ಈ ಕಂಪನಿಯಿಂದ 7 ಸಾವಿರಕ್ಕಿಂತ ಕಡಿಮೆ ಬೆಲೆಗೆ ಲಾಂಚ್ ಆಗಿದೆ 3 ಕ್ಯಾಮರಾವುಳ್ಳ ಸ್ಮಾರ್ಟ್ ಫೋನ್!

ಸ್ಮಾರ್ಟ್ ಫೋನ್ ತಯಾರಕ ಇನ್ಫಿನಿಕ್ಸ್(Infinix) ಟ್ರಿಪಲ್-ರೇ ಕ್ಯಾಮರಾದೊಂದಿಗೆ ಬಜೆಟ್ ಸ್ನೇಹಿ ಸ್ಮಾರ್ಟ್ಫೋನ್ 'ಸ್ಮಾರ್ಟ್ 3 ಪ್ಲಸ್' ಅನ್ನು ಬಿಡುಗಡೆ ಮಾಡಿದೆ. ಕಂಪನಿಯು 6,999 ರೂಪಾಯಿಗೆ ಫೋನ್ ಬೆಲೆಯನ್ನು ನಿಗದಿಪಡಿಸಿದೆ.   

Last Updated : Apr 24, 2019, 09:37 AM IST
ಈ ಕಂಪನಿಯಿಂದ 7 ಸಾವಿರಕ್ಕಿಂತ ಕಡಿಮೆ ಬೆಲೆಗೆ ಲಾಂಚ್ ಆಗಿದೆ 3 ಕ್ಯಾಮರಾವುಳ್ಳ ಸ್ಮಾರ್ಟ್ ಫೋನ್! title=

ನವದೆಹಲಿ: ಸ್ಮಾರ್ಟ್ ಫೋನ್ ತಯಾರಕ ಇನ್ಫಿನಿಕ್ಸ್(Infinix) ಟ್ರಿಪಲ್-ರಿಯರ್ ಕ್ಯಾಮರಾದೊಂದಿಗೆ ಬಜೆಟ್ ಸ್ನೇಹಿ ಸ್ಮಾರ್ಟ್ಫೋನ್ 'ಸ್ಮಾರ್ಟ್ 3 ಪ್ಲಸ್' ಅನ್ನು ಬಿಡುಗಡೆ ಮಾಡಿದೆ. ಕಂಪನಿಯು 6,999 ರೂಪಾಯಿಗೆ ಫೋನ್ ಬೆಲೆಯನ್ನು ನಿಗದಿಪಡಿಸಿದೆ. ಈ ಫೋನ್ ಎಪ್ರಿಲ್ 30 ರಿಂದ ಫ್ಲಿಫ್ ಕಾರ್ಟ್ ನಲ್ಲಿ ಲಭ್ಯವಿರಲಿದೆ. ಇನ್ಫಿನಿಕ್ಸ್ ಇಂಡಿಯಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ), ಅನಿಶ್ ಕಪೂರ್ ಫೋನ್ ಬಗ್ಗೆ ಮಾಹಿತಿ ನೀಡಿದ್ದು, ಈ ಫೋನ್ ಕ್ಯಾಮೆರಾಗಳೊಂದಿಗೆ 3,500 mAh ಬ್ಯಾಟರಿ, ಹೆಲಿಯೊ ಎ 22 ಪ್ರೊಸೆಸರ್, 2 ಜಿಬಿ ರಾಮ್ ಮತ್ತು 32 ಜಿಬಿ ಆಂತರಿಕ ಸ್ಟೋರೇಜ್ ಅನ್ನು ಹೊಂದಿದೆ ಎಂದು ಹೇಳಿದರು.

Android ಫೋನ್ 9.0 ಆಪರೇಟಿಂಗ್ ಸಿಸ್ಟಮ್ನಲ್ಲಿ ಕಾರ್ಯನಿರ್ವಹಣೆ:
ಕಂಪನಿ ಹಿಂಭಾಗದಲ್ಲಿ 13 ಮೆಗಾಪಿಕ್ಸಲ್ ಕ್ಯಾಮರಾದೊಂದಿಗೆ ವಿಶೇಷವಾಗಿ ಬಲಭಾಗದ ಕೆಳಭಾಗದಲ್ಲಿ 2 ಮೆಗಾಪಿಕ್ಸಲ್ ನ ಮೂರನೇ ಕ್ಯಾಮರಾವನ್ನು ನೀಡಿದೆ. ಇದು 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಈ ರೀತಿಯಾಗಿ, ಫೋನ್ನಲ್ಲಿ ಒಟ್ಟು 4 ಕ್ಯಾಮೆರಾಗಳಿವೆ. 6.21 ಇಂಚಿನ ಡಿಸ್ಪ್ಲೇನೊಂದಿಗೆ ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 9.0 ಆಪರೇಟಿಂಗ್ ಸಿಸ್ಟಮ್ ಹೊಂದಿದೆ ಎಂದು ಅವರು ಹೇಳಿದರು. ಆರಂಭಿಕ ಹಂತದ ಸ್ಮಾರ್ಟ್ಫೋನ್ಗಳ ಯೋಜನೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಪೂರ್, ಪ್ರಸ್ತುತ, 10,000 ರೂಪಾಯಿಗಳ ವಿಭಾಗದಲ್ಲಿ ಉತ್ತಮ ಮಾರುಕಟ್ಟೆ ಪಾಲನ್ನು ಪಡೆಯುವುದು ಅವರ ಉದ್ದೇಶವಾಗಿದೆ ಎಂದರು.

'ಮೇಕ್ ಇನ್ ಇಂಡಿಯಾ' ಯೋಜನೆ ಅರ್ಥಪೂರ್ಣ:
ಮುಂದಿನ ಒಂದು ತಿಂಗಳೊಳಗೆ ಕಂಪೆನಿಯು ಧರಿಸಬಹುದಾದ ಸಾಧನ ಸೇರಿದಂತೆ ಮತ್ತೊಂದು ಸ್ಮಾರ್ಟ್ಫೋನ್ ಅನ್ನು ಪ್ರಾರಂಭಿಸಲಿದೆ ಎಂದು ಅವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ 'ಮೇಕ್ ಇನ್ ಇಂಡಿಯಾ' ಅಭಿಯಾನದಲ್ಲಿ ತಮ್ಮ ಕಂಪೆನಿಯು ದೇಶೀಯ ಮಟ್ಟದಲ್ಲಿ ತನ್ನ ಸ್ಮಾರ್ಟ್ಫೋನ್ ಅನ್ನು ಜೋಡಿಸುತ್ತಿದೆ. ಮೈಕ್ರೋ ಎಸ್ಡಿ ಕಾರ್ಡ್ ಮೂಲಕ ಫೋನ್ ಮೆಮೊರಿ 256 ಜಿಬಿಗೆ ಹೆಚ್ಚಿಸಬಹುದು ಎಂದು ಕಪೂರ್ ಹೇಳಿದರು.

XOS 5.0 ಆಧರಿಸಿ ಆಂಡ್ರಾಯ್ಡ್ 9 ಪೈನಲ್ಲಿ ಕಾರ್ಯನಿರ್ವಹಿಸುವ ಸ್ಮಾರ್ಟ್ಫೋನ್ ಫಿಂಗರ್ಪ್ರಿಂಟ್ ಸಂವೇದಕವನ್ನು ಕೂಡ ಹೊಂದಿದೆ. ಫೋನ್ ಅನ್ನು ಶಕ್ತಗೊಳಿಸಲು, 3,500 mAh ಬ್ಯಾಟರಿ ಇದೆ. ಸಂಪರ್ಕಕ್ಕಾಗಿ ಬ್ಲೂಟೂತ್ ಆಯ್ಕೆಗಳು, 3.5 ಎಂಎಂ ಆಡಿಯೋ ಜಾಕ್, ಎಫ್ಎಂ ರೇಡಿಯೋ, ಮೈಕ್ರೋ-ಯುಎಸ್ಬಿ ಪೋರ್ಟ್ ರೀತಿಯ ಆಯ್ಕೆಗಳನ್ನು ನೀಡಲಾಗಿದೆ ಎಂದು ಕಪೂರ್ ತಿಳಿಸಿದರು.
 

Trending News