ನವ ದೆಹಲಿ: ಉದ್ಯಮದ ಉದ್ದೇಶಕ್ಕೆ ಬ್ಯಾಂಕ್ ಗಳಿಂದ ಬಹುಕೋಟಿ ಸಾಲ ಪಡೆದು ಇನ್ನೂ ತೀರಿಸದೆ ಇರುವ ವಾಣಿಜ್ಯೋದ್ಯಮಿಗಳಿಗೆ ವಿತ್ತ ಸಚಿವ ಅರುಣ್ ಜೇಟ್ಲಿ ಇಂದು ಖಡಕ್ ಸೂಚನೆ ನೀಡಿದ್ದಾರೆ.
ಬಹುತೇಕ ಉದ್ಯಮಿಗಳು ವಾಣಿಜ್ಯ ಉದ್ದೇಶಕ್ಕಾಗಿ ಸಾಲ ಪಡೆದು ಇನ್ನೂ ಸಾಲವನ್ನು ಬಾಕಿ ಉಳಿಸಿಕೊಂಡಿದ್ದಾರೆ. ಇಂದಿನವರೆಗೂ ಜಮಾ ಮಾಡಬೇಕಿರುವ ಬಾಕಿಯನ್ನು ಉದ್ಯಮಿಗಳು ಪಾವತಿ ಮಾಡಬೇಕಿದ್ದು, ಬಾಕಿ ಪಾವತಿ ಮಾಡದಿದ್ದರೆ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜೇಟ್ಲಿ ತಿಳಿಸಿದ್ದಾರೆ.
ರಾಷ್ಟ್ರದ 10 ಪ್ರಮುಖ ಉದ್ಯಮಿಗಳು ಸುಮಾರು 2 ಲಕ್ಷ ಕೋಟಿಗೂ ಅಧಿಕ ಸಾಲವನ್ನು ಪಾವತಿಸದೇ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಸಾಲ ಬಾಕಿ ಉಳಿಸಿಕೊಂಡಿರುವ ಇತರ ಉದ್ಯಮಮಿಗಳ ವಿರುದ್ದವೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಉದ್ಯಮಿಗಳು ಸಾಲ ಮರುಪಾವತಿ ಮಾಡುವಲ್ಲಿ ವಿಫಲರಾದಲ್ಲಿ ಅವರನ್ನು ಕಾನೂನಿನ ಚೌಕಟ್ಟಿನಲ್ಲಿ ಕೆಳಗಿಳಿಸಿ ಇತರ ಅರ್ಹ ಅಭ್ಯರ್ಥಿಯನ್ನು ಅವರ ಸ್ಥಾನದಲ್ಲಿ ಕೂದಿಸಲಾಗುವುದು ಎಂದು ವಿತ್ತ ಸಚಿವಾಲಯದಿಂದ ಮಾಹಿತಿ ಲಭಿಸಿದೆ.