ಬೆಂಗಳೂರು : ಭಾರತದಲ್ಲಿ ಅಳಿದು ಹೋಗಿ 70 ವರ್ಷಗಳ ನಂತರ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಗ್ ಕ್ಯಾಟ್(ಚಿರತೆ)ಗಳನ್ನು ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ. ‘ಪ್ರಾಜೆಕ್ಟ್ ಚೀತಾ’ ಪೂರ್ಣಗೊಂಡಿದ್ದು, ಶನಿವಾರ ಪ್ರಧಾನಿ ಮೋದಿ ಅವರು ಮಧ್ಯಪ್ರದೇಶದ ಕೆಎನ್‌ಪಿಗೆ ಎಂಟು ಚಿರತೆಗಳನ್ನು ಬಿಡುಗಡೆ ಮಾಡಿದರು. ಅಷ್ಟಕ್ಕೂ ಭಾರತದಲ್ಲಿ ಚಿರತೆಗಳ ನಾಶಕ್ಕೆ ಕಾರಣ ಸೇರಿದಂತೆ ಇತರೆ ಇಂಟರೆಸ್ಟಿಂಗ್ ಮಾಹಿತಿಯನ್ನು ಭಾರತೀಯ ಅರಣ್ಯ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಹಂಚಿಕೊಂಡಿದ್ದಾರೆ.
ತಮ್ಮ ಟ್ವಿಟರ್ ಖಾತೆ ಪೋಸ್ಟ್‌ನಲ್ಲಿ ಜನರು ಮತ್ತು ಚಿರತೆಗಳ ನಡುವಿನ ಸಂಬಂಧದ ಬಗ್ಗೆ ಸುದೀರ್ಘವಾದ ಎಳೆಯನ್ನು ಕಸ್ವಾನ್ ಅವರು ಹಂಚಿಕೊಂಡಿದ್ದಾರೆ. ಸ್ವತಂತ್ರ ಪೂರ್ವ ಯುಗದಲ್ಲಿ ರಾಜರು ಮತ್ತು ಬ್ರಿಟಿಷರ ಬೇಟೆಯಾಡುವ ಸಾಮಾನ್ಯ ಅಭ್ಯಾಸ ಚಿರತೆ ನಾಶವಾಗಲು ಕಾರಣವಾಯಿತು ಎಂದು ಬರೆದುಕೊಂಡಿದ್ದಾರೆ. ನೆಟ್ಟಿಗರು ಪೋಸ್ಟ್ ಅನ್ನು ಶೇರ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ʼತೆಲಂಗಾಣದಲ್ಲಿ 40 ಶೇ. ಸರ್ಕಾರ ಫ್ಲೆಕ್ಸ್ ಹಾಕಿರುವುದು ಒಂದು ವ್ಯವಸ್ಥಿತ ಷಡ್ಯಂತ್ರʼ
When #Cheetah are coming back to #India. A look at how the last of the lots were hunted, maimed and domesticated for hunting parties. Video made in 1939. 1/n pic.twitter.com/obUbuZoNv5
— Parveen Kaswan, IFS (@ParveenKaswan) September 16, 2022
ಕಾಡಿನಿಂದ ಹಿಡಿದುಕೊಂಡು ಬರುವ ಚಿರತೆಯನು ಹೇಗೆ ಪಳಗಿಸಲಾಗುತ್ತದೆ ಎಂಬುವುದನ್ನು ತೋರಿಸುವ ವೀಡಿಯೊವನ್ನು ಐಎಸ್ಎಫ್ ಅಧಿಕಾರಿ ಹಂಚಿಕೊಂಡಿದ್ದಾರೆ. ಶತಮಾನಗಳ ಹಿಂದೆ ಅವುಗಳನ್ನು ನಾಯಿಯಂತೆ ಸಾಕಲಾಗುತ್ತಿತ್ತು ಮತ್ತು ಬೇಟೆಯಾಡಲು ಬಳಸಿಕೊಳ್ಳುತ್ತಿದ್ದರು ಹಾಗೂ ಅವುಗಳಿಗೆ ʼಬೇಟೆಯ ಚಿರತೆಗಳುʼ ಎಂದು ಕೂಡ ಕರೆಯುತ್ತಿದ್ದರು.
A painting from 1878 from Marriane North’s book. See how cheetah and lynxes are chained like domestic dogs. Scene is from Alwar or Rajasthan. pic.twitter.com/2131db3wCx
— Parveen Kaswan, IFS (@ParveenKaswan) September 17, 2022
ಇನ್ನು ಕಸ್ವಾನ್ ಅವರು ಹಳೆಯ ಛಾಯಾಚಿತ್ರಗಳು ಮತ್ತು ರೇಖಾಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ, ಚಿತ್ರಗಳಲ್ಲಿ ನಾಯಿಗಳ ಜೊತೆಯಲ್ಲಿ ಚೀತಾಗಳನ್ನು ಕಟ್ಟಿಹಾಕಿರುವುದು ಕಂಡುಬರುತ್ತದೆ. ಹಿಂದಿನ ಕಾಲದಲ್ಲಿ ಈ ದೊಡ್ಡ ಬೆಕ್ಕುಗಳನ್ನು ಬೇಟೆಯಾಡಲು ಹೇಗೆ ಬಳಸಿಕೊಳ್ಳಲಾಗುತ್ತಿತ್ತು ಎಂಬುದನ್ನು ಕೆಲವು ಚಿತ್ರಗಳನ್ನು ನೋಡಿದರೆ ತಿಳಿಸುತ್ತದೆ. ಅಲ್ಲದೆ, 1947 ರಲ್ಲಿ ಕೊರಿಯಾದ (ಛತ್ತೀಸ್‌ಗಢ) ರಾಜನು ಮೂರು ಚಿರತೆಗಳನ್ನು ಕೊಂದು ಅವುಗಳನ್ನು ಗುಂಪು ಹಾಕಿ ನಿಂತಿರುವ ಫೋಟೋ ಕಾಣಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.