ನಿಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಅಕೌಂಟ್ ಲಿಂಕ್ ನಿಂದ ತೆಗೆಯುವುದು ಹೇಗೆ?

 ಬುಧವಾರದಂದು ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ನಿಮ್ಮ ಬ್ಯಾಂಕ್ ಖಾತೆಗಳನ್ನು ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಲ್ಲ ಎಂದು ಸುಪ್ರೀಂ ಹೇಳಿದೆ. 

Last Updated : Sep 28, 2018, 05:59 PM IST
ನಿಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಅಕೌಂಟ್ ಲಿಂಕ್ ನಿಂದ ತೆಗೆಯುವುದು ಹೇಗೆ? title=

ನವದೆಹಲಿ: ಬುಧವಾರದಂದು ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ನಿಮ್ಮ ಬ್ಯಾಂಕ್ ಖಾತೆಗಳನ್ನು ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಲ್ಲ ಎಂದು ಸುಪ್ರೀಂ ಹೇಳಿದೆ. 

ಆದ್ದರಿಂದ, ನಿಮ್ಮ ಬ್ಯಾಂಕ್ ಖಾತೆ ಜೊತೆಗೆ ಇರುವ ನಿಮ್ಮ ಅಕೌಂಟ್ ತೆಗೆಯುವುದು ಹೇಗೆ?

-ನೀವು ಖಾತೆಯನ್ನು ಹೊಂದಿರುವ ಬ್ಯಾಂಕ್ನ ಶಾಖೆಗೆ ಹೋಗಿ ಗ್ರಾಹಕರ ಸೇವಾ ಪ್ರತಿನಿಧಿಯನ್ನು ಸಂಪರ್ಕಿಸಿ.

-ನಂತರ ನೀವು ಬ್ಯಾಂಕ್ ಗೆ ಅಪ್ಲಿಕೇಶನ್ ನಲ್ಲಿ ಔಪಚಾರಿಕ ವಿನಂತಿಯನ್ನು ಸಲ್ಲಿಸಬೇಕಾಗುತ್ತದೆ.

-ಪಾನ್ ಕಾರ್ಡ್ ಮತ್ತು ಪಾಸ್ ಬುಕ್ನಂತಹ ಇತರ KYC ದಾಖಲೆಗಳನ್ನು ಖಾತೆಯಿಂದ ಆಧಾರ ಸಂಖ್ಯೆಯನ್ನು ಡಿಲಿಂಕ್ ಮಾಡಲು ಉಪಯೋಗಿಸಿ.

-48 ಗಂಟೆಗಳ ಒಳಗೆ ಬ್ಯಾಂಕ್ ನಿಮ್ಮ ಬ್ಯಾಂಕ್ ಖಾತೆಯಿಂದ ನಿಮ್ಮ ಆಧಾರ್ ಅನ್ನು ಡಿಲಿಂಕ್ ಮಾಡುತ್ತದೆ ಮತ್ತು ದೃಢೀಕರಣವನ್ನು ಕಳುಹಿಸುತ್ತದೆ.

-ನೆಟ್ ಬ್ಯಾಂಕಿಂಗ್ ಸೌಲಭ್ಯ ಅಥವಾ ನಿಮ್ಮ ಬ್ಯಾಂಕಿನ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ನಿಮ್ಮ ಬ್ಯಾಂಕ್ ಖಾತೆ ಮತ್ತು ಆಧಾರ್ ಸಂಖ್ಯೆಯನ್ನು ನೀವು ಡಿಲಿಂಕ್ ಮಾಡಬಹುದು.

ಆಧಾರ್-ಬ್ಯಾಂಕ್ ಖಾತೆ ಲಿಂಕ್ ಮಾಡುವುದು ಕಡ್ಡಾಯವಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದ್ದೇಕೆ?

-ಪ್ರತಿಯೊಂದು ಬ್ಯಾಂಕ್ ಖಾತೆಯ ಕಡ್ಡಾಯವಾಗಿ ಲಿಂಕ್ ಮಾಡುವ ಮೂಲಕ  ಹಣದ ಲಾಂಡರಿಂಗ್ ಮತ್ತು ಕಪ್ಪು ಹಣದ ಸಮಸ್ಯೆಗಳನ್ನು ಹೇಗೆ ನಿರ್ಮೂಲನೆ ಮಾಡಲಾಗುತ್ತದೆ ಎನ್ನುವುದಕ್ಕೆ ಯಾವುದೇ ವಿವರಣೆಗಳನ್ನು ನೀಡಲಾಗಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

-ಎರಡನೆಯದಾಗಿ, ಬ್ಯಾಂಕುಗಳು ಈಗಾಗಲೇ ಆಧಾರ್ ಗೆ ಪರ್ಯಾಯ ಮಾರ್ಗಗಳನ್ನು ಬಳಸುತ್ತಿವೆ. ಬ್ಯಾಂಕುಗಳು ಈಗಾಗಲೇ ಕೈಗೊಳ್ಳುವ KYC ಯ ಪರ್ಯಾಯ ವಿಧಾನಗಳಿವೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

-ಸುಪ್ರೀಂ ಕೋರ್ಟ್ ಈ ದಿನಗಳಲ್ಲಿ ಬ್ಯಾಂಕ್ ಖಾತೆಗಳ ಅವಶ್ಯಕತೆ ಮತ್ತು ಜನರ ಸರ್ಕಾರೀ ಯೋಜನೆಗಳ ಅಡಿಯಲ್ಲಿ ಜೀರೂ ಖಾತೆಗಳನ್ನು ತೆಗೆಯುವ ಮಹತ್ವದ ಬಗ್ಗೆ ಸುಪ್ರೀಂ ಹೇಳಿದೆ.  ಇಂದು ಜನರು ತಮ್ಮ ಬ್ಯಾಂಕು ವಹಿವಾಟುಗಳನ್ನು ಡಿಜಿಟಲ್ ವಿಧಾನದ ಮೂಲಕ್ ಬಳಸುತ್ತಿದ್ದಾರೆ. ಆದ್ದರಿಂದ ಕಪ್ಪು ಹಣವನ್ನು ಪರಿಶೀಲಿಸುವ ಹೆಸರಿನಲ್ಲಿ ಅಂತಹ ಮತ್ತು ಇತರ ವ್ಯಕ್ತಿಗಳಿಗೆ ಆಧಾರ್ ಕಡ್ಡಾಯಗೊಳಿಸುವುದು ತೀರಾ ಅಸಮರ್ಥವಾದ ನಿಯಮವಾಗಿದೆ ಎಂದು ಸುಪ್ರೀಂ ತಿಳಿಸಿದೆ.

Trending News