Jawad Cyclone Updates - ಬಂಗಾಳಕೊಲ್ಲಿಯಲ್ಲಿ (Bay Of Bengal) ರೂಪುಗೊಂಡ ಚಂಡಮಾರುತ 'ಜವಾದ್' ಶುಕ್ರವಾರ ಆಳವಾದ ಒತ್ತಡದ ಪ್ರದೇಶದಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದು ಮುಂದಿನ 12 ಗಂಟೆಗಳಲ್ಲಿ ಚಂಡಮಾರುತವಾಗಿ ಮತಷ್ಟು ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ. ಈ ಚಂಡಮಾರುತವು ಆಂಧ್ರಪ್ರದೇಶದ (Andhra Pradesh) ಉತ್ತರ ಕರಾವಳಿ ಪ್ರದೇಶಗಳು ಮತ್ತು ಒಡಿಶಾದ (Odisha) ದಕ್ಷಿಣ ಭಾಗದ ಮೂಲಕ ಶನಿವಾರ (ಡಿಸೆಂಬರ್ 4) ಬೆಳಗ್ಗೆ ಹಾದುಹೋಗಬಹುದು ಎಂದು ಹವಾಮಾನ ಇಲಾಖೆ (IMD) ಹೇಳಿದೆ. ಈ ಚಂಡಮಾರುತದಿಂದ ದಕ್ಷಿಣ ಬಂಗಾಳದ ಹಲವು ಜಿಲ್ಲೆಗಳಲ್ಲಿ ಬಲವಾದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಸಮುದ್ರದಲ್ಲಿ ಜೀವ ಮತ್ತು ಆಸ್ತಿಯನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಲು
ಕೋಸ್ಟ್ ಗಾರ್ಡ್ (Indian Coast Guard) ಪ್ರಾರಂಭಿಸಿದೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹವಾಮಾನದ ಬಗ್ಗೆ ಎಚ್ಚರಿಸಲು ಅದು ತನ್ನ ಹಡಗುಗಳು ಮತ್ತು ವಿಮಾನಗಳನ್ನು ಬಳಸಿಕೊಂಡಿದೆ. ಗುರುವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಬಂಗಾಳಕೊಲ್ಲಿಯಲ್ಲಿ ಉಂಟಾಗಲಿರುವ 'ಜವಾದ್' ಚಂಡಮಾರುತವನ್ನು ಎದುರಿಸಲು ಸಂಬಂಧಿಸಿದ ರಾಜ್ಯಗಳು, ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಏಜೆನ್ಸಿಗಳ ಸಿದ್ಧತೆಯನ್ನು ಪರಿಶೀಲಿಸಿದ್ದಾರೆ. ಮತ್ತು ಜೀವ ಮತ್ತು ಆಸ್ತಿಯ ರಕ್ಷಣೆಯನ್ನು ಖಚಿತಪಡಿಸಲು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪಿಎಂಒ ಹೊರಡಿಸಿರುವ ಹೇಳಿಕೆ ಪ್ರಕಾರ, ಜನರನ್ನು ಸುರಕ್ಷಿತ ತಾಣಗಳಿಗೆ ಕರೆತರಲು ಅಗತ್ಯ ಕ್ರಮ ಕೈಗೊಳ್ಳಬೇಕು, ವಿದ್ಯುತ್, ದೂರಸಂಪರ್ಕ, ಆರೋಗ್ಯ ಮತ್ತು ಕುಡಿಯುವ ನೀರಿನಂತಹ ಅಗತ್ಯ ಸೇವೆಗಳ ನಿರ್ವಹಣೆಯನ್ನು ಖಚಿತಪಡಿಸಬೇಕು ಮತ್ತು ಯಾವುದೇ ವ್ಯತ್ಯಯ ಉಂಟಾದರೆ ತಕ್ಷಣವೇ ಅವುಗಳನ್ನು ಪುನಃಸ್ಥಾಪಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಧಾನಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಮಧ್ಯರಾತ್ರಿಯ ಬಳಿಕ 32 ಕಿ.ಮೀ ಪ್ರತಿಗಂಟೆಯ ವೇಗದಿಂದ ಮುಂದುವರೆಯುತ್ತಿದೆ
ಈ ಕುರಿತು ಹವಾಮಾನ ಇಲಾಖೆ ಹೊರಡಿಸಿರುವ ಬುಲೆಟಿನ್ ಪ್ರಕಾರ, ಆಗ್ನೇಯ ಬಂಗಾಳ ಕೊಲ್ಲಿಯಲ್ಲಿನ ಒತ್ತಡವು ಮಧ್ಯರಾತ್ರಿಯ ನಂತರ 32 ಕಿಮೀ ವೇಗದಲ್ಲಿ ವಾಯುವ್ಯಕ್ಕೆ ಚಲಿಸಿದೆ. ಈ ಡೀಪ್ ಡಿಪ್ರೆಶನ್ ವೇಗ ಪಡೆದುಕೊಂಡಿದ್ದು ಹಾಗೂ ಶುಕ್ರವಾರ ಬೆಳಗ್ಗೆ 5.30ರ ಸುಮಾರಿಗೆ ಪಶ್ಚಿಮ ಮಧ್ಯ ಹಾಗೂ ಅದಕ್ಕೆ ಹೊಂದಿಕೊಂಡಂತೆ ಇರುವ ದಕ್ಷಿಣ ಬಂಗಾಳ ಕೊಲ್ಲಿಯಲ್ಲಿ ಸುಮಾರು 580 ಕಿ.ಮೀ ದೂರದಲ್ಲಿ ದಕ್ಷಿಣಕ್ಕೆ ಕೇಂದ್ರಿಕೃತವಾಗಿದೆ. ಇದು ವಿಶಾಖಾಪಟ್ಟಣಂನ ದಕ್ಷಿಣ ಪೂರ್ವ, ಗೋಪಾಲ್ ಪುರ ನಿಂದ ಸುಮಾರು 670 ಕಿ.ಮೀ ದಕ್ಷಿಣ-ದಕ್ಷಿಣ ಪೂರ್ವ ಹಾಗೂ ಪಾರಾದೀಪ್ ನಿಂದ ಸುಮಾರು 760 ಕಿ.ಮೀ ದಕ್ಷಿಣ-ದಕ್ಷಿಣ ಪಶ್ಚಿಮಕ್ಕೆ ಬದಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಹವಾಮಾನ ಇಲಾಖೆ ಜವಾದ್ ಚಂದ ಮಾರುತ ಶನಿವಾರ ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿ, ಉತ್ತರ ಆಂಧ್ರಪ್ರದೇಶದ ಕರಾವಳಿ ಪ್ರದೇಶ-ದಕ್ಷಿಣ ಓಡಿಷಾ ತೀರಕ್ಕೆ ಇದು ತಲುಪುವ ಸಾಧ್ಯತೆ ಇದೆ ಎಂದಿದೆ. ಈ ಚಂಡಮಾರುತದ ಪ್ರಭಾವದಿಂದ ಶನಿವಾರ ಪೂರ್ವ ಮಿಡ್ನಾಪುರ್ ನ ಒಂದು ಅಥವಾ ಎರಡು ಪ್ರದೇಶಗಳಲ್ಲಿ ಭಾರಿ ಹಾಗೂ ಅತಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ.
ಇದನ್ನೂ ಓದಿ-Omicron variant : ರಾಜ್ಯದಲ್ಲಿ ಓಮಿಕ್ರಾನ್ ಪತ್ತೆ : ಇಂದು ಉನ್ನತ ಮಟ್ಟದ ಸಭೆ ಕರೆದ ಸಿಎಂ ಬೊಮ್ಮಾಯಿ
ಔಷಧಿಗಳ ಸಮರ್ಪಕ ಲಭ್ಯತೆ ಮತ್ತು ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಔಷಧಿಗಳ ಅಡೆತಡೆಯಿಲ್ಲದ ಸಾಗಣೆಯನ್ನು ಖಚಿತಪಡಿಸಿಕೊಳ್ಳಲು ರಾತ್ರಿಯಿಡೀ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲು ಪ್ರಧಾನಮಂತ್ರಿ ನಿರ್ದೇಶನ ನೀಡಿದ್ದಾರೆ. ಸಭೆಯಲ್ಲಿ ಪ್ರಧಾನ ಮಂತ್ರಿಗಳ ಪ್ರಧಾನ ಸಲಹೆಗಾರ ಪಿಕೆ ಮಿಶ್ರಾ, ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕೇಂದ್ರ ಗೃಹ ಕಾರ್ಯದರ್ಶಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಮಹಾನಿರ್ದೇಶಕರು ಮತ್ತು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕರು ಮತ್ತು ಇತರ ಕೆಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ-ಸಾಮಾನ್ಯ ಜನರಿಗೆ ಬಿಗ್ ಶಾಕ್ : ಅಡುಗೆ ಎಣ್ಣೆ ಬೆಲೆಯಲ್ಲಿ ಭಾರಿ ಏರಿಕೆ!
ಈ ಮೊದಲು ಜವಾದ್ ಚಂಡಮಾರುತ ಕುರಿತು ಅಲರ್ಟ್ ನೀಡಿದ್ದ ಭಾರತೀಯ ಹವಾಮಾನ ಇಲಾಖೆ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶದಲ್ಲಿ ತೀವ್ರಗೊಳ್ಳುವ ನಿರೀಕ್ಷೆಯಿದೆ ಮತ್ತು ಡಿಸೆಂಬರ್ 4 ರ ಬೆಳಿಗ್ಗೆ ಗಂಟೆಗೆ ಗರಿಷ್ಠ 100 ಕಿಮೀ ವೇಗದಲ್ಲಿ ಗಾಳಿಯೊಂದಿಗೆ ಆಂಧ್ರಪ್ರದೇಶ-ಒಡಿಶಾದ ಉತ್ತರಕ್ಕೆ ಚಲಿಸುವ ನಿರೀಕ್ಷೆಯಿದೆ ಎಂದಿತ್ತು. ಇದರಿಂದಾಗಿ ಆಂಧ್ರಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ-ಟೀಂ ಇಂಡಿಯಾಗೆ ಬಹು ದೊಡ್ಡ ಆಘಾತ : ಈ 3 ಸ್ಟಾರ್ ಆಟಗಾರರು ಪ್ಲೇಯಿಂಗ್ 11ನಿಂದ ಹೊರಕ್ಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.