲಕ ನೀವು ಬಹುಮಾನ ಗೆಲ್ಲಬಹುದು. ಇದಲ್ಲದೆ ನೀವು ಹಾಟ್ ಸೀಟ್ ನಲ್ಲಿ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಕೋಟ್ಯಾಧಿಪತಿಯಾಗಬಹುದು.
Pic: www.kbcliv.in
Jio KBC Pay Alongನಲ್ಲಿ ಈ ರೀತಿ ಪಾಲ್ಗೊಳ್ಳಿ:
- ಎಲ್ಲಕ್ಕಿಂತ ಮೊದಲು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಜಿಯೋಚಾಟ್ ಆಪ್(Jiochat App) ಅನ್ನು ಡೌನ್ಲೋಡ್ ಮಾಡಿ.
- ಆಪ್ ಡೌನ್ಲೋಡ್ ಆದ ನಂತರ ಇದರಲ್ಲಿ ಹೆಸರು, ಜನ್ಮ ದಿನಾಂಕ ಮತ್ತು ಫೋಟೋ ಸೇರಿದಂತೆ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ರಿಜಿಸ್ಟಾರ್ ಮಾಡಿಕೊಳ್ಳಿ.
- ಈ ರೀತಿ ಮಾಡಿದ ನಂತರ ನೀವು ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುತ್ತದೆ. ಈ ಎಲ್ಲಾ ಉತ್ತರಗಳನ್ನು ನೀವು ಲೈವ್ ಪ್ರೋಗ್ರಾಂ ಸಮಯದಲ್ಲಿ ನೀಡಬೇಕಾಗಿದೆ.
- ಇಲ್ಲಿ ಸರಿಯಾದ ಉತ್ತರಗಳನ್ನು ಆಧರಿಸಿ, ಬಳಕೆದಾರರಿಗೆ ಅಂಕಗಳನ್ನು ನೀಡಲಾಗುತ್ತದೆ. ಈ ಅಂಶಗಳನ್ನು ಆಧರಿಸಿ, ನಿಮ್ಮನ್ನು ಹಾಟ್ ಸೀಟ್ ಗೆ ಕರೆಯಲಾಗುವುದು.
- ಜಿಯೋ ಮನೆಯಲ್ಲೇ ಕುಳಿತು ಜಾಕ್ ಪಾಟ್ ಗೆಲ್ಲಿ, ಇದರಲ್ಲಿ ಒಂದೇ ಬಾರಿಗೆ 30 ಲಕ್ಷ ಬಳಕೆದಾರರು ಭಾಗವಹಿಸಲು ಸಾಧ್ಯವಾಗುತ್ತದೆ.
Pic: www.kbcliv.in
ಕೌನ್ ಬನೇಗ ಕರೋಡ್ಪತಿ ಸೀಸನ್ 10 ರಲ್ಲಿ ಪಾಲ್ಗೊಳ್ಳಲು ಜೂನ್ 6, ರಾತ್ರಿ 08:30 ರಿಂದ ರಿಜಿಸ್ಟ್ರೇಷನ್ ಪ್ರಾರಂಭವಾಗಿದೆ. ಎಸ್ಎಂಎಸ್, ಕಾಲ್, ಕೆಬಿಸಿ ಮೊಬೈಲ್ ಆಪ್, ಆನ್ಲೈನ್ ಮೂಲಕ ನೋಂದಾಯಿಸಬಹುದಾಗಿದೆ. ಆನ್ಲೈನ್ ನೋಂದಾಯಿಸಲು, ನೀವು (https://kbcliv.in/online-registration/) ಹೋಗಬೇಕಾಗುತ್ತದೆ. ನೋಂದಾಯಿತ ಬಳಕೆದಾರರಿಗೆ ಇ-ಮೇಲ್ ಮತ್ತು SMS ಮೂಲಕ ಮುಂಬರಲಿರುವ ಕಾರ್ಯಕ್ರಮಗಳ ದಿನಾಂಕಗಳ ಬಗ್ಗೆ ತಿಳಿಸಲಾಗುವುದು.
ಒಂದು ವೇಳೆ ನಿಮ್ಮಲ್ಲಿ ಜಿಯೋ ಬದಲು ಬೇರೆ ಕಂಪನಿಯ ಕನೆಕ್ಷನ್ ಇದ್ದಲ್ಲಿ, ನೀವು Jio KBC Play Along ನಲ್ಲಿ ಆಡಲು ಸಾಧ್ಯವಿಲ್ಲ. ಅದೇ ರೀತಿ ಬೇರೆ ಟೆಲಿಕಾಂ ಕಂಪನಿಗಳ ಬಳಕೆದಾರರು ಎಸ್ಎಂಎಸ್, ಕಾಲ್, ಕೆಬಿಸಿ ಮೊಬೈಲ್ ಆಪ್, ವೆಬ್ಸೈಟ್ ಅಥವಾ IVR ಸಿಸ್ಟಂ ಮತ್ತು ಸೋನಿ ಲೈವ್ ಅಪ್ಲಿಕೇಶನ್ನ ಮೂಲಕ ಭಾಗವಹಿಸಿ ಬಳಕೆದಾರರು ಬಹುಮಾನ ಗೆಲ್ಲಲು ಅವಕಾಶವಿದೆ.