Special Trainಗಳಿಗೆ ಸೇರಲಿವೆ Sleeper Coach, ಪ್ರತಿ ಕ್ಲಾಸ್ ನಲ್ಲಿಯೂ Waiting Ticket ಬುಕ್

ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಆರಂಭಿಸಲಾಗಿರುವ ವಿಶೇಷ ರೈಳುಗಳಲ್ಲಿಯೂ ಕೂಡ ಪ್ರಯಾಣಿಕರಿಗಾಗಿ ವೈಟಿಂಗ್ ಟಿಕೆಟ್ ಸೌಲಭ್ಯ ಆರಂಭಿಸಲಾಗಿದೆ. ರೈಲು ಇಲಾಖೆ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಮೇ 22 ರಿಂದ ಓಡಾಟ ನಡೆಸಲಿರುವ ವಿಶೇಷ ರೈಲುಗಳಲ್ಲಿ ವೈಟಿಂಗ್ ಟಿಕೆಟ್ ಬುಕ್ ಮಾಡಬಹುದಾಗಿದೆ ಎಂದು ಹೇಳಿದೆ. ಆದರೆ. ಪ್ರತ್ಯೇಕ ಶ್ರೇಣಿಗೆ ಲಿಮಿಟ್ ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

Last Updated : May 14, 2020, 01:17 PM IST
Special Trainಗಳಿಗೆ ಸೇರಲಿವೆ Sleeper Coach, ಪ್ರತಿ ಕ್ಲಾಸ್ ನಲ್ಲಿಯೂ Waiting Ticket ಬುಕ್ title=

ನವದೆಹಲಿ: ಈಗಾಗಲೇ 15 ಜೋಡಿ ರಾಜಧಾನಿ ರೈಲುಗಳ ಓಡಾಟವನ್ನು ಕೈಗೊಂಡಿರುವ ಭಾರತೀಯ ರೈಲು ಇಲಾಖೆ ಇದೀಗ ಇತರೆ ವಿಶೇಷ ರೈಲುಗಳನ್ನು ಹಳಿಗಳಿಗೆ ಇಳಿಸಲು ಸಿದ್ಧತೆಯನ್ನು ನಡೆಸಿದೆ. ಆದರೆ,  ಈ ಮೇಲ್ ಹಾಗೂ ಎಕ್ಸ್ಪ್ರೆಸ್ಸ್ ರೈಲುಗಳನ್ನು ಯಾವಾಗ ಓಡಿಸಲಾಗುವುದು ಎಂಬುದರ ಕುರಿತು ಇಲಾಖೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಸದ್ಯ ಓಡಿಸಲಾಗುತ್ತಿರುವ ವಿಶೇಷ ರೈಳುಗಳಲ್ಲಿಯೂ ಕೂಡ ಪ್ರಯಾಣಿಕರಿಗಾಗಿ ವೇಟಿಂಗ್ ಟಿಕೆಟ್ ಬುಕಿಂಗ್ ಆರಂಭಿಸಿರುವುದು ಇಲ್ಲಿ ವಿಶೇಷ. ರೈಲು ಇಲಾಖೆ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಮೇ 22 ರಿಂದ ಓಡಾಟ ನಡೆಸಲಿರುವ ವಿಶೇಷ ರೈಲುಗಳಲ್ಲಿ ವೈಟಿಂಗ್ ಟಿಕೆಟ್ ಬುಕ್ ಮಾಡಬಹುದಾಗಿದೆ ಎಂದು ಹೇಳಿದೆ. ಏಕೆಂದರೆ, ಮೇ 20ರವರೆಗೆ ನಡೆಸಲಾಗುತ್ತಿರುವ ರೈಲುಗಳ ಟಿಕೆಟ್ ಬುಕಿಂಗ್ ಈಗಾಗಲೇ ಪೂರ್ಣಗೊಂಡ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಆದರೆ, ಈ ಟಿಕೆಟ್ ಗಳಲ್ಲಿ ತತ್ಕಾಲ್ ಅಥವಾ ಪ್ರಿಮಿಯಂ ತತ್ಕಾಲ್ ಟಿಕೆಟ್ ಗಳ ಬುಕಿಂಗ್ ಸೌಲಭ್ಯ ಇರುವುದಿಲ್ಲ ಎಂದೂ ಕೂಡ ಹೇಳಲಾಗಿದೆ.

ಸದ್ಯ ಚಾಲ್ತಿಯಲ್ಲಿರುವ ವ್ಯವಸ್ಥೆಯ ಆಡಿಯೇ ಈ ವಿಶೇಷ ರೈಲುಗಳಲ್ಲಿ ವೇಟಿಂಗ್ ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆ ನಡೆಯಲಿದೆ. ಅಂದರೆ, IRCTC ವೆಬ್ಸೈಟ್ ಮೂಲಕವೇ ನೀವು ವೇಟಿಂಗ್ ಟಿಕೆಟ್ ಅನ್ನೂ ಕೂಡ ಕಾಯ್ದಿರಿಸಬಹುದು. ಆದರೆ, ಯಾವುದೇ ಏಜೆಂಟ್ ಅಥವಾ ರೈಲ್ವೆ ಸ್ಟೇಷನ್ ಗಳ ಮೂಲಕ ಟಿಕೆಟ್ ಬುಕಿಂಗ್ ಮಾಡಲಾಗುವುದಿಲ್ಲ ಎಂದೂ ಕೂಡ ಸ್ಪಷ್ಟಪಡಿಸಲಾಗಿದೆ.

AC ರಹಿತ ಸ್ಲೀಪರ್ ಕೋಚ್ ಗಳಿಗೂ ಕೂಡ ಬುಕಿಂಗ್ ನಡೆಯಲಿದೆ
ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆ ಈ ವೇಟಿಂಗ್ ಟಿಕೆಟ್ ಕಲ್ಪಿಸುವ ಸಿದ್ಧತೆಗಳನ್ನು ಮಾಡಿಕೊಂಡಿದೆ. ಭಾರತೀಯ ರೈಲ್ವೆ ಪ್ರಕಾರ, 22 ಮೇ 2020 ರಿಂದ ಈ ವಿಶೇಷ ರೈಲುಗಳಲ್ಲಿ ಎಲ್ಲಾ ವಿಭಾಗಗಳಲ್ಲಿ ವೇಟಿಂಗ್ ಟಿಕೆಟ್ ಲಭ್ಯವಿರಲಿವೆ. ಆದರೆ, ಅವುಗಳ ಸಂಖ್ಯೆಯನ್ನು ಈಗಾಗಲೇ ರೈಲ್ವೆ ಇಲಾಖೆ ನಿರ್ಧರಿಸಿದೆ. ವಿಶೇಷವೆಂದರೆ ಈ ರೈಲುಗಳಿಗೆ ಸ್ಲೀಪರ್ ಬೋಗಿಗಳನ್ನು ಸಹ ಜೋಡಿಸಲಾಗುತ್ತಿದೆ.

ಭಾರತೀಯ ರೈಲು ಇಲಾಖೆ ಹೊರಡಿಸಿರುವ ಸುತ್ತೋಲೆಯ ಪ್ರಕಾರ, AC3 ಟಿಯರ್ ಶ್ರೇಣಿಯಲ್ಲಿ ಒಟ್ಟು 100 ವೇಟಿಂಗ್ ಟಿಕೆಟ್ ಗಳು, 2 ಟಿಯರ್ ಶ್ರೇಣಿಯಲ್ಲಿ 50 ಹಾಗೂ ಟಿಯರ್ 1 ಶ್ರೇಣಿ ಮತ್ತು ಎಕ್ಸಿಕ್ಯೂಟಿವ್ ಶ್ರೇಣಿಯಲ್ಲಿ ತಲಾ 20-20 ವೇಟಿಂಗ್ ಟಿಕೆಟ್ ಗಳನ್ನು ಮಾತ್ರ ನೀಡಲಾಗುತ್ತಿದೆ. ಇದಲ್ಲದೆ ಸ್ಲೀಪರ್ ಕ್ಲಾಸ್ ನಲ್ಲಿ ಒಟ್ಟು 200 ವೇಟಿಂಗ್ ಟಿಕೆಟ್ ಗಳನ್ನು ನೀದಲಾಗುತ್ತಿದ್ದರೆ, AC ಚಿಯರ್ ಕಾರ್ ಸೌಲಭ್ಯ ಹೊಂದಿರುವ ರೈಲುಗಳಿಗೆ 100 ವೇಟಿಂಗ್ ಟಿಕೆಟ್ ಗಳನ್ನು ನೀಡಲಾಗುವುದು ಎನ್ನಲಾಗಿದೆ.

ರೈಲ್ವೆ ಪ್ರಕಾರ, ಪ್ರಸ್ತುತ ಮೇ 15 ರಿಂದ ಚಾಲನೆಯಲ್ಲಿರುವ 15 ಜೋಡಿ ವಿಶೇಷ ಎಸಿ ರೈಲುಗಳಲ್ಲಿಯೂ ಕೂಡ ವೇಟಿಂಗ್ ಟಿಕೆಟ್ ಸೌಲಭ್ಯವನ್ನು ಪ್ರಾರಂಭಿಸಲಾಗುವುದು. ಎಸಿ 1 ಕ್ಕೆ 20, ಎಸಿ 2 ಕ್ಕೆ 50 ಮತ್ತು ಎಸಿ 3 ಕ್ಕಾಗಿ 100 ವೇಟಿಂಗ್ ಟಿಕೆಟ್ ಸಹ ನೀಡಲಾಗುತ್ತಿದೆ. ಈ ಎಲ್ಲಾ ಟಿಕೆಟ್‌ಗಳನ್ನು ಐಆರ್‌ಸಿಟಿಸಿಯ ಅಧಿಕೃತ ವೆಬ್‌ಸೈಟ್ ಮೂಲಕ ಬುಕ್ ಮಾಡಬಹುದು.

Trending News