ಗೋವಾ ಸಿಎಂ ಪ್ರಮೋದ್ ಸಾವಂತ್ ಅವರಿಗೆ COVID-19 ಪಾಸಿಟಿವ್

ತಮಗೆ ಕರೋನವೈರಸ್ ಪಾಸಿಟಿವ್ ಬಂದಿರುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬುಧವಾರ ಮಾಹಿತಿ ನೀಡಿದ್ದಾರೆ.

Last Updated : Sep 2, 2020, 02:53 PM IST
  • ಗೋವಾದಲ್ಲಿ ಇದುವರೆಗೆ ಒಟ್ಟು 18,006 ಕರೋನವೈರಸ್ ಪ್ರಕರಣಗಳು ವರದಿಯಾಗಿವೆ.
  • ತಮಗೆ ಕರೋನವೈರಸ್ ಪಾಸಿಟಿವ್ ಬಂದಿರುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬುಧವಾರ ಮಾಹಿತಿ ನೀಡಿದ್ದಾರೆ.
ಗೋವಾ ಸಿಎಂ ಪ್ರಮೋದ್ ಸಾವಂತ್ ಅವರಿಗೆ COVID-19 ಪಾಸಿಟಿವ್ title=

ಪಣಜಿ: ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಕೋವಿಡ್ -19 (Covid 19) ಪಾಸಿಟಿವ್ ಎಂದು ತಿಳಿದು ಬಂದಿದೆ. ತಮಗೆ ಕರೋನವೈರಸ್ ಪಾಸಿಟಿವ್ ಬಂದಿರುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ (Pramod Sawant) ಬುಧವಾರ ಮಾಹಿತಿ ನೀಡಿದ್ದಾರೆ. ಸಾವಂತ್ ಅವರಿಗೆ ಯಾವುದೇ ಕರೋನಾ ಲಕ್ಷಣ ಇಲ್ಲದಿರುವುದರಿಂದ ಅವರನ್ನು ಹೋಂ ಕ್ವಾರಂಟೈನ್ ನಲ್ಲಿ ಇರುವುದಾಗಿ ತಿಳಿದುಬಂದಿದೆ.

"ನನಗೆ ಕೋವಿಡ್ -19 ಪಾಸಿಟಿವ್ ಆಗಿದೆ. ನನಗೆ ಯಾವುದೇ ಲಕ್ಷಣ ಇಲ್ಲದ ಕಾರಣ ಮನೆ ಸಂಪರ್ಕ ತಡೆಯಲ್ಲಿದ್ದೇನೆ" ಎಂದು ಸಾವಂತ್ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ.

ಅಷ್ಟೇ ಅಲ್ಲದೆ ಮನೆಯಿಂದ ಕೆಲಸ ಮಾಡುವ ಮೂಲಕ ನನ್ನ ಕರ್ತವ್ಯಗಳನ್ನು ನಾನು ಮುಂದುವರಿಸುತ್ತೇನೆ. ಕಳೆದೆರಡು ವಾರಗಳಲ್ಲಿ ನನ್ನ ಸಂಪರ್ಕಕ್ಕೆ ಬಂದವರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಈ ಮೂಲಕ ವಿನಂತಿಸುತ್ತೇನೆ ಎಂದವರು ಬರೆದಿದ್ದಾರೆ.

ಗೋವಾದಲ್ಲಿ ಇದುವರೆಗೆ ಒಟ್ಟು 18,006 ಕರೋನವೈರಸ್ ಪ್ರಕರಣಗಳು ವರದಿಯಾಗಿದ್ದು, 194 ಸಾವುಗಳು ಸಂಭವಿಸಿವೆ.
 

Trending News