Gujarat Assembly Election Exit Poll Results 2022 : ಗುಜರಾತ್‌ನಲ್ಲಿ ಬಿಜೆಪಿಗೆ ಸತತ 7ನೇ ಬಾರಿ ಹ್ಯಾಟ್ರಿಕ್ ಗೆಲುವಾಗಲಿದೆ!

Gujarat Assembly Election Exit Poll : ಗುಜರಾತ್ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ ನಲ್ಲಿ ಬಿಜೆಪಿ ಇದುವರೆಗಿನ ಎಲ್ಲಾ ದಾಖಲೆಗಳನ್ನು ಇಂದಿಕ್ಕಲಿದೆ. ಗುಜರಾತ್‌ನಲ್ಲಿ ಭಾರತೀಯ ಜನತಾ ಪಕ್ಷವು 125 ಸ್ಥಾನಗಳನ್ನು ಗೆಲ್ಲಲಿದೆ.

Written by - Channabasava A Kashinakunti | Last Updated : Dec 5, 2022, 10:52 PM IST
  • ಗುಜರಾತ್ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್
  • ಇದುವರೆಗಿನ ಎಲ್ಲಾ ದಾಖಲೆಗಳನ್ನು ಇಂದಿಕ್ಕಲಿದೆ ಬಿಜೆಪಿ
  • ಗುಜರಾತ್‌ನಲ್ಲಿ ಭಾರತೀಯ ಜನತಾ ಪಕ್ಷವು 125 ಸ್ಥಾನ
Gujarat Assembly Election Exit Poll Results 2022 : ಗುಜರಾತ್‌ನಲ್ಲಿ ಬಿಜೆಪಿಗೆ ಸತತ 7ನೇ ಬಾರಿ ಹ್ಯಾಟ್ರಿಕ್ ಗೆಲುವಾಗಲಿದೆ! title=

Gujarat Assembly Election Exit Poll : ಗುಜರಾತ್ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ ನಲ್ಲಿ ಬಿಜೆಪಿ ಇದುವರೆಗಿನ ಎಲ್ಲಾ ದಾಖಲೆಗಳನ್ನು ಇಂದಿಕ್ಕಲಿದೆ. ಗುಜರಾತ್‌ನಲ್ಲಿ ಭಾರತೀಯ ಜನತಾ ಪಕ್ಷವು 125 ಸ್ಥಾನಗಳನ್ನು ಗೆಲ್ಲಲಿದೆ. ಈ ಬಗ್ಗೆ ನಮ್ಮ ZEE NEWS ಎಕ್ಸಿಟ್ ಪೋಲ್‌ನಲ್ಲಿ, ಗುಜರಾತ್‌ನಲ್ಲಿ ಭಾರತೀಯ ಜನತಾ ಪಕ್ಷವು 182 ರಲ್ಲಿ 110 ರಿಂದ 125 ಸ್ಥಾನಗಳನ್ನು ಗೆಲ್ಲಲಿದೆ, ಹಾಗೆ, 45ರಿಂದ 60 ಸ್ಥಾನಗಳು ಕಾಂಗ್ರೆಸ್‌ ಖಾತೆಗೆ ಸೇರಲಿವೆ. ಈ ಮೂಲಕ ಬಿಜೆಪಿ ಸತತ 7ನೇ ಬಾರಿಗೆ ಸರ್ಕಾರ ರಚಿಸುವ ಲಕ್ಷಣ ಗೋಚರಿಸುತ್ತಿದೆ.

ಇಡೀ ಎಕ್ಸಿಟ್ ಪೋಲ್‌ನಲ್ಲಿ ಅತ್ಯಂತ ಆಘಾತಕಾರಿ ಅಂಕಿ ಅಂಶವೆಂದರೆ ಆಮ್ ಆದ್ಮಿ ಪಕ್ಷವು 5 ಸ್ಥಾನಗಳಿಗೆ ಕುಸಿದಿದೆ. ಗುಜರಾತ್‌ನಲ್ಲಿ ಬಿಜೆಪಿಯ ಏಕಪಕ್ಷೀಯ ಆಡಳಿತವಿದೆ. ಕಳೆದ 27 ವರ್ಷಗಳಿಂದ ಗುಜರಾತ್‌ನಲ್ಲಿ ಬಿಜೆಪಿ ಆಡಳಿತದಲ್ಲಿದೆ. 1995ರಿಂದ ಇಲ್ಲಿ ಬಿಜೆಪಿಯನ್ನು ಅಲುಗಾಡಿಸಲು ಯಾವ ಪಕ್ಷಕ್ಕೂ ಸಾಧ್ಯವಾಗಿಲ್ಲ.

ಇದನ್ನೂ ಓದಿ : ಪ್ರಧಾನಿಗಳ ಬಗ್ಗೆ ಮಾತನಾಡುತ್ತಾ ಭಾವೋದ್ವೇಗಕ್ಕೆ ಒಳಗಾದ ಮೋದಿ ಸಹೋದರ

ಶೇ.51 ರಷ್ಟು ಮತ ಬಿಜೆಪಿಗೆ

ಮತ ಹಂಚಿಕೆಯ ಬಗ್ಗೆ ಹೇಳುವುದಾದರೆ, ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೇಕಡಾ 51 ರಷ್ಟು ಮತಗಳನ್ನು ಪಡೆಯುತ್ತಿದೆ. ಹಾಗೆ, ಕಾಂಗ್ರೆಸ್ ಖಾತೆಯಲ್ಲಿ ಶೇ.39ರಷ್ಟು ಮತ ಹಂಚಿಕೆಯಾಗಿದೆ. ಆಮ್ ಆದ್ಮಿ ಪಕ್ಷವೂ ಮತಗಳಿಕೆಯಲ್ಲಿ ಹಿನ್ನಡೆ ಅನುಭವಿಸಿದೆ. ಶೇ.8 ರಷ್ಟು ಜನ ಮಾತ್ರ ಅರವಿಂದ್ ಕೇಜ್ರಿವಾಲ್ ಅವರ ಪಕ್ಷಕ್ಕೆ ಮತ ಹಾಕಿದ್ದಾರೆ. ಇದಲ್ಲದೇ ಶೇ.2ರಷ್ಟು ಮತಗಳು ಇತರರ ಪರವಾಗಿ ಹೋಗುತ್ತಿರುವುದು ಕಂಡು ಬಂದಿದೆ.

ಜನ ಯಾವ ವಿಷಯಗಳ ಮೇಲೆ ಮತ ಹಾಕಲಿದ್ದಾರೆ?

- ಶೇ.9 ರಷ್ಟು ಜನ ನಿರುದ್ಯೋಗದ ಮೇಲೆ ಮತ ಹಾಕಿದ್ದಾರೆ
- ಶೇ.11 ರಷ್ಟು ಜನ ಹಣದುಬ್ಬರದ ಮೇಲೆ ಮತ ಹಾಕಿದ್ದಾರೆ
- ಶೇ.2 ರಷ್ಟು ಜನ ಧ್ರುವೀಕರಣದ ಮೇಲೆ ಮತ ಹಾಕಿದ್ದಾರೆ
- ಶೇ.5 ರಷ್ಟು ಜನ ಶಾಸಕರ ಕೆಲಸ ನೋಡಿ ಮತ ಹಾಕಿದ್ದಾರೆ
- ಶೇ.6 ರಷ್ಟು ಜನ ರಾಜ್ಯ ಸರ್ಕಾರದ ಕೆಲಸದ ಮೇಲೆ ಮತ ಹಾಕಿದ್ದಾರೆ
- ಶೇ.34 ರಷ್ಟು ಜನ ನರೇಂದ್ರ ಮೋದಿಯವರ ಬೆಂಬಲ/ವಿರೋಧದ ಮೇಲೆ ಮತ ಹಾಕಿದ್ದಾರೆ
- ಶೇ.18 ರಷ್ಟು ಜನ ಕೇಂದ್ರ-ರಾಜ್ಯ ಸರ್ಕಾರದ ಯೋಜನೆಯ ಪ್ರಯೋಜನಗಳ ಮೇಲೆ ಮತ ಚಲಾಯಿಸಿದ್ದಾರೆ
- ಶೇ.14 ರಷ್ಟು ಜನ ಇತರರಿಗೆ ಮತ ಹಾಕಿದ್ದಾರೆ

ಕಳೆದ 4 ಚುನಾವಣೆಗಳಲ್ಲಿ ಬಿಜೆಪಿ ಜಯ

ಕಳೆದ ನಾಲ್ಕು ಚುನಾವಣೆಗಳಲ್ಲಿ ಬಿಜೆಪಿಯ ಸಾಧನೆಯನ್ನು ತುಲನೆ ಮಾಡಿದರೆ 2002ರಲ್ಲಿ 127, 2007ರಲ್ಲಿ 117, 2012ರಲ್ಲಿ 116 ಹಾಗೂ 2017ರಲ್ಲಿ 99 ಸ್ಥಾನಗಳನ್ನು ಪಡೆದಿತ್ತು. ಹೀಗಾಗಿ, ಈ ಬಾರಿಯ ಎಕ್ಸಿಟ್ ಪೋಲ್ ಫಲಿತಾಂಶಗಳು ಚುನಾವಣಾ ಫಲಿತಾಂಶವಾಗಿ ಪರಿವರ್ತನೆಗೊಂಡರೆ ಬಿಜೆಪಿಗೆ ದಾಖಲೆಯ ಸೀಟುಗಳ ಗೆಲುವಾಗಲಿದೆ.

ಎಕ್ಸಿಟ್ ಪೋಲ್ ಅನ್ನು ZEE NEWS ನಡೆಸಿದೆ, ಇದರಲ್ಲಿ ಗುಜರಾತ್‌ನ 182 ವಿಧಾನಸಭಾ ಕ್ಷೇತ್ರಗಳ ಜನರಿಗೆ ಪ್ರಶ್ನೆಗಳನ್ನು ಕೇಳುವ ಮೂಲಕ ಎಕ್ಸಿಟ್ ಪೋಲ್ ಮಾಡಲಾಗಿದೆ. ನೆನಪಿನಲ್ಲಿಡಿ, ಇದು ಚುನಾವಣೆಯ ಫಲಿತಾಂಶವಲ್ಲ, ಎರಡೂ ರಾಜ್ಯಗಳ ಚುನಾವಣಾ ಫಲಿತಾಂಶಗಳನ್ನು ಸೂಚಿಸುವ EXIT POLL ಫಲಿತಾಂಶಗಳು ಮಾತ್ರ. ಎಕ್ಸಿಟ್ ಪೋಲ್‌ನಲ್ಲಿ (+/-) ಶೇಕಡಾ 5 ರಷ್ಟು ಮಾರ್ಜಿನ್ ಆಫ್ ಎರರ್ ಇದೆ ಎಂಬುದನ್ನು ನೆನಪಿನಲ್ಲಿರಲಿ.

ಇದನ್ನೂ ಓದಿ : Farooq Abdullah: ಭಾರತೀಯ ಸೇನೆ ಮೇಲೆ ಗಂಭೀರ ಆರೋಪ ಮಾಡಿದ ಫಾರೂಕ್ ಅಬ್ದುಲ್ಲಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News