'ಪ್ರಧಾನಿ ಮೋದಿ ಅವರಿಗೆ ಕಾಶ್ಮೀರಿಗಳ ನರಮೇಧಕ್ಕಿಂತ ಸಿನಿಮಾ ಬಗ್ಗೆ ಮಾತನಾಡುವುದು ಮುಖ್ಯವಾಗಿದೆ'

ಶನಿವಾರದಂದು ಕಾಶ್ಮೀರಿ ಪಂಡಿತ್ ಸರ್ಕಾರಿ ನೌಕರನನ್ನು ಭಯೋತ್ಪಾದಕರು ಕೊಂದ ಪ್ರಕರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 'ಪ್ರಧಾನಿ ಮೋದಿ ಅವರಿಗೆ ಕಾಶ್ಮೀರಿಗಳ ನರಮೇಧದ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಚಲನಚಿತ್ರದ ಬಗ್ಗೆ ಮಾತನಾಡುವುದು ಅವರಿಗೆ ಮುಖ್ಯವಾಗಿದೆ' ಎಂದು ಹೇಳಿದರು.

Written by - Zee Kannada News Desk | Last Updated : May 15, 2022, 05:29 PM IST
  • ಭಾರತೀಯ ಜನತಾ ಪಕ್ಷದ (ಬಿಜೆಪಿ) ನೀತಿಗಳಿಂದಾಗಿ ಇಂದು ಕಾಶ್ಮೀರದಲ್ಲಿ ಭಯೋತ್ಪಾದನೆ ಉತ್ತುಂಗದಲ್ಲಿದೆ ಎಂದು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.
 'ಪ್ರಧಾನಿ ಮೋದಿ ಅವರಿಗೆ ಕಾಶ್ಮೀರಿಗಳ ನರಮೇಧಕ್ಕಿಂತ ಸಿನಿಮಾ ಬಗ್ಗೆ ಮಾತನಾಡುವುದು ಮುಖ್ಯವಾಗಿದೆ' title=

ನವದೆಹಲಿ: ಶನಿವಾರದಂದು ಕಾಶ್ಮೀರಿ ಪಂಡಿತ್ ಸರ್ಕಾರಿ ನೌಕರನನ್ನು ಭಯೋತ್ಪಾದಕರು ಕೊಂದ ಪ್ರಕರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 'ಪ್ರಧಾನಿ ಮೋದಿ ಅವರಿಗೆ ಕಾಶ್ಮೀರಿಗಳ ನರಮೇಧದ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಚಲನಚಿತ್ರದ ಬಗ್ಗೆ ಮಾತನಾಡುವುದು ಅವರಿಗೆ ಮುಖ್ಯವಾಗಿದೆ' ಎಂದು ಹೇಳಿದರು.

ಭಾರತೀಯ ಜನತಾ ಪಕ್ಷದ (ಬಿಜೆಪಿ) ನೀತಿಗಳಿಂದಾಗಿ ಇಂದು ಕಾಶ್ಮೀರದಲ್ಲಿ ಭಯೋತ್ಪಾದನೆ ಉತ್ತುಂಗದಲ್ಲಿದೆ ಎಂದು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.'ಕಾಶ್ಮೀರಿ ಪಂಡಿತರ ನರಮೇಧಕ್ಕಿಂತ ಪ್ರಧಾನ ಮಂತ್ರಿಗಳು ಚಲನಚಿತ್ರದ ಕುರಿತು ಮಾತನಾಡುವುದು ಹೆಚ್ಚು ಮುಖ್ಯವಾಗಿದೆ'ಎಂದು ವಿವೇಕ್ ಅಗ್ನಿಹೋತ್ರಿ ಅವರ 'ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Indian Railways : ರೈಲ್ವೆ ಪ್ರಯಾಣಿಕರ ಗಮನಕ್ಕೆ : IRCTC ಯ ಈ ಪ್ರಮುಖ ನಿಯಮಗಳನ್ನು ತಿಳಿಯಿರಿ

ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮತ್ತು ಭದ್ರತೆಯ ಜವಾಬ್ದಾರಿಯನ್ನು ಪ್ರಧಾನಿ ವಹಿಸಬೇಕು ಎಂದು ಅವರು ಒತ್ತಾಯಿಸಿದರು.2010-11ರಲ್ಲಿ ವಲಸಿಗರಿಗೆ ವಿಶೇಷ ಉದ್ಯೋಗದ ಪ್ಯಾಕೇಜ್ ಅಡಿಯಲ್ಲಿ ಗುಮಾಸ್ತ ಹುದ್ದೆ ಪಡೆದಿದ್ದ ಕಾಶ್ಮೀರಿ ಪಂಡಿತ ರಾಹುಲ್ ಭಟ್ ಅವರನ್ನು ಗುರುವಾರ ಮಧ್ಯ ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಚದೂರ ಪಟ್ಟಣದ ತಹಸಿಲ್ ಕಚೇರಿಯೊಳಗೆ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ.

ಈ ಹಿಂದೆ 'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ನಿರ್ಮಾಪಕರಿಗೆ ಪ್ರಧಾನಿ ಮೋದಿ ಬೆಂಬಲ ನೀಡಿದ್ದು, ಸತ್ಯ ಮತ್ತು ಸಂಶೋಧನೆಯ ಮೇಲೆ ನಿರ್ಮಿಸಲಾದ ಚಲನಚಿತ್ರವನ್ನು ಅಪಖ್ಯಾತಿಗೊಳಿಸಲು ಕೆಲವರು ಪಿತೂರಿ ನಡೆಸುತ್ತಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ: ಶೀಘ್ರವೇ ಭಾರತೀಯ ಮಾರುಕಟ್ಟೆಗೆ Sharp AQUOS R7 ಸ್ಮಾರ್ಟ್‌ಫೋನ್‌?

ಮಾರ್ಚ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 'ದಿ ಕಾಶ್ಮೀರ್ ಫೈಲ್ಸ್' 1990 ರ ದಶಕದಲ್ಲಿ ಕಾಶ್ಮೀರಿ ಕಣಿವೆಯಿಂದ ಕಾಶ್ಮೀರಿ ಪಂಡಿತರ ನಿರ್ಗಮನವನ್ನು ಆಧರಿಸಿದೆ. ಇದರಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ ಮತ್ತು ಪಲ್ಲವಿ ಜೋಶಿ ನಟಿಸಿದ್ದಾರೆ ಮತ್ತು ಜೀ ಸ್ಟುಡಿಯೋಸ್ ನಿರ್ಮಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News