ಹಿಂದೂಗಳು ಸತ್ಯದ ಮಾರ್ಗ ಅನುಸರಿಸುತ್ತಾರೆ, ಹಿಂದುತ್ವ ಧರ್ಮದ ನೆಪದಲ್ಲಿ ಲೂಟಿ ಮಾಡುತ್ತಿದೆ: ರಾಹುಲ್ ಗಾಂಧಿ

Rahul Gandhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಹಿಂದೂ ಮತ್ತು ಹಿಂದುತ್ವದ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ.

Edited by - Zee Kannada News Desk | Last Updated : Dec 23, 2021, 10:13 AM IST
  • ಮತ್ತೊಮ್ಮೆ ಹಿಂದೂ ಮತ್ತು ಹಿಂದುತ್ವದ ಬಗ್ಗೆ ಹೇಳಿಕೆ ನೀಡಿದ ರಾಹುಲ್ ಗಾಂಧಿ
  • ಹಿಂದೂಗಳು ಸತ್ಯದ ಮಾರ್ಗವನ್ನು ಅನುಸರಿಸುತ್ತಾರೆ
  • ಹಿಂದುತ್ವವು ಧರ್ಮದ ಸೋಗಿನಲ್ಲಿ ಲೂಟಿ ಮಾಡುತ್ತಿದೆ
  • ಹಿಂದೂ ಧರ್ಮ ಮತ್ತು ಹಿಂದುತ್ವದ ನಡುವೆ ಹೋಲಿಕೆ ಮಾಡಿದ ಕೈ ನಾಯಕ
ಹಿಂದೂಗಳು ಸತ್ಯದ ಮಾರ್ಗ ಅನುಸರಿಸುತ್ತಾರೆ, ಹಿಂದುತ್ವ ಧರ್ಮದ ನೆಪದಲ್ಲಿ ಲೂಟಿ ಮಾಡುತ್ತಿದೆ: ರಾಹುಲ್ ಗಾಂಧಿ title=
ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress leader Rahul Gandhi) ಮತ್ತೊಮ್ಮೆ ಹಿಂದೂ ಮತ್ತು ಹಿಂದುತ್ವದ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ. ಹಿಂದೂ ಧರ್ಮ ಮತ್ತು ಹಿಂದುತ್ವದ ನಡುವೆ ಮಗದೊಮ್ಮೆ ಹೋಲಿಕೆ ಮಾಡಿದ್ದಾರೆ. 

ಹಿಂದೂಗಳು (Hindus) ಸತ್ಯದ ಮಾರ್ಗವನ್ನು ಅನುಸರಿಸುತ್ತಾರೆ. ಆದರೆ ಹಿಂದುತ್ವ (Hindutva) ಧರ್ಮದ ನೆಪದಲ್ಲಿ ಲೂಟಿ ಮಾಡುತ್ತದೆ ಎಂದು ಬುಧವಾರ ರಾಹುಲ್ ಗಾಂಧಿ ಹೇಳಿದ್ದಾರೆ. 

 

 

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ (Rahul Gandhi), "ಹಿಂದೂಗಳು ಸತ್ಯದ ಮಾರ್ಗವನ್ನು ಅನುಸರಿಸುತ್ತಾರೆ, ಹಿಂದುತ್ವವು ಧರ್ಮದ ಸೋಗಿನಲ್ಲಿ ಲೂಟಿ ಮಾಡುತ್ತದೆ" ಎಂದಿದ್ದಾರೆ.

ಕೇರಳ ಕಾಂಗ್ರೆಸ್ ಹಿರಿಯ ನಾಯಕ ಪಿ.ಟಿ.ಥಾಮಸ್ ನಿಧನಕ್ಕೆ ಸಂತಾಪ:

ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಕಾರ್ಯಾಧ್ಯಕ್ಷ ಪಿ.ಟಿ.ಥಾಮಸ್ (Kerala Congress Working President PT Thomas) ಅವರ ನಿಧನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಸಂತಾಪ ಸೂಚಿಸಿದ್ದಾರೆ.  ಪಿ.ಟಿ.ಥಾಮಸ್ ಪಕ್ಷದ ದೊಡ್ಡ ಆಸ್ತಿ ಎಂದು ಕರೆದಿದ್ದಾರೆ.

 

 

ಹಿರಿಯ ಕಾಂಗ್ರೆಸ್ ನಾಯಕ, ಹಾಲಿ ಶಾಸಕ ಪಿಟಿ ಥಾಮಸ್ (PT Thomas) ದೀರ್ಘಕಾಲದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.  ತಮಿಳುನಾಡಿನ ವೆಲ್ಲೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ವಿಧಿವಶರಾಗಿದ್ದಾರೆ.

ಅವರ ಅಗಲಿಕೆಗೆ ಟ್ವೀಟ್ ಮೂಲಕ ಸಂತಾಪ ಸಲ್ಲಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ಪಿ.ಟಿ.ಥಾಮಸ್ ಅವರ ನಿಧನದ ಬಗ್ಗೆ ತಿಳಿದು ನನಗೆ ದುಃಖವಾಗಿದೆ. ಕಾಂಗ್ರೆಸ್ ಪಕ್ಷ ಮತ್ತು ಕೇರಳ ರಾಜ್ಯಕ್ಕೆ ಅವರ ವಿವಿಧ ಕೊಡುಗೆ ಅಪಾರ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ದುಃಖ ಭರಿಸುವ ಶಕ್ತಿ ನೀಡಲಿ" ಎಂದಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಯವರ ಫೋನ್ ಸಂಖ್ಯೆ ಮತ್ತು ಇಮೇಲ್ ಐಡಿ ನಿಮಗೆ ತಿಳಿದಿದೆಯೇ? ಇಲ್ಲಿದೆ ನೋಡಿ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News