ಡ್ರಗ್ಸ್ ವಿಚಾರದಲ್ಲಿ ಜಯಾ ಬಚ್ಚನ್ ರಾಜಕೀಯ ಮಾಡುತ್ತಿದ್ದಾರೆ-ಜಯಪ್ರದಾ

ಡ್ರಗ್ಸ್ ವಿಚಾರವಾಗಿ ಭೋಜಪುರಿ ನಟ ಹಾಗೂ ಬಿಜೆಪಿ ಸಂಸದ ರವಿ ಕಿಶನ್ ಹೇಳಿಕೆಗೆ ಸಂಸತ್ ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಜಯಾ ಬಚ್ಚನ್ ಗೆ ಜಯಪ್ರದಾ ತಿರುಗೇಟು ನೀಡಿದ್ದಾರೆ.

Last Updated : Sep 16, 2020, 10:52 PM IST
ಡ್ರಗ್ಸ್ ವಿಚಾರದಲ್ಲಿ ಜಯಾ ಬಚ್ಚನ್ ರಾಜಕೀಯ ಮಾಡುತ್ತಿದ್ದಾರೆ-ಜಯಪ್ರದಾ  title=
Photo Courtsey : ANI

ನವದೆಹಲಿ: ಡ್ರಗ್ಸ್ ವಿಚಾರವಾಗಿ ಭೋಜಪುರಿ ನಟ ಹಾಗೂ ಬಿಜೆಪಿ ಸಂಸದ ರವಿ ಕಿಶನ್ ಹೇಳಿಕೆಗೆ ಸಂಸತ್ ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಜಯಾ ಬಚ್ಚನ್ ಗೆ ಜಯಪ್ರದಾ ತಿರುಗೇಟು ನೀಡಿದ್ದಾರೆ.

'ಮಾದಕವಸ್ತು ಕಳ್ಳಸಾಗಣೆ / ವ್ಯಸನದ ಸಮಸ್ಯೆಯಿಂದ ಯುವಕರನ್ನು ರಕ್ಷಿಸುವ ಬಗ್ಗೆ ರವಿ ಕಿಶನ್ ಜಿ ಅವರ ಹೇಳಿಕೆಗಳನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ.ಡ್ರಗ್ಸ್ ಗಳ ಬಳಕೆಯ ವಿರುದ್ಧ ನಾವು ಧ್ವನಿ ಎತ್ತಬೇಕು ಮತ್ತು ನಮ್ಮ ಯುವಕರನ್ನು ಉಳಿಸಬೇಕಾಗಿದೆ. ಜಯಾ ಬಚ್ಚನ್ ಜಿ ಈ ವಿಷಯದ ಬಗ್ಗೆ ರಾಜಕೀಯ ಮಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ'ಎಂದು ಜಯಾಪ್ರದಾ ಹೇಳಿದರು.

ಜಯ ಬಚ್ಚನ್ ಮಾತಿಗೆ ಕೋಪಗೊಂಡು ಟ್ವೀಟ್ ಮೂಲಕ ಕಿಡಿಕಾರಿದ ಕಂಗನಾ ರನೌತ್

ಸೋಮವಾರ, ರವಿ ಕಿಶನ್ ಅವರು ಲೋಕಸಭೆಯಲ್ಲಿ ಮಾದಕ ವ್ಯಸನದ ವಿಷಯವನ್ನು ಎತ್ತಿದರು, ಇದನ್ನು ನಿರುದ್ಯೋಗ ಮತ್ತು ಆರ್ಥಿಕತೆಯಿಂದ ಗಮನವನ್ನು ಬೇರೆಡೆ ಸೆಳೆಯುವ ತಂತ್ರ ಎಂದು ಜಯಾ ಬಚ್ಚನ್ ಕರೆದರು."ಸರ್ಕಾರವು ಮನರಂಜನಾ ಉದ್ಯಮದ ಪರವಾಗಿ ನಿಲ್ಲಬೇಕು ಎಂದು ನಾನು ಭಾವಿಸುತ್ತೇನೆ, ಏಕೆಂದರೆ ಸರ್ಕಾರವು ತೆಗೆದುಕೊಳ್ಳುವ ಯಾವುದೇ ಉತ್ತಮ ಕೆಲಸಗಳಲ್ಲಿ ಸಹಾಯ ಮಾಡಲು ಅದು ಯಾವಾಗಲೂ ಮುಂದಿರುತ್ತದೆ" ಎಂದು ಜಯಾ ಬಚ್ಚನ್ ಹೇಳಿದರು.

Trending News