ನವದೆಹಲಿ: ಎಲ್ ಎಸಿ (LAC) ಬಳಿ ಭಾರತ ಮತ್ತು ಚೀನಾ ನಡುವಣ ಉದ್ವಿಗ್ನತೆ ಇನ್ನೂ ಶಮನಗೊಂಡಿಲ್ಲ. ಕಮಾಂಡರ್ ಮತ್ತು ರಾಜತಾಂತ್ರಿಕ ಮಟ್ಟದ ಸತತ ಸಭೆಗಳಿಂದ ಇದುವೆರೆಗೆ ಯಾವುದೇ ಪ್ರಯೋಜನವಾಗಿಲ್ಲ. ಇದರ ನಡುವೆ ಎರಡೂ ದೇಶಗಳ ಸೇನೆಯನ್ನು ಆಹುತಿ ಪಡೆಯಬಲ್ಲ ರಕ್ಕಸ ಚಳಿ ಹಿಮಾಲಯವನ್ನು ಆವರಿಸಿದೆ. ರಕ್ತವನ್ನೂ ಹೆಪ್ಪುಗಟ್ಟಿಸಬಲ್ಲ ಈ ಪರಮ ಭೀಕರ ಹಿಮ ಮಾರುತದ ಪ್ರಕೋಪಕ್ಕೆ ಅಲ್ಲಿನ ತಾಪಮಾನ ಮೈನಸ್ 50ರ ತನಕ ಇಳಿಯುವ ಸಾಧ್ಯತೆಗಳಿರುತ್ತದೆ. ಹಾಗಾಗಿ, ಪರಸ್ಪರ ರಕ್ತ ಹೀರಲು ಗಡಿಯಲ್ಲಿ ಎದುರುಬದುರಾಗಿ ನಿಂತಿರುವ ಭಾರತ ಮತ್ತು ಚೀನಾ ಸೇನೆಗಳು ಈಗ ಹಿಮ ರಕ್ಕಸನ ವಿರುದ್ಧ ಸೆಣಸಬೇಕು. ಆತನನ್ನು ಮಣಿಸಿ, ಮುನ್ನುಗ್ಗಬೇಕು.ಅದಕ್ಕಾಗಿ ಭಾರತೀಯ ಸೇನೆಯ (Indian Army) ಬಳಿ ತಯಾರಿ ಹೇಗಿದೆ ಗೊತ್ತಾ..?
Army troops deployed along LAC in Ladakh being provided cold weather clothing, Sig Sauer assault rifles
Read @ANI Story | https://t.co/xcY92aASlF pic.twitter.com/hRsV1AUOmI
— ANI Digital (@ani_digital) November 4, 2020
ಹಿಮರಕ್ಕಸನ ವಿರುದ್ಧ ಲಡಾಕ್ ನಲ್ಲಿ ಕದನ..!
ಲಡಾಕ್ (Ladakh) ನಲ್ಲಿ ಈಗಾಗಲೇ ತಾಪಮಾನ ಮೈನಸ್ 10 ಕ್ಕೆ ಇಳಿದಿದೆ. ಮುಂದಿನ ದಿನಗಳಲ್ಲಿ ಈ ತಾಪಮಾನ ಇನ್ನಷ್ಟು ಕಡಿಮೆಯಾಗಲಿದೆ. ಈ ಸಮಯದಲ್ಲೇ, ಲಡಾಕ್ ನ ಅತಿ ಎತ್ತರದ ಶಿಖರಗಳ ಮೇಲೆ ಭಾರತೀಯ ಸೈನಿಕರು ಕಾವಲು ಕಾಯುತ್ತಿದ್ಧಾರೆ. ಜೊತೆಗೆ ಆಗಸ್ಟ್ 29 ಮತ್ತು 31 ರ ನಡುವೆ ವಶಪಡಿಸಿಕೊಂಡಿರುವ ಬ್ಲಾಕ್ ಟಾಪ್, ಮುಖಪರಿ, ರೆಜಂಗ್ ಲಾ, ರೆಚಿನ್ ಲಾ ಮುಂತಾದ ಶಿಖರಗಳನ್ನು ಭಾರತ ಕಣ್ಣಿಟ್ಟು ಕಾಯಬೇಕಿದೆ. ಭಾರತದ ಸಮರ ವ್ಯೂಹಕ್ಕೆ ಇದು ಅತ್ಯಂತ ಮುಖ್ಯವಾಗಿದ್ದು, ಯಾವುದೇ ಸಮಯದಲ್ಲೂ ಚೀನಾ ಇದನ್ನು ಆಕ್ರಮಿಸುವ ಸಾಧ್ಯತೆ ಇದೆ. ಹಾಗಾಗಿ, ಎಂಥಹ ಪರಮ ಚಳಿ ಇದ್ದರೂ, ಪ್ರಾಣ ಹೋದರೂ ಈ ಶಿಖರ ಬಿಟ್ಟು ಸೈನಿಕರು ಕದಲುವಂತಿಲ್ಲ.
ಲಡಾಖ್‌ನಲ್ಲಿ ಭಾರತೀಯ ಸೇನೆಯ ಪರಾಕ್ರಮ, 6 ಹೊಸ ಶಿಖರಗಳು ವಶಕ್ಕೆ
ಅಮೆರಿಕದಿಂದ ಬಂದಿದೆ ವಿಶೇಷ ಬಟ್ಟೆ
ಭಾರತ-ಚೀನಾ (India-China) ಗಡಿಯಲ್ಲಿ ಸುಮಾರು 90 ಸಾವಿರ ಭಾರತೀಯ ಸೈನಿಕರಿದ್ಧಾರೆ. ಈ ಸೈನಿಕರ ಸುರಕ್ಷತೆಗಾಗಿ ಜುಲೈಯಿಂದಲೇ ತಯಾರಿ ಆರಂಭಿಸಲಾಗಿದೆ. ಚಳಿಗೆ ಬೇಕಾಗಿರುವ ರೇಷನ್, ಸೀಮೆಎಣ್ಣೆ ಹೀಟರ್, ವಿಶೇಷ ಬಟ್ಟೆ, ವಿಶೇಷ ಟೆಂಟ್, ಔಷದಿಗಳನ್ನು ಈಗಾಗಲೇ ಸಾಗಿಸಲಾಗಿದೆ. ಇನ್ನು ತಾಪಮಾನ ವಿಪರೀತ ಕುಸಿದಾಗ ಬಳಸಲು ಅಮೆರಿಕದಿಂದ ವಿಶೇಷವಾದ ಬಟ್ಟೆಗಳನ್ನುತರಿಸಲಾಗಿದೆ. 60 ಸಾವಿರ ಸೆಟ್ ಗಳನ್ನು ಅಮೆರಿಕದಿಂದ ತರಿಸಲಾಗಿದೆ. ಇಷ್ಟೆಲ್ಲಾ ತಯಾರಿಗಳಿದ್ದರೂ, ರಕ್ಕಸ ಚಳಿ ಸೈನಿಕರ ಪ್ರಾಣ ತೆಗೆಯಬಲ್ಲದು. ಹಾಗಾಗಿ, ಎತ್ತರದ ಶಿಖರಗಳ ಮೇಲೆ ರೊಟೇಶನ್ ಆಧಾರದ ಮೇಲೆ ಸೈನಿಕರನ್ನು ನಿಯೋಜಿಸಲಾಗುತ್ತಿದೆ. ಇದರಿಂದ ಸೈನಿಕರಿಗೆ ಸ್ವಲ್ಪ ಮಟ್ಟಿನ ವಿಶ್ರಾಂತಿಯೂ ಸಿಗಲಿದೆ.
LAC ಮೇಲಿನ ಉದ್ವೇಗವನ್ನು ಕಡಿಮೆ ಮಾಡಲು ಭಾರತ ನೀಡಿದೆ ಈ ಹೊಸ ಸೂತ್ರ
ಭಾರತಕ್ಕಿದೆ ಸಿಯಾಚಿನ್ ಅನುಭವ
ಭಾರತೀಯ ಸೇನೆಗೆ ಮೈನಸ್ 50 ಡಿಗ್ರಿ ತಾಪಮಾನದ ಹೆಪ್ಪುಗಟ್ಟುವ ಚಳಿಯಲ್ಲೂ ಸಿಯಾಚಿನ್ ಗ್ಲೇಸಿಯರ್ ಕಾಯುವ ಅನುಭವ ಇದೆ. ಆದರೆ, ಈ ಸಲ ಎಲ್ ಎಸಿ ಬಳಿ ಸಿಯಾಚಿನ್ (Siachen) ಗಿಂತ ಹತ್ತಿಪ್ಪತ್ತು ಪಟ್ಟು ಅಧಿಕ ಸೈನಿಕರನ್ನು ನಿಯೋಜಿಸಲಾಗಿದೆ. ಹಿಮಶಿಖರದ ಚಳಿಯ ಬೇರೆ ಬೇರೆ ತಾಪಮಾನದಲ್ಲಿ ಸೈನಿಕರನ್ನು ಮೊದಲು ಅಕ್ಲಮಟೈಸ್ ಮಾಡಲಾಗುತ್ತದೆ. ಅಕ್ಲಮಟೈಸ್ ಮಾಡಿದ ಸೈನಿಕರನ್ನು ನಿರ್ಗಲ್ಲ ಶಿಖರಗಳ ಮೇಲೆ ನಿಯೋಜಿಸಲಾಗುತ್ತದೆ.