ಭಾರತದಿಂದ ದೇಶಿಯ ನಿರ್ಮಿತ ಅಗ್ನಿ-5 ಕ್ಷಿಪಣಿ ಪರೀಕ್ಷೆ ಯಶಸ್ವಿ

ಭಾರತ ಸೋಮವಾರದಂದು ಒಡಿಶಾ ಕರಾವಳಿಯಲ್ಲಿ ದೇಶೀಯವಾಗಿ ಅಭಿವೃದ್ಧಿ ಹೊಂದಿದ ಅಣ್ವಸ್ತ್ರ ಸಾಮರ್ಥ್ಯದ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-5 ಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.ಈ ಕ್ಷಿಪಣಿ 5,000 ಕಿಮೀಗಳ ಸ್ಟ್ರೈಕ್ ವ್ಯಾಪ್ತಿಯನ್ನು ಹೊಂದಿದೆ.ಭದ್ರಕ್ ಜಿಲ್ಲೆಯ ಅಬ್ದುಲ್ ಕಲಾಮ್ ದ್ವೀಪದಲ್ಲಿ ಮಧ್ಯಾಹ್ನ1.30 ಕ್ಷಿಪಣಿವನ್ನು ಪರೀಕ್ಷೆಗೆ ಒಳಪಡಿಸಲಾಯಿತು.

Last Updated : Dec 10, 2018, 06:16 PM IST
ಭಾರತದಿಂದ ದೇಶಿಯ ನಿರ್ಮಿತ ಅಗ್ನಿ-5 ಕ್ಷಿಪಣಿ ಪರೀಕ್ಷೆ ಯಶಸ್ವಿ title=

ನವದೆಹಲಿ: ಭಾರತ ಸೋಮವಾರದಂದು ಒಡಿಶಾ ಕರಾವಳಿಯಲ್ಲಿ ದೇಶೀಯವಾಗಿ ಅಭಿವೃದ್ಧಿ ಹೊಂದಿದ ಅಣ್ವಸ್ತ್ರ ಸಾಮರ್ಥ್ಯದ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-5 ಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.ಈ ಕ್ಷಿಪಣಿ 5,000 ಕಿಮೀಗಳ ಸ್ಟ್ರೈಕ್ ವ್ಯಾಪ್ತಿಯನ್ನು ಹೊಂದಿದೆ.ಭದ್ರಕ್ ಜಿಲ್ಲೆಯ ಅಬ್ದುಲ್ ಕಲಾಮ್ ದ್ವೀಪದಲ್ಲಿ ಮಧ್ಯಾಹ್ನ1.30 ಕ್ಷಿಪಣಿವನ್ನು ಪರೀಕ್ಷೆಗೆ ಒಳಪಡಿಸಲಾಯಿತು.

ಡಿಆರ್ಡಿಓ ಅಭಿವೃದ್ಧಿಪಡಿಸಿದ ಈ ಕ್ಷಿಪಣಿ ನೌಕೆಯು ನ್ಯಾವಿಗೇಷನ್ ಮತ್ತು ಮಾರ್ಗದರ್ಶನ, ಎಂಜಿನ್ ನಲ್ಲಿ ಮುಂದುವರೆದ ತಂತ್ರಜ್ಞಾನವನ್ನು ಹೊಂದಿದೆ. ಇದು ಅಗ್ನಿ-5 ಬ್ಯಾಲಿಸ್ಟಿಕ್ ಕ್ಷಿಪಣಿಯ ಏಳನೆಯ ಪರೀಕ್ಷೆಯಾಗಿದೆ.ಈ ಹಿಂದೆ ಇ ಜೂನ್ 3, 2018 ರಲ್ಲಿ ಕೊನೆಯದಾಗಿ ಇದನ್ನು ಪರೀಕ್ಷೆಗೆ ಒಳಪಡಿಸಲಾಯಿತು.ಅಗ್ನಿ-ವಿ ಮೂರು ಮೀಟರ್ ಕ್ಷಿಪಣಿ, 17 ಮೀಟರ್ ಎತ್ತರ,ಎರಡು ಮೀಟರ್ ಅಗಲ ಮತ್ತು 1.5 ಟನ್ ಪರಮಾಣು ಹೊಂದುವ ಸಾಮರ್ಥ್ಯವನ್ನು ಹೊಂದಿದೆ.

ಈ ಕುರಿತಾಗಿ ಪ್ರತಿಕ್ರಿಯಿಸಿರುವ ರಕ್ಷಣಾ ಇಲಾಖೆ ಅಧಿಕಾರಿಗಳು " ಕ್ಷಿಪಣಿಯನ್ನು  ಮೊಬೈಲ್ ಲಾಂಚರ್ ಸಹಾಯದಿಂದ ಸೋಮವಾರದಂದು ಮಧ್ಯಾಹ್ನ ಬಂಗಾಳ ಕೊಲ್ಲಿಯ ಡಾ. ಅಬ್ದುಲ್ ಕಲಾಮ್ ದ್ವೀಪದಲ್ಲಿ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ನ ಲಾಂಚ್ ಪ್ಯಾಡ್ -4 ನಿಂದ ಮೊಬೈಲ್ ಲಾಂಚರ್ ಸಹಾಯದಿಂದ ಈ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದೆ ಎಂದು ತಿಳಿಸಿದರು 

 

Trending News