ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್ ಗೆ ಮರಣೋತ್ತರ 'ಭಾರತ ರತ್ನ' ಗೌರವ 

ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಕೇಂದ್ರ ಸರ್ಕಾರ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಘೋಷಿಸಿದೆ. ಕರ್ಪೂರಿ ಠಾಕೂರ್ ಅವರ ಜನ್ಮದಿನದ ಒಂದು ದಿನದ ಮೊದಲು ಈ ಘೋಷಣೆಯನ್ನು ಕೇಂದ್ರ ಸರ್ಕಾರವು ಮಾಸ್ಟರ್ ಸ್ಟ್ರೋಕ್ ಎಂದು ಪರಿಗಣಿಸುತ್ತಿದೆ.ಕರ್ಪೂರಿ ಠಾಕೂರ್ ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಕ, ರಾಜಕಾರಣಿಯಾಗಿ ಜನಪ್ರಿಯರಾಗಿದ್ದರು.

Written by - Zee Kannada News Desk | Last Updated : Jan 23, 2024, 10:19 PM IST
  • ಕರ್ಪೂರಿ ಠಾಕೂರ್ ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಸಮಸ್ತಿಪುರದ ಪಿತೌಜಿಯಾ ಎಂಬ ಹಳ್ಳಿಯಲ್ಲಿ ಕ್ಷೌರಿಕ ಜಾತಿಯಲ್ಲಿ ಜನಿಸಿದರು
  • ಇದನ್ನು ಈಗ ಕರ್ಪೂರಿಗ್ರಾಮ್ ಎಂದು ಕರೆಯಲಾಗುತ್ತದೆ
  • ಜನನಾಯಕ್ ಅವರ ತಂದೆಯ ಹೆಸರು ಶ್ರೀ ಗೋಕುಲ್ ಠಾಕೂರ್ ಮತ್ತು ತಾಯಿಯ ಹೆಸರು ಶ್ರೀಮತಿ ರಾಮದುಲಾರಿ ದೇವಿ
 ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್ ಗೆ ಮರಣೋತ್ತರ 'ಭಾರತ ರತ್ನ' ಗೌರವ  title=

ನವದೆಹಲಿ: ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಕೇಂದ್ರ ಸರ್ಕಾರ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಘೋಷಿಸಿದೆ. ಕರ್ಪೂರಿ ಠಾಕೂರ್ ಅವರ ಜನ್ಮದಿನದ ಒಂದು ದಿನದ ಮೊದಲು ಈ ಘೋಷಣೆಯನ್ನು ಕೇಂದ್ರ ಸರ್ಕಾರವು ಮಾಸ್ಟರ್ ಸ್ಟ್ರೋಕ್ ಎಂದು ಪರಿಗಣಿಸುತ್ತಿದೆ.ಕರ್ಪೂರಿ ಠಾಕೂರ್ ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಕ, ರಾಜಕಾರಣಿಯಾಗಿ ಜನಪ್ರಿಯರಾಗಿದ್ದರು.

ಕರ್ಪೂರಿ ಠಾಕೂರ್ ಬಿಹಾರದ ಅತ್ಯಂತ ಜನಪ್ರಿಯ ಮತ್ತು ಪ್ರಾಮಾಣಿಕ ನಾಯಕರಾಗಿದ್ದರು.ಬಡವರು ಮತ್ತು ಹಿಂದುಳಿದವರ ಅಭ್ಯುದಯಕ್ಕೆ ಸದಾ ಸಿದ್ಧರಾಗಿದ್ದರು.ಅವರು ಎರಡು ಬಾರಿ ಬಿಹಾರದ ಮುಖ್ಯಮಂತ್ರಿಯಾದರು ಮತ್ತು ಅವರು ಎಂದಿಗೂ ಚುನಾವಣೆಯಲ್ಲಿ ಸೋಲರಿಯದ ಸರದಾರರಾಗಿದ್ದರು.ಕರ್ಪೂರಿ ಠಾಕೂರ್ ಅವರು ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.ಈ ಚಳವಳಿಯ ಸಂದರ್ಭದಲ್ಲಿ ಅವರು 26 ತಿಂಗಳ ಕಾಲ ಜೈಲಿನಲ್ಲಿ ಇರಬೇಕಾಯಿತು. ಜೈಲಿನಿಂದ ಹೊರಬಂದ ನಂತರ ರಾಜಕೀಯಕ್ಕೆ ಧುಮಿಕಿದರು

ಕರ್ಪೂರಿ ಠಾಕೂರ್ ಅವರ ರಾಜಕೀಯ ಪಯಣ

ಕರ್ಪೂರಿ ಠಾಕೂರ್ ಅವರು ತಮ್ಮ ರಾಜಕೀಯ ಜೀವನವನ್ನು ಕಾಂಗ್ರೆಸ್ ಪಕ್ಷದಿಂದ ಪ್ರಾರಂಭಿಸಿದ ಅವರು 1952 ರಲ್ಲಿ ಮೊದಲ ಬಾರಿಗೆ ಬಿಹಾರ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದರು. 1967 ರಲ್ಲಿ ಅವರು ಬಿಹಾರದ ಶಿಕ್ಷಣ ಸಚಿವರಾದರು. 1970 ರಲ್ಲಿ ಅವರು ಬಿಹಾರದ ಮುಖ್ಯಮಂತ್ರಿಯಾದರು. ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಬಿಹಾರದಲ್ಲಿ ಅನೇಕ ಪ್ರಮುಖ ಸುಧಾರಣೆಗಳನ್ನು ಜಾರಿಗೆ ತಂದರು, ಅವುಗಳಲ್ಲಿ ಒಂದು ಬಡ ಮತ್ತು ಹಿಂದುಳಿದ ಜನರಿಗೆ ಮೀಸಲಾತಿಯನ್ನು ಒದಗಿಸಿದ್ದು ಎಂದು ಹೇಳಬಹುದು. ಇನ್ನೂ 1977 ರಲ್ಲಿ ತಮ್ಮ ಎರಡನೇ ಅವಧಿಯ ಅವಧಿಯಲ್ಲಿಯೂ ಅವರು ಅನೇಕ ಪ್ರಮುಖ ಸುಧಾರಣೆಗಳನ್ನು ಜಾರಿಗೆ ತಂದರು, ಅವುಗಳಲ್ಲಿ ಒಂದು ಬಿಹಾರದಲ್ಲಿ ಆಹಾರ ಧಾನ್ಯದ ಪಡಿತರ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿದ್ದು.

ಕ್ವಿಟ್ ಇಂಡಿಯಾ ಚಳುವಳಿಯೊಂದಿಗೆ ವೃತ್ತಿಜೀವನ ಪ್ರಾರಂಭ

ಕರ್ಪೂರಿ ಠಾಕೂರ್ ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಸಮಸ್ತಿಪುರದ ಪಿತೌಜಿಯಾ ಎಂಬ ಹಳ್ಳಿಯಲ್ಲಿ ಕ್ಷೌರಿಕ ಜಾತಿಯಲ್ಲಿ ಜನಿಸಿದರು, ಇದನ್ನು ಈಗ ಕರ್ಪೂರಿಗ್ರಾಮ್ ಎಂದು ಕರೆಯಲಾಗುತ್ತದೆ. ಜನನಾಯಕ್ ಅವರ ತಂದೆಯ ಹೆಸರು ಶ್ರೀ ಗೋಕುಲ್ ಠಾಕೂರ್ ಮತ್ತು ತಾಯಿಯ ಹೆಸರು ಶ್ರೀಮತಿ ರಾಮದುಲಾರಿ ದೇವಿ. ಅವರ ತಂದೆ ಹಳ್ಳಿಯ ಕನಿಷ್ಠ ರೈತ ಮತ್ತು ಅವರ ಸಾಂಪ್ರದಾಯಿಕ ವೃತ್ತಿಯಲ್ಲಿ ಕ್ಷೌರಿಕರಾಗಿ ಕೆಲಸ ಮಾಡುತ್ತಿದ್ದರು. ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಅವರು 26 ತಿಂಗಳು ಜೈಲಿನಲ್ಲಿ ಕಳೆದರು. ಕರ್ಪೂರಿ ಠಾಕೂರ್ 17 ಫೆಬ್ರವರಿ 1988 ರಂದು ಪಾಟ್ನಾದಲ್ಲಿ ನಿಧನರಾದರು. ಬಿಹಾರದ ಇತಿಹಾಸದಲ್ಲಿ ಅವರನ್ನು ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.

ಈ ಕುರಿತಾಗಿ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ "ಸಾಮಾಜಿಕ ನ್ಯಾಯದ ಪ್ರತೀಕವಾದ ಮಹಾನ್ ಸಾರ್ವಜನಿಕ ನಾಯಕ ಕರ್ಪುರಿ ಠಾಕೂರ್ ಜಿ ಅವರಿಗೆ ಭಾರತ ರತ್ನ ನೀಡಿ ಗೌರವಿಸಲು ಭಾರತ ಸರ್ಕಾರ ನಿರ್ಧರಿಸಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.ಈ ಪ್ರತಿಷ್ಠಿತ ಗೌರವವು ಅಂಚಿನಲ್ಲಿರುವವರಿಗೆ ಸಮಾನತೆ ಮತ್ತು ಸಬಲೀಕರಣದ ಪ್ರತಿಪಾದಕರಾಗಿ ಅವರ ನಿರಂತರ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ. ದಲಿತರ ಉನ್ನತಿಗಾಗಿ ಅವರ ಅಚಲ ಬದ್ಧತೆ ಮತ್ತು ಅವರ ದೂರದೃಷ್ಟಿಯ ನಾಯಕತ್ವವು ಭಾರತದ ಸಾಮಾಜಿಕ-ರಾಜಕೀಯ ರಚನೆಯ ಮೇಲೆ ಅಳಿಸಲಾಗದ ಗುರುತು ಮೂಡಿಸಿದೆ ಎಂದು ಹೇಳಿದ್ದಾರೆ. ಈ ಪ್ರಶಸ್ತಿಯು ಅವರ ಗಮನಾರ್ಹ ಕೊಡುಗೆಗಳನ್ನು ಗೌರವಿಸುವುದು ಮಾತ್ರವಲ್ಲದೆ ಹೆಚ್ಚು ನ್ಯಾಯಯುತ ಮತ್ತು ಸಮಾನ ಸಮಾಜವನ್ನು ರಚಿಸುವ ಅವರ ಧ್ಯೇಯವನ್ನು ಮುಂದುವರಿಸಲು ನಮಗೆ ಸ್ಫೂರ್ತಿ ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News