ವಿವಾದಿತ ಭೂಮಿಯಲ್ಲಿ ರಾಮಮಂದಿರ, ಮಸೀದಿಗೆ ಬದಲಿ ಭೂಮಿ; ಅಯೋಧ್ಯೆ ತೀರ್ಪಿನ ಹೈಲೈಟ್ಸ್

ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಿಸಲು ಮತ್ತು ಮಸೀದಿಗೆ ಪರ್ಯಾಯ ಭೂಮಿ ನೀಡಲು ಸಾಂವಿಧಾನಿಕ ಪೀಠವು ಸರ್ಕಾರಕ್ಕೆ 3-4 ತಿಂಗಳ ಗಡುವು ನೀಡಿದೆ.  

Last Updated : Nov 9, 2019, 12:03 PM IST
ವಿವಾದಿತ ಭೂಮಿಯಲ್ಲಿ ರಾಮಮಂದಿರ, ಮಸೀದಿಗೆ ಬದಲಿ ಭೂಮಿ; ಅಯೋಧ್ಯೆ ತೀರ್ಪಿನ ಹೈಲೈಟ್ಸ್ title=

ನವದೆಹಲಿ: ವಿವಾದಿತ ರಾಮಜನ್ಮಭೂಮಿ ಮತ್ತು ಬಾಬರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠದಿಂದ ಐತಿಹಾಸಿಕ ತೀರ್ಪು ಪ್ರಕಟವಾಗಿದೆ. ಐತಿಹಾಸಿಕ ತೀರ್ಪು ಓದಿದ ಸರ್ವೋಚ್ಚ ನ್ಯಾಯಾಲಯದ ​ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್, ವಿವಾದಿತ 2.77 ಎಕರೆ ಭೂಮಿಯ ಸಂಪೂರ್ಣ ಹಕ್ಕು ರಾಮ ಲಲ್ಲಾ ಹಕ್ಕು ಎಂದು ಆದೇಶ ನೀಡಿದೆ. ರಾಮಮಂದಿರ ನಿರ್ಮಾಣಕ್ಕೆ ಸೂಕ್ತ ಕಾನೂನು ರೂಪಿಸಲು ಕೇಂದ್ರ ಸರಕಾರಕ್ಕೆ ಆದೇಶಿಸಿದ ಸಾಂವಿಧಾನಿಕ ಪೀಠ, ಅದರ ಸಂಪೂರ್ಣ ಹೊಣೆ ಕೇಂದ್ರ ಸರ್ಕಾರಕ್ಕೆ ಸೇರಿದ್ದು ಎಂದು ತೀರ್ಪು ನೀಡಿದೆ. ಇದೇ ವೇಳೆ ಮಸೀದಿ ನಿರ್ಮಾಣಕ್ಕೆ ಸುನ್ನಿ ವಕ್ಫ್ ಬೋರ್ಡ್ ಗೆ ಪ್ರತ್ಯೇಕ 05 ಎಕರೆ ಜಾಗವನ್ನು ನೀಡಲು ಆದೇಶಿಸಿರುವ ಸಿಜೆಐ ನೇತೃತ್ವದ ಸಾಂವಿಧಾನಿಕ ಪೀಠ, ಸುನ್ನಿ ವಕ್ಫ್ ಬೋರ್ಡ್ ಗೆ ಅಯೋಧ್ಯೆಯಲ್ಲೇ ಪರ್ಯಾಯ ಜಾಗವನ್ನು ನೀಡಬೇಕು ಎಂದು ನಿರ್ದೇಶಿಸಿದೆ.

ವಿವಾದಿತ ಭೂಮಿಯಲ್ಲಿ ರಾಮಮಂದಿರಕ್ಕೆ 'ಗ್ರೀನ್ ಸಿಗ್ನಲ್' ನೀಡಿ, ಮಸೀದಿ ನಿರ್ಮಾಣಕ್ಕೆ ಪರ್ಯಾಯ ಭೂಮಿ ನೀಡುವಂತೆ ಆದೇಶಿಸಿರುವ ಸುಪ್ರೀಂಕೋರ್ಟ್ ಅಯೋಧ್ಯೆ ತೀರ್ಪಿನ ಹೈಲೈಟ್ಸ್...

* ಅಯೋಧ್ಯೆ ತೀರ್ಪು ಐವರು ನ್ಯಾಯಮೂರ್ತಿಗಳ ಸರ್ವಾನುಮತದ ತೀರ್ಪು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹೇಳಿದರು.
* ಶಿಯಾ ವಕ್ಫ್ ಮಂಡಳಿ, ನಿರ್ಮೋಹಿ ಅಖಾಡದ ಅರ್ಜಿ ವಜಾ. ನಿರ್ಮೋಹಿ ಅಖಾಡದ ವಾದಕ್ಕೆ ಇತಿಮಿತಿ ಇದೆ. ಆರ್ಟಿಕಲ್​ 120ರ ಅಡಿ ಇತಿಮಿತಿ ಎಂದ ನ್ಯಾಯಪೀಠ  ನಿರ್ಮೋಹಿ ಅಖಾಡಕ್ಕೆ ಪೂಜೆಯ ಅಧಿಕಾರವಿಲ್ಲ.
* ರಾಮಲಲ್ಲಾ ಮುಖ್ಯ ಅರ್ಜಿದಾರ.
* 1949ರಲ್ಲಿ 2 ಮೂರ್ತಿಗಳನ್ನು ಇಡಲಾಗಿತ್ತು ಎಂದು ವಾದಿಸಿದ್ದಾರೆ.
* ಮಸೀದಿ ಯಾವಾಗ ನಿರ್ಮಾಣ ಆಗಿದೆ ಎಂಬುದು ಮುಖ್ಯವಲ್ಲ.
* ಕೋರ್ಟ್ ಜನರ ನಂಬಿಕೆಯನ್ನು ಒಪ್ಪಿಕೊಳ್ಳುತ್ತದೆ ಮತ್ತು ನ್ಯಾಯಾಲಯದಲ್ಲಿ ಜನರ ಭಾವನೆಗಳಿಗೆ ಬೆಲೆಯಿದೆ.
* ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ವಜಾಗೊಳಿಸುವ ಬೇಡಿಕೆ ಸರಿಯಲ್ಲ.

ಪುರಾತತ್ವ ಇಲಾಖೆ ಸಾಕ್ಷ್ಯಗಳನ್ನು ತೀರ್ಪಿನಲ್ಲಿ ಪರಿಗಣಿಸಲಾಗಿದೆ:
* ಬಾಬರಿ ಮಸೀದಿ ಖಾಲಿ ಸ್ಥಳದಲ್ಲಿ ನಿರ್ಮಾಣವಾಗಿರಲಿಲ್ಲ.
* ಕಂದಾಯ ದಾಖಲೆಯ ಪ್ರಕಾರ ವಿವಾದಿತ ಜಮೀನು ಸರ್ಕಾರಿ ಜಮೀನು.
* ಮಸೀದಿ ಅಡಿಪಾಯದ ಕೆಳಗೆ ವಿಶಾಲ ರಚನೆ ಇತ್ತು.
* ಕಲಾಕೃತಿಗಳು ಇಸ್ಲಾಮಿಕ್ ರಚನೆಯಾಗಿರಲಿಲ್ಲ.
* ಉತ್ಖನನ ವೇಳೆ ಸಿಕ್ಕ ಕಲಾಕೃತಿಗಳು ಇಸ್ಲಾಮಿಕ್ ಆಗಿರಲಿಲ್ಲ.

ರಾಮ ಅಯೋಧ್ಯೆಯಲ್ಲಿಯೇ ಹುಟ್ಟಿದ್ದರ ಬಗ್ಗೆ ವಿವಾದವಿಲ್ಲ:
* ಹಿಂದೂಗಳು ಅಯೋಧ್ಯೆಯನ್ನು ರಾಮ ಜನ್ಮಭೂಮಿ ಎಂದು ನಂಬುತ್ತಾರೆ. 
* ಮಸೀದಿಯ ಪ್ರಮುಖ ಗುಂಬಜ್ ಅನ್ನು ರಾಮಜನ್ಮ ಭೂಮಿಯ ಸ್ಥಳ ಎಂದು ಜನರು ನಂಬುತ್ತಾರೆ.
* ರಾಮ ಅಯೋಧ್ಯೆಯಲ್ಲೇ ಹುಟ್ಟಿದ್ದ ಅನ್ನೋ ಬಗ್ಗೆ ಯಾವುದೇ ವಿವಾದವಿಲ್ಲ.
* ವಿವಾದಿತ ಜಾಗದಲ್ಲೇ ಹಿಂದೂಗಳು ಪೂಜೆ ಮಾಡುತ್ತಾ ಬಂದಿದ್ದಾರೆ.
* ಚಬೂತರ್, ಸೀತಾ ರಸೋಯಿ, ಭಂಡಾರಗಳೆಲ್ಲಾ ರಾಮನ ಹುಟ್ಟಿಗೆ ಪುಷ್ಠಿ ನೀಡಿವೆ.
* ಪುರಾಣಗಳಲ್ಲೂ ರಾಮಲಲ್ಲಾ ಬಗ್ಗೆ ಉಲ್ಲೇಖವಿದೆ. ಈ ಪ್ರದೇಶದಲ್ಲಿ ಹಿಂದೂಗಳು ಪರಿಕ್ರಮವನ್ನೂ ಮಾಡುತ್ತಿದ್ದರು.
* ಕೇವಲ ನಂಬಿಕೆಯಿಂದ ಹಕ್ಕನ್ನು ಸಾಬೀತು ಮಾಡಲು ಸಾಧ್ಯವಿಲ್ಲ. ಕಾನೂನಿಂದ ಆಧಾರದ ಮೇಲೆ ಭೂಮಿಯ ಹಕ್ಕನ್ನು ನಿರ್ಧರಿಸಲಾಗುತ್ತೆ. ಆದರೆ ಸ್ವಾಧೀನದ ಆಧಾರದ ಮೇಲೆ ಭೂಮಿಯ ಹಕ್ಕನ್ನು ಕೇಳುವಂತಿಲ್ಲ.
* ವಿವಾದಿತ ಜಾಗದಲ್ಲಿ ಹಿಂದೂ-ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿದ್ದರು.
* ಮಸೀದಿಯ ಕೆಳಗಡೆ ಇರುವುದು ಹಿಂದೂ ರಚನೆ ಎಂದು ನಂಬಲು ಸಾಧ್ಯವಿಲ್ಲ.
* 1856 ರಿಂದ 1857ರವರೆಗೆ ನಮಾಜ್ ಮಾಡಲಾಗುತ್ತಿತ್ತು ಅನ್ನೋದಕ್ಕೆ ಸಾಕ್ಷಿ ಇಲ್ಲ.
* ಬ್ರಿಟಿಷರು ಆ ಜಾಗವನ್ನು ಪ್ರತ್ಯೇಕವಾಗಿ ವಿಭಾಗಿಸಿ ಬೇಲಿ ಹಾಕಿದ್ದರು.
* ಮಸೀದಿಯ ಒಳಬಾಗದಲ್ಲಿ ಹಿಂದೂಗಳೂ ಕೂಡ ಪೂಜೆ ಮಾಡುತ್ತಿದ್ದರು.
* ಮಸೀದಿಯ ಮುಖ್ಯ ಗುಂಬಜ್ ನ ಕೆಳಭಾಗದಲ್ಲಿ ಗರ್ಭಗುಡಿ ಇತ್ತೆಂದು ನಂಬಲಾಗ್ತಿದೆ.

ಇತಿಹಾಸಕಾರರ ವಿವರಣೆ, ಪುರಾತತ್ವ ಸಾಕ್ಷ್ಯ ಹಿಂದೂಗಳ ಪರವಾಗಿದೆ:
ಬಾಬರಿ ಮಸೀದಿಯನ್ನು ಖಾಲಿ ಜಾಗದಲ್ಲಿ ನಿರ್ಮಿಸಿದ್ದಲ್ಲ, ಆ ಜಾಗದಲ್ಲಿ ದೊಡ್ಡ ಕಟ್ಟಡವಿತ್ತು. ಆದರೆ ಆ ಕಟ್ಟಡ ಇಸ್ಲಾಮಿಕ್ ಮೂಲದ್ದಲ್ಲ. ಈ ಕಟ್ಟಡದಲ್ಲಿ ಇಸ್ಲಾಮೇತರ ಕಟ್ಟಡದ ಅವಶೇಷವಿತ್ತು ಎಂದು ಪುರಾತತ್ವ ಇಲಾಖೆ ಹೇಳಿದೆ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪುನಲಿ ಹೇಳಿಕೆ ನೀಡಿದೆ.
* ಮಂದಿರವನ್ನು ಧ್ವಂಸ ಮಾಡಿರುವ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ ಎಂದು ಪುರಾತತ್ವ ಇಲಾಖೆಯ ಶೋಧನೆಯನ್ನು ಮಾನ್ಯ ಮಾಡಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್
* ಮಸೀದಿಯ ಒಳಭಾಗದ ಕುರಿತೂ ಕೂಡ ವಿವಾದವಿದೆ.
* ವಿವಾದಿತ ಜಾಗದಲ್ಲಿ 1949ರ ನಂತರ ನಮಾಜ್ ನಡೆದಿಲ್ಲ. ಈಗಿರುವ ಮಸೀದಿ ಧರ್ಮದ ಪ್ರಕಾರ ಕಟ್ಟಿಲ್ಲ. ಆದರೆ ಮಸೀದಿಗೆ ಹಾನಿ ಮಾಡಿದ್ದು ಕಾನೂನು ಉಲ್ಲಂಘನೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

- ಅಲಹಬಾದ್ ಕೋರ್ಟ್ ವಿವಾದಿತ ಸ್ಥಳವನ್ನು ಮೂರು ಭಾಗಗಳಾಗಿ ಮಾಡಿರುವುದು ಸರಿ ಎಂದು ಯಾರೂ ಒಪ್ಪುತ್ತಿಲ್ಲ. ಇದು ತಾರ್ಕಿಕವಲ್ಲ ಎಂದು ಸಾಂವಿಧಾನಿಕ ಪೀಠವೂ ಅಭಿಪ್ರಾಯ ವ್ಯಕ್ತಪಡಿಸಿದೆ.

Trending News