ರಾಂಚಿ: ಮೇವು ಹಗರಣದ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದ ವಿಚಾರವಾಗಿ ಜಾಮೀನು ಕೋರಿ ಸಲ್ಲಿಸಿದ್ದ ಲಾಲು ಪ್ರಸಾದ್ ಯಾದವ್ ರ ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ತಿರಸ್ಕರಿಸಿದೆ.
ಮೇವು ಹಗರಣದ ಭಾಗವಾಗಿ ದಿಯೋಘರ್ ಖಜಾನೆಯಲ್ಲಿ 89.27 ಲಕ್ಷ ರೂ ತೆಗೆದುಕೊಂಡಿದ್ದೆರೆಂದು ಅವರ ಮೇಲೆ ಪ್ರಕರಣ ದಾಖಲಾಗಿತ್ತು, ಈ ವಿಚಾರವಾಗಿ ಅವರು ಜಾಮೀನು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು, ಆದರೆ ಅದನ್ನು ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ.
ಲಾಲೂ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಅಪರೇಶ್ ಕುಮಾರ್ ಸಿಂಗ್ ಮೇವು ಹಗರಣ ನಡೆದ ವೇಳೆ ಲಾಲು ಪ್ರಸಾದರವರು ಬಿಹಾರದ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾಗಿದ್ದರು, ಆದ್ದರಿಂದ ಈ ಹಗರಣ ಅವರ ಸಮ್ಮುಖದಲ್ಲಿಯೇ ನಡೆದಿದೆ ಎಂದು ಹೇಳಿ ಅವರ ಅರ್ಜಿ ತಿರಸ್ಕರಣೆಗೆ ಕಾರಣ ನೀಡಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.