ನವದೆಹಲಿ: ಇತ್ತೀಚಿಗೆ ಡಿಸ್ಕವರಿಯಲ್ಲಿ ಪ್ರಸಾರವಾದ 'ಮ್ಯಾನ್ Vs ವೈಲ್ಡ್' ವಿಶೇಷ ಸಂಚಿಕೆಯಲ್ಲಿ ಬಿಯರ್ ಗ್ರಿಲ್ಸ್ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಹಿಂದಿಯಲ್ಲಿ ಮಾತುಕತೆ ಹೇಗೆ ನಡೆಸಿದ್ದರು ಎನ್ನುವ ಕೂತುಹಲ ಇನ್ನು ಹಲವರಲ್ಲಿ ಇದೆ.ಆದರೆ ಈಗ ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.
ಪ್ರಧಾನಿ ಮೋದಿ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್' ನಲ್ಲಿ ರಹಸ್ಯಕ್ಕೆ ಕೊನೆಗೂ ಉತ್ತರ ನೀಡಿದ್ದಾರೆ. ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ತಮ್ಮಿಬ್ಬರ ನಡುವಿನ ಸಂಭಾಷಣೆಯಲ್ಲಿ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಲಾಗಿದೆ ಎಂದು ಅವರು ಹೇಳಿದರು."ನಾನು ಮಾತನಾಡುವಾಗಲೆಲ್ಲಾ ಅದನ್ನು ತಕ್ಷಣ ಇಂಗ್ಲಿಷ್‌ಗೆ ಅನುವಾದಿಸಲಾಯಿತು. ಬಿಯರ್ ಗ್ರಿಲ್ಸ್ ಅವರ ಕಿವಿಯಲ್ಲಿ ಸಣ್ಣ ಕಾರ್ಡ್‌ಲೆಸ್ ವಾದ್ಯವಿತ್ತು. ಹಾಗಾಗಿ ನಾನು ಹಿಂದಿಯಲ್ಲಿ ಮಾತನಾಡುತ್ತಿದ್ದೆ ಮತ್ತು ಅವರು ಅದನ್ನು ಇಂಗ್ಲಿಷ್‌ನಲ್ಲಿ ಕೇಳುತ್ತಿದ್ದರು...ಇದರಿಂದಾಗಿ ಸಂವಹನವು ತುಂಬಾ ಸುಲಭವಾಯಿತು. ಇದು ತಂತ್ರಜ್ಞಾನದ ಅದ್ಬುತ ಅಂಶವಾಗಿದೆ ಎಂದು ಪ್ರಧಾನಿ ವಿವರಿಸಿದರು.
This time, among the most number of comments for #MannKiBaat came on the episode of ‘Man Vs Wild’ including some interesting questions on how @BearGrylls and I conversed.
I’ve answered them during today’s episode. pic.twitter.com/rHoVXh0nSL
— Narendra Modi (@narendramodi) August 25, 2019
"ಎಪಿಸೋಡ್ ಅನ್ನು ನಂತರ ಎಡಿಟ್ ಮಾಡಲಾಗಿದೆಯೇ ? ಈ ಎಪಿಸೋಡ್‌ಗೆ ಎಷ್ಟು ಬಾರಿ ಶೂಟಿಂಗ್ ಮಾಡಲಾಗಿದೆ ಮತ್ತು ಅದು ಹೇಗೆ ? ಅವರು ಬಹಳ ಕುತೂಹಲದಿಂದ ಕೇಳುತ್ತಾರೆ ... ಇದರಲ್ಲಿ ಯಾವುದೇ ರಹಸ್ಯವಿಲ್ಲ. ಅನೇಕ ಜನರ ಮನಸ್ಸಿನಲ್ಲಿ ಈ ಪ್ರಶ್ನೆ ಇದೆ, ಹಾಗಾಗಿ ನಾನು ಬಿಚ್ಚಿಡುತ್ತೇನೆ ಬಿಯರ್ ಗ್ರಿಲ್ಸ್ ಅವರೊಂದಿಗಿನ ನನ್ನ ಸಂಭಾಷಣೆಯಲ್ಲಿ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು ಎಂಬುದು ಒಂದು ರೀತಿಯಲ್ಲಿ ರಹಸ್ಯವಲ್ಲ' ಎಂದು ಪ್ರಧಾನಿ ಹೇಳಿದರು.
ಕಾರ್ಯಕ್ರಮದ ಪ್ರಸಾರದ ನಂತರ, ಹೆಚ್ಚಿನ ಸಂಖ್ಯೆಯ ಜನರು ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದ ಬಗ್ಗೆ ಚರ್ಚಿಸುತ್ತಿದ್ದಾರೆ ಎಂದು ಅವರು ಹೇಳಿದರು. "ನೀವು ಪ್ರಕೃತಿ ಮತ್ತು ವನ್ಯಜೀವಿಗಳು ಮತ್ತು ಪ್ರಾಣಿಗಳಿಗೆ ಸಂಬಂಧಿಸಿದ ತಾಣಗಳನ್ನು ಸಹ ಭೇಟಿ ಮಾಡಬೇಕು. ನಾನು ಮೊದಲೇ ಹೇಳಿದಂತೆ ಮತ್ತು ನಿಮ್ಮ ಜೀವಿತಾವಧಿಯಲ್ಲಿ ನೀವು ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಬೇಕು ಎಂದು ಕೇಳಿಕೊಳ್ಳುತ್ತೇನೆ' ಎಂದು ಅವರು ಹೇಳಿದರು.