ನವದೆಹಲಿ : ಜಮಾತ್-ಉದ್-ದವಾ (ಜ್ಯುದಿ) ಭಯೋತ್ಪಾದಕ ಹಫೀಜ್ ಸಯೀದ್ ಪಾಕಿಸ್ತಾನದಲ್ಲಿ ಗೃಹ ಬಂಧನದಿಂದ ಬಿಡುಗಡೆಗೊಂಡ ಬಳಿಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯ ರಾಜತಾಂತ್ರಿಕ ನಿಲುವಿನ ಮೇಲೆ ದಾಳಿ ನಡೆಸಿದ್ದಾರೆ.
ಪಾಕಿಸ್ತಾನದಲ್ಲಿ ಗೃಹ ಬಂಧನಕ್ಕೊಳಗಾಗಿದ್ದ ಜಮಾತ್-ಉದ್-ದವಾ ಮುಖ್ಯಸ್ಥ ಹಫೀಜ್ ಬಿಡುಗಡೆಗೊಂಡಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ''ನರೇಂದ್ರ ಭಾಯ್...ಮಾತು ಫಲ ಕೊಡಲಿಲ್ಲ. ಭಯೋತ್ಪಾದನೆಯ ಮಾಸ್ಟರ್ ಮೈಂಡ್ ಬಿಡುಗಡೆಯಾಗಿದ್ದಾನೆ. ಲಷ್ಕರ್-ಇ-ತೊಯ್ಬಾದಿಂದ ಪಾಕಿಸ್ತಾನ ಸೇನೆಗೆ ಹಣ ಹೂಡಿಕೆಯನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ತಳ್ಳಿಹಾಕಿದ್ದಾರೆ. ಹಗ್'ಪ್ಲೊಮಸಿ (ಅಪ್ಪುಗೆಯ ರಾಜತಂತ್ರ) ವಿಫಲವಾಗಿದೆ'' ಎಂದು ಬರೆಯುವ ಮೂಲಕ ಪ್ರಧಾನಿ ಮೋದಿಯವರ ನಡೆಯನ್ನು ಟೀಕಿಸಿದ್ದಾರೆ.
Narendrabhai, बात नहीं बनी. Terror mastermind is free. President Trump just delinked Pak military funding from LeT. Hugplomacy fail. More hugs urgently needed.https://t.co/U8Bg2vlZqw
— Office of RG (@OfficeOfRG) November 25, 2017
ಪ್ರಧಾನಿ ಮೋದಿ ಅವರು ತಮ್ಮ ವಿದೇಶ ಪ್ರವಾಸದ ಸಂದರ್ಭದಲ್ಲಿ ಅಲ್ಲಿನ ನಾಯಕರನ್ನು ತಬ್ಬಿಕೊಂಡು ಅಭಿನಂದಿಸುತ್ತಿರುವ ಫೋಟೋಗಳು ಎಲ್ಲೆಡೆ ಪ್ರಸಿದ್ಧಿಯಾಗಿವೆ. ಅವುಗಳಲ್ಲಿ ಹೆಚ್ಚು 2015ರ ಡಿಸೆಂಬರ್ನಲ್ಲಿ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಪ್ ಅವರೊಂದಿಗೆ ಮತ್ತು ಈ ವರ್ಷ ಜೂನ್ ನಲ್ಲಿ ಶ್ವೇತ ಭವನದಲ್ಲಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗಿನ ಫೋಟೋಗಳು ಎಂಬುದು ಗಮನಾರ್ಹ.
ಕೆಲವೇ ಗಂಟೆಗಳ ಮುಂಚೆ, ಅಮೇರಿಕ ಹಿಜ್ಬ್-ಉಲ್-ಮುಜಾಹಿದೀನ್ ನ ಸೈಯದ್ ಸಲಾಹದ್ದೀನ್ ಅನ್ನು ವಿಶೇಷವಾಗಿ ಗೊತ್ತುಪಡಿಸಿದ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದೆ. ಆದಾಗ್ಯೂ, ಭಯೋತ್ಪಾದನೆ ನಿಗ್ರಹಕ್ಕಾಗಿ ಪಾಕಿಸ್ತಾನದ ಮೇಲೆ ಒತ್ತಡ ಹೆಚ್ಚುತ್ತಿದ್ದರೂ, ಅಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಮತ್ತಷ್ಟು ಹೆಚ್ಚಾಗುತ್ತಿದೆ.
ಹಿಂದಿನ ವರ್ಷದಲ್ಲಿ, ಯು.ಎಸ್. ಕಾರ್ಯದರ್ಶಿ ರೆಕ್ಸ್ ಟಿಲ್ಲರ್ಸನ್ ಅವರು, ಪಾಕಿಸ್ತಾನದಲ್ಲಿ ಹುಟ್ಟುತ್ತಿರುವ ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ತನ್ನ ಪಾತ್ರವನ್ನು ಹೆಚ್ಚಿಸುವಂತೆ ಪಾಕಿಸ್ಥಾನವನ್ನು ಒತ್ತಾಯಿಸಿದ್ದರು. ಭಾರತವೂ ಸಹ ಗಡಿನಾಡಿನ ಭಯೋತ್ಪಾದನೆಗೆ ಪಾಕಿಸ್ತಾನವನ್ನು ದೂಷಿಸುತ್ತಿದ್ದು, ಹಫೀಜ್ ಸಯೀದ್ ಅವರ ಬಿಡುಗಡೆ ಅತಿರೇಕದ ನಡೆ ಎಂದು ತೀವ್ರವಾಗಿ ಪ್ರತಿಕ್ರಿಯಿಸಿದೆ.