ಸಶಕ್ತ ಜನರು, ಭ್ರಷ್ಟಾಚಾರವನ್ನು ಕಡಿಮೆ ಮಾಡಿದ್ದಾರೆ: ಡಿಜಿಟಲ್ ಇಂಡಿಯಾದ 4ನೇ ವಾರ್ಷಿಕೋತ್ಸವದಲ್ಲಿ ಪಿಎಂ ಮೋದಿ

ಡಿಜಿಟಲ್ ಇಂಡಿಯಾವನ್ನು "ಜನರ ಚಳುವಳಿ" ಎಂದು ಕರೆದ ಪ್ರಧಾನಿ ನರೇಂದ್ರ ಮೋದಿ, ಇದು ಜನರಿಗೆ ಅಧಿಕಾರ ನೀಡಿದೆ, ಭ್ರಷ್ಟಾಚಾರವನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ ಮತ್ತು ಬಡವರಿಗೆ ಅನುಕೂಲವಾಗುವಂತೆ ಸಾರ್ವಜನಿಕ ಸೇವಾ ವಿತರಣೆಯನ್ನು ಸುಧಾರಿಸಿದೆ ಎಂದು ಹೇಳಿದರು.

Last Updated : Jul 1, 2019, 12:58 PM IST
ಸಶಕ್ತ ಜನರು, ಭ್ರಷ್ಟಾಚಾರವನ್ನು ಕಡಿಮೆ ಮಾಡಿದ್ದಾರೆ: ಡಿಜಿಟಲ್ ಇಂಡಿಯಾದ 4ನೇ ವಾರ್ಷಿಕೋತ್ಸವದಲ್ಲಿ ಪಿಎಂ ಮೋದಿ title=

ನವದೆಹಲಿ: ಡಿಜಿಟಲ್ ಇಂಡಿಯಾ ಆಂದೋಲನವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಾಲ್ಕು ವರ್ಷಗಳ ಹಿಂದೆ ಜುಲೈ 1 ರಂದು ಪ್ರಾರಂಭಿಸಿತು. ಡಿಜಿಟಲ್ ಇಂಡಿಯಾದ ನಾಲ್ಕನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಈ  ಬಗ್ಗೆ ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಡಿಜಿಟಲ್ ಇಂಡಿಯಾ ಉಪಕ್ರಮವನ್ನು "ಜನರ ಚಳುವಳಿ" ಎಂದು ಕರೆದಿದ್ದಾರೆ. ಅಷ್ಟೇ ಅಲ್ಲದೆ ಡಿಜಿಟಲ್ ಇಂಡಿಯಾ ಜನರಿಗೆ ಅಧಿಕಾರ ನೀಡಿದ್ದು, ಭ್ರಷ್ಟಾಚಾರವನ್ನು ಗಮನಾರ್ಹವಾಗಿ ಕಡಿಮೆ ಮಾಡಿದ್ದಾರೆ ಮತ್ತು ಬಡವರಿಗೆ ಅನುಕೂಲವಾಗುವಂತೆ ಸಾರ್ವಜನಿಕ ಸೇವಾ ವಿತರಣೆಯನ್ನು ಸುಧಾರಿಸಲಾಗಿದೆ ಎಂದು ಸೋಮವಾರ ಹೇಳಿದ್ದಾರೆ.

"ನಾಲ್ಕು ವರ್ಷಗಳ ಹಿಂದೆ ಈ ದಿನ, ತಂತ್ರಜ್ಞಾನದ ಶಕ್ತಿಯನ್ನು ಹೆಚ್ಚಿಸಲು ಮತ್ತು ತಂತ್ರಜ್ಞಾನವನ್ನು ಹೆಚ್ಚು ಸುಲಭವಾಗಿ ಮಾಡಲು ಡಿಜಿಟಲ್ ಇಂಡಿಯಾವನ್ನು ಪ್ರಾರಂಭಿಸಲಾಯಿತು. ಡಿಜಿಟಲ್ ಇಂಡಿಯಾ ಜನರಿಗೆ ಅಧಿಕಾರ ನೀಡಿದೆ, ಭ್ರಷ್ಟಾಚಾರವನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ ಮತ್ತು ಬಡವರಿಗೆ ಅನುಕೂಲವಾಗುವಂತೆ ಸಾರ್ವಜನಿಕ ಸೇವಾ ವಿತರಣೆಯನ್ನು ಸುಧಾರಿಸಿದೆ" ಎಂದು ಪ್ರಧಾನಿ ಮೋದಿ ತಮ್ಮ ಸರಣಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಈ ಉಪಕ್ರಮವು "ಜನರ ಚಳುವಳಿ"ಯಾಗಿದ್ದು, ಇದು ನಾಗರಿಕರ ಶಕ್ತಿ ಮತ್ತು ಹೊಸತನ್ನು ಕಲಿಯುವ ಅವರ ಪ್ರಯತ್ನದಿಂದ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.

"ಡಿಜಿಟಲ್ ಇಂಡಿಯಾವನ್ನು ಬಲಪಡಿಸಲು ಶ್ರಮಿಸುತ್ತಿರುವ ಎಲ್ಲರಿಗೂ ನಾನು ನಮಸ್ಕರಿಸುತ್ತೇನೆ ಮತ್ತು ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

Trending News