Indian Government : ಮೋದಿ ಸರ್ಕಾರದಿಂದ ಡಿಜಿಟಲ್ ಸ್ಟ್ರೈಕ್, 8 ಯೂಟ್ಯೂಬ್ ಚಾನೆಲ್‌ ಬ್ಲಾಕ್!

ಇವುಗಳಲ್ಲಿ 7 ಭಾರತೀಯ ಚಾನಲ್‌ಗಳು ಮತ್ತು ಒಂದು ಪಾಕಿಸ್ತಾನಿ ಚಾನೆಲ್ ಸೇರಿದೆ.

Written by - Channabasava A Kashinakunti | Last Updated : Aug 18, 2022, 01:14 PM IST
  • ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ಸಂಬಂಧ
  • ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ಸುಳ್ಳಿ ಸುದ್ದಿ ಬಿತ್ತರಿಸುತ್ತಿದ್ದ
  • ಎಂಟು ಯೂಟ್ಯೂಬ್ ಚಾನೆಲ್‌ಗಳನ್ನು ಬ್ಲಾಕ್
Indian Government : ಮೋದಿ ಸರ್ಕಾರದಿಂದ ಡಿಜಿಟಲ್ ಸ್ಟ್ರೈಕ್, 8 ಯೂಟ್ಯೂಬ್ ಚಾನೆಲ್‌ ಬ್ಲಾಕ್! title=

ನವದೆಹಲಿ : ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ಸುಳ್ಳಿ ಸುದ್ದಿ ಬಿತ್ತರಿಸುತ್ತಿದ್ದ ಎಂಟು ಯೂಟ್ಯೂಬ್ ಚಾನೆಲ್‌ಗಳನ್ನು ಬ್ಲಾಕ್ ಮಾಡಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಆದೇಶ ಹೊರಡಿಸಿದೆ. ಇವುಗಳಲ್ಲಿ 7 ಭಾರತೀಯ ಚಾನಲ್‌ಗಳು ಮತ್ತು ಒಂದು ಪಾಕಿಸ್ತಾನಿ ಚಾನೆಲ್ ಸೇರಿದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನೀಡಿರುವ ಮಾಹಿತಿ ಪ್ರಕಾರ, 'ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದ 8 ಯೂಟ್ಯೂಬ್ ಚಾನೆಲ್‌ಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಬ್ಲಾಕ್ ಮಾಡಿದೆ. 

ಇದನ್ನೂ ಓದಿ : Explainer : ಶ್ರೀಲಂಕಾದಲ್ಲಿ ಚೀನಾದ ʻಸ್ಪೈ ಶಿಪ್‌ʼ ಇರೋದು ಭಾರತಕ್ಕೆ ಅಪಾಯವೇ?

ಐಟಿ ನಿಯಮಗಳ ಪ್ರಕಾರ, 2021 ರ ಅಡಿಯಲ್ಲಿ 7 ಭಾರತೀಯ ಮತ್ತು 1 ಪಾಕಿಸ್ತಾನ ಮೂಲದ ಯೂಟ್ಯೂಬ್ ನ್ಯೂಸ್ ಚಾನಲ್‌ಗಳನ್ನು ಬ್ಲಾಕ್ ಮಾಡಿದೆ. ಬ್ಯಾನ್ ಮಾಡಲಾದ ಯೂಟ್ಯೂಬ್ ಚಾನೆಲ್‌ಗಳು 114 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದ್ದವು, ಹಾಗೂ 85 ಲಕ್ಷ 73 ಸಾವಿರ ಸಬ್ಸ್ಕ್ರೈಬ್ ಹೊಂದಿದ್ದವು. ಯೂಟ್ಯೂಬ್‌ನಲ್ಲಿ ನಿರ್ಬಂಧಿಸಲಾದ ಚಾನೆಲ್‌ಗಳಿಂದ ದೇಶಕ್ಕೆ ಸಂಬಂಧಿಸಿದಂತೆ ಪ್ರಸಾರ ಆಂಡಿ ಹಣಗಳಿಸಲಾಗುತ್ತಿತ್ತು ಎಂದು ತಿಳಿಸಲಾಗಿದೆ.

ಇದನ್ನೂ ಓದಿ : Maharashtra : 'ಅರೆರೆ ಬಂದ್ರು ನೋಡಿ, ಬಂದ್ರು ನೋಡಿ ದೇಶದ್ರೋಹಿಗಳು' : ಶಿಂಧೆ ಬಣಕ್ಕೆ ತಿವಿದ ಆದಿತ್ಯ ಠಾಕ್ರೆ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News