ಸಂಸದ ಶ್ರೀರಾಮುಲು ಮನೆಯಲ್ಲಿ ಅಗ್ನಿ ಅವಘಡ

ಅಗ್ನಿ ಜ್ವಾಲೆಗೆ ಸುಟ್ಟು ಕರಕಲಾದ ಶ್ರೀರಾಮುಲು ಬೆಡ್ ರೂಂ.

Last Updated : Dec 19, 2017, 09:07 AM IST
  • ಕೂದಲೆಳೆಯಲ್ಲಿ ಪಾರಾದ ಸಂಸದ ಶ್ರೀರಾಮುಲು.
  • ದೆಹಲಿಯ ಫಿರೋಜ್ ಷಾ ರಸ್ತೆಯಲ್ಲಿರುವ ಶ್ರೀರಾಮುಲು ನಿವಾಸ.
ಸಂಸದ ಶ್ರೀರಾಮುಲು ಮನೆಯಲ್ಲಿ ಅಗ್ನಿ ಅವಘಡ title=
ಪಿಕ್: ANI

ನವ ದೆಹಲಿ: ಸಂಸದ ಶ್ರೀರಾಮುಲು ಅವರ ದೆಹಲಿಯ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಅಗ್ನಿ ಜ್ವಾಲೆಗೆ ಶ್ರೀರಾಮುಲು ಅವರ ಬೆಡ್ ರೂಂ ಸುಟ್ಟು ಕರಕಲಾಗಿದೆ. ಸಂಸದ ಶ್ರೀರಾಮುಲು ಕೂದಲೆಳೆಯಲ್ಲಿ ಪಾರಾಗಿದ್ದಾರೆ.

ದೆಹಲಿಯ ಫಿರೋಜ್ ಷಾ ರಸ್ತೆಯಲ್ಲಿರುವ ಶ್ರೀರಾಮುಲು ನಿವಾಸದಲ್ಲಿ ಇಂದು ಬೆಳಗಿನ ಜಾವ ಈ ಘಟನೆ ಸಂಭವಿಸಿದೆ. ಶ್ರೀ ರಾಮುಲು ಮಲಗಿದ್ದ ರೂಂ ನಲ್ಲೇ ಮೊದಲು ಬೆಂಕಿ ಹೊತ್ತಿಕೊಂಡಿದ್ದು,  ಶಾರ್ಟ್  ಸಕ್ಯೋರ್ಟ್ ನಿಂದ ಏಕಾಏಕಿ ಹೊತ್ತಿಕೊಂಡ ಬೆಂಕಿ ಮೊದಲು ಕರ್ಟನ್ಗೆ ತಾಕಿ, ಕರ್ಟನ್ ಮೂಲಕ ಸೋಫಾಗೆ ಹೊತ್ತಿಕೊಂಡು ಬೃಹತ್ ಸ್ವರೂಪ ಪಡೆದುಕೊಂಡಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಸಫಲವಾಗಿದೆ. ಸಂಸದರ ಕೊಠಡಿ ಹೊರತು ಪಡಿಸಿ ಉಳಿದ ಭಾಗ ಸೇಫ್ ಆಗಿದೆ.

 

Trending News