Driver, Maid, ಬಾಡಿಗೆದಾರರನ್ನು ಇಡುವ ಮೊದಲು ಈ ರೀತಿ ಪರಿಶೀಲಿಸಿ ಅವರ Aadhaar ಸಂಖ್ಯೆ

ನಿಮಗೆ ಒದಗಿಸಲಾಗಿರುವ ಆಧಾರ್ ಸಂಖ್ಯೆ ನೈಜತೆಯಿಂದ ಕೂಡಿದೆಯೋ ಅಥವಾ ಇಲ್ಲವೋ ಅದನ್ನು ಆಧಾರ್ ನಂಬರ್ ವೆರಿಫಿಕೆಶನ್ ಮೂಲಕ ಕಂಡುಹಿಡಿಯಬಹುದು ಮತ್ತು ವಿವರಗಳನ್ನು ಹೊಂದಿಸಬಹುದು.

Last Updated : Jul 22, 2020, 04:12 PM IST
Driver, Maid, ಬಾಡಿಗೆದಾರರನ್ನು ಇಡುವ ಮೊದಲು ಈ ರೀತಿ ಪರಿಶೀಲಿಸಿ ಅವರ Aadhaar ಸಂಖ್ಯೆ title=

ನವದೆಹಲಿ: ಪ್ರಸ್ತುತ, ಬಹುತೇಕ ಕಡೆಗಳಲ್ಲಿ ಆಧಾರ್ ಕಾರ್ಡ್ ಅನ್ನು ಐಡಿ ಪುರಾವೆಯಾಗಿ ಸ್ವೀಕರಿಸಲಾಗುತ್ತಿದೆ. ಬಹುತೇಕ ಸ್ಥಳಗಳಲ್ಲಿ, ಆಧಾರ ದಾಖಲೆಯನ್ನುಮೊದಲು ನೀಡಲು ಹೇಳಲಾಗುತ್ತದೆ. ಆದರೆ ಪ್ರತಿ 12 ಅಂಕಿಯ ಸಂಖ್ಯೆ ಆಧಾರ್ ಅಲ್ಲ ಎಂದು ಆಧಾರ್-ಸಂಬಂಧಿತ ಸೇವೆಗಳೊಂದಿಗೆ ವ್ಯವಹರಿಸುವ ಪ್ರಾಧಿಕಾರ ಯುಐಡಿಎಐ ಹೇಳುತ್ತದೆ. ಆದ್ದರಿಂದ, ಯುಐಡಿಎಐ ಆಧಾರ್ ಸಂಖ್ಯೆಯನ್ನು ಪರಿಶೀಲಿಸುವ ಸೌಲಭ್ಯವನ್ನು ಒದಗಿಸುತ್ತದೆ. ಬಾಡಿಗೆದಾರ, ಮೆಡ್, ಕೆಲಸಗಾರ ಅಥವಾ ಚಾಲಕ ಇತ್ಯಾದಿಗಳನ್ನು ನೇಮಿಸಿಕೊಳ್ಳುತ್ತಿದ್ದರೆ, ಅವರು ಒದಗಿಸಿದ ಆಧಾರ್ ಸಂಖ್ಯೆ ನಿಜವಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಆಧಾರ್ ನಂಬರ್  ವೆರಿಫಿಕೆಶನ್ ನಿಂದ ಕಂಡುಹಿಡಿಯಬಹುದು ಮತ್ತು ವಿವರಗಳನ್ನು ಹೊಂದಿಸಬಹುದು.

ಯಾವುದೇ ವ್ಯಕ್ತಿಯನ್ನು ನೇಮಕ ಮಾಡುವ ಅಥವಾ ಬಾಡಿಗೆಗೆ ಇಟ್ಟುಕೊಳ್ಳುವ ಮೊದಲು, ಅವರ ಪರಿಶೀಲನೆ ಅಗತ್ಯವಾಗಿರುತ್ತದೆ ಇದರಿಂದ ಅವರು, ಅನುಮಾನಾಸ್ಪದ ವ್ಯಕ್ತಿಯಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಬಹುಶಃ ಯಾರಾದರೂ ಆಧಾರ್ ಸಂಖ್ಯೆ ಎಂದು ಹೇಳಿ  ನಕಲಿ ಸಂಖ್ಯೆಯನ್ನು ನೀಡುವ ಸಾಧ್ಯತೆ ಇದೆ. ಯುಐಡಿಎಐ ವೆಬ್‌ಸೈಟ್ ಮೂಲಕ ಆಧಾರ್ ಸಂಖ್ಯೆ ಪರಿಶೀಲನೆಯನ್ನು ನೀವು ಕೆಲವೇ ಸೆಕೆಂಡುಗಳಲ್ಲಿ ಪೂರ್ಣಗೊಳಿಸಬಹುದು ಮತ್ತು ಇದಕ್ಕಾಗಿ ಯಾವುದೇ ರೀತಿಯ ಶುಲ್ಕ ವಿಧಿಸಲಾಗುವುದಿಲ್ಲ. 

ಇಲ್ಲಿದೆ ಆಧಾರ್ ಸಂಖ್ಯೆ ಪರಿಶೀಲನೆಯ ಪ್ರೋಸೆಸ್
- ಇದಕ್ಕಾಗಿ ಮೊದಲು Www.uidai.gov.in ಗೆ ಭೇಟಿ ನೀಡಿ. ನಂತರ My Aadhaar' ವಿಭಾಗದ 'ಆಧಾರ್ ಸೇವೆಗಳು' ವಿಭಾಗದಲ್ಲಿ, 'ಆಧಾರ್ ಸಂಖ್ಯೆಯನ್ನು ಪರಿಶೀಲಿಸಿ' ಮೇಲೆ ಕ್ಲಿಕ್ ಮಾಡಿ.
- ಈಗ ಹೊಸದಾಗಿ ತೆರೆದ ಪುಟದಲ್ಲಿ ನಿಗದಿತ ಜಾಗದಲ್ಲಿ ನಿಮ್ಮ ಆಧಾರ್ ಸಂಖ್ಯೆ ಮತ್ತು ಭದ್ರತಾ ಕೋಡ್ ಅನ್ನು ನಮೂದಿಸಿ ಮತ್ತು 'ಪರಿಶೀಲಿಸು' ಕ್ಲಿಕ್ ಮಾಡಿ.
- ಪರಿಶೀಲನೆಯ ಮೇಲೆ ಕ್ಲಿಕ್ ಮಾಡಿದ ನಂತರ, ನೀವು ನಮೂದಿಸಿದ 12 ಅಂಕಿಯ ಸಂಖ್ಯೆ ವಾಸ್ತವವಾಗಿ ಆಧಾರ್ ಸಂಖ್ಯೆಯಾಗಿದ್ದರೆ ಮತ್ತು ಅದನ್ನು ನಿಷ್ಕ್ರಿಯಗೊಳಿಸದಿದ್ದರೆ, ನಿಮ್ಮ ಆಧಾರ್ ಸಂಖ್ಯೆ ಇರುವ ಮತ್ತು ಕಾರ್ಯನಿರ್ವಹಿಸುವ ಸ್ಥಿತಿಯು ವೆಬ್‌ಸೈಟ್‌ನಲ್ಲಿ ತೋರಿಸುತ್ತದೆ. - ಇಲ್ಲದಿದ್ದರೆ ಪರಿಶೀಲನೆ ಪೂರ್ಣಗೊಂಡ ಸಂದೇಶವನ್ನೂ ತೋರಿಸಲಾಗುತ್ತದೆ.

Trending News