Video: ಪ್ರವಾಸಿಗರಿಗೆ ತೆರೆದ ಮನಾಲಿ-ಲೇಹ್ ಹೆದ್ದಾರಿ, ರಸ್ತೆಯ ಎರಡೂ ಬದಿಗಳಲ್ಲಿ ಹಿಮದ ಗೋಡೆ

ಈ ಮಾರ್ಗದಲ್ಲಿ, ಪ್ರವಾಸಿಗರ ಸಂಚಾರ ಆರಂಭವಾದಾಗಿನಿಂದ, ಕಣ್ಮನ ಸೆಳೆಯುವ ವೀಡಿಯೋಗಳು ಮತ್ತು ಚಿತ್ರಗಳು ಸಹ ಹೊರಬರುತ್ತಿವೆ. ರಸ್ತೆಯ ಎರಡೂ ಮದಿಗಳಲ್ಲಿ ಮಂಜುಗಡ್ಡೆಯಿಂದ ನಿರ್ಮಾಣವಾಗಿರುವ ಗೋಡೆಗಳ ದೃಶ್ಯವನ್ನು ಸ್ಪಷ್ಟವಾಗಿ ಕಾಣಬಹುದು.   

Last Updated : Jun 17, 2019, 11:04 AM IST
Video: ಪ್ರವಾಸಿಗರಿಗೆ ತೆರೆದ ಮನಾಲಿ-ಲೇಹ್ ಹೆದ್ದಾರಿ, ರಸ್ತೆಯ ಎರಡೂ ಬದಿಗಳಲ್ಲಿ ಹಿಮದ ಗೋಡೆ title=

ನವದೆಹಲಿ: 8 ತಿಂಗಳ ನಂತರ, ಮನಾಲಿ-ಲೇಹ್ ಹೆದ್ದಾರಿ ಪ್ರವಾಸಿಗರಿಗಾಗಿ ಮುಕ್ತವಾಗಿದೆ. ಮನಾಲಿ-ಲೇಹ್ ಹೆದ್ದಾರಿಯ ಸುಂದರ ನೋಟಗಳನ್ನು ಪ್ರವಾಸಿಗಳು ಆನಂದಿಸುತ್ತಿದ್ದಾರೆ. ಮನಾಲಿ-ಲೇಹ್ ಹೆದ್ದಾರಿಯಲ್ಲಿ ಪ್ರವಾಸಿಗರ ಸಂಚಾರಕ್ಕೆ ಅನುವು ಮಾಡಿದಾಗಿನಿಂದ ದಿನೇ ದಿನೇ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.

ಈ ಮಾರ್ಗದಲ್ಲಿ, ಪ್ರವಾಸಿಗರ ಸಂಚಾರ ಆರಂಭವಾದಾಗಿನಿಂದ, ಕಣ್ಮನ ಸೆಳೆಯುವ ವೀಡಿಯೋಗಳು ಮತ್ತು ಚಿತ್ರಗಳು ಸಹ ಹೊರಬರುತ್ತಿವೆ. ರಸ್ತೆಯ ಎರಡೂ ಮದಿಗಳಲ್ಲಿ ಮಂಜುಗಡ್ಡೆಯಿಂದ ನಿರ್ಮಾಣವಾಗಿರುವ ಗೋಡೆಗಳ ದೃಶ್ಯವನ್ನು ಸ್ಪಷ್ಟವಾಗಿ ಕಾಣಬಹುದು. ಪ್ರವಾಸಿಗರ ಸಂಚಾರಕ್ಕೆ ಈ ಮಾರ್ಗ ತೆರೆಯುವುದರಿಂದ ಪ್ರವಾಸಿಗರಿಗೆ ಲೇಹ್ ಲಡಾಖ್ ತಲುಪಲು ತುಂಬಾ ಸುಲಭವಾಗಿದೆ. ಇದರಿಂದಾಗಿ ಪ್ರತಿದಿನ ಸಾವಿರಾರು ಪ್ರವಾಸಿಗರು ತಲುಪುತ್ತಾರೆ. ಜೂನ್ 7 ರಂದು ಈ ಮಾರ್ಗವನ್ನು ತೆರೆಯಲಾಗಿದ್ದು, 4-5 ದಿನಗಳ ನಂತರ ಪ್ರವಾಸಿಗರ ಆಗಮನ  ಪ್ರಾರಂಭಿಸಲಾಯಿತು.

ಈ ಮಾರ್ಗದಲ್ಲಿ, ರೋಹ್ಟಂಗ್ ಪಾಸ್ ಜೊತೆಗೆ, ಡಾರ್ವಾ, ಜಿಂಗ್ಜಿಂಗ್ಬರ್ ಮತ್ತು ಬರಾಲಾಚಾಗಳಂತಹ ಹಲವಾರು ಪಾಸ್ಗಳು 16000 ಅಡಿ ಎತ್ತರದಲ್ಲಿವೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಪ್ರಕೃತಿ ಸೌಂದರ್ಯದ ವಿಭಿನ್ನ ನೋಟವನ್ನು ಪಡೆಯುತ್ತಾರೆ. ಚಳಿಗಾಲದ ಸಮಯದಲ್ಲಿ ಹೆದ್ದಾರಿಯಲ್ಲಿ ಹಿಮದ ಗೋಡೆಗಳು ನಿರ್ಮಾಣವಾಗುತ್ತವೆ. ಈ ವೇಳೆ ಸಂಚಾರವನ್ನು ಸುಗಮಗೊಳಿಸುವ ಸಲುವಾಗಿ ರಸ್ತೆಯ ಮೇಲಿನ ಹಿಮ ತೆಗೆಯುವ ಕೆಲಸ ನಿರಂತರವಾಗಿ ಸಾಗುತ್ತಿರುತ್ತದೆ. ಆದರೆ ಈ ಪಾಸ್‌ಗಳಲ್ಲಿ ಇನ್ನೂ ಹಿಮ ನಿಕ್ಷೇಪಗಳಿವೆ, ಆದ್ದರಿಂದ ಜನರು ಮನಾಲಿ-ಲೇಹ್ ಹೆದ್ದಾರಿಯಲ್ಲಿ ಈ ಹೆಚ್ಚಿನ ಹಿಮಪಾತವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

Trending News