ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ಮೋದಿ ಸರ್ಕಾರದ ಕೊನೆಯ ಪೂರ್ಣಾವಧಿ ಬಜೆಟ್ ಮಂಡಿಸಿದ್ದಾರೆ. ಜುಲೈ 1, 2017 ರಂದು ಜಿಎಸ್ಟಿ ಅನುಷ್ಠಾನವಾದ ನಂತರ ಮಂಡನೆಯಾದ ಮೊದಲ ಬಜೆಟ್ ಇದಾಗಿದೆ. ಈ ಬಜೆಟಿನಲ್ಲಿ ಅರುಣ್ ಜೇಟ್ಲಿ ದೇಶದಲ್ಲಿ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಬುಡಕಟ್ಟು ವಿದ್ಯಾರ್ಥಿಗಳಿಗಾಗಿ ನವೋದಯ ಮಾದರಿಯಲ್ಲಿ 'ಏಕಲವ್ಯ ವಸತಿ ಶಾಲೆ' ತೆರೆಯಲಾಗುವುದು ಎಂದು ಬಜೆಟಿನಲ್ಲಿ ಜೇಟ್ಲಿ ಘೋಷಿಸಿದರು.
ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ನವೋದಯ ಶಾಲೆಗಳ ಮಾದರಿಯಲ್ಲೇ ಬುಡಕಟ್ಟು ಪ್ರದೇಶಗಳ ಮಕ್ಕಳಿಗಾಗಿ ಏಕಲವ್ಯ ವಸತಿ ಶಾಲೆ ತೆರೆಯಲಾಗುವುದು ಎಂದು ಜೇಟ್ಲಿ ತಮ್ಮ ಬಜೆಟಿನಲ್ಲಿ ಘೋಷಿಸಿದ್ದಾರೆ. ಜೊತೆಗೆ ನರ್ಸರಿಯಿಂದ 12ನೇ ತರಗತಿವರೆಗೆ ಒಂದೇ ನಿಯಮವನ್ನು ಜಾರಿಗೊಳಿಸಲಾಗಿದೆ.ಅದೇ ಸಮಯದಲ್ಲಿ, ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಕಪ್ಪು ಹಲಗೆಗಳನ್ನು ಡಿಜಿಟಲ್ ಬೋರ್ಡ್ ಆಗಿ ಮಾರ್ಪಡಿಸಲು ಪ್ರಯತ್ನಿಸುತ್ತದೆ ಎಂದು ತಿಳಿಸಿದರು.
- ನರ್ಸರಿಯಿಂದ 12ನೇ ತರಗತಿವರೆಗೆ ಒಂದೇ ನಿಯಮ.
- ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಸೌಲಭ್ಯಕ್ಕೆ ಆದ್ಯತೆ.
- ಬಿಟೆಕ್ ವಿದ್ಯಾರ್ಥಿಗಳಿಗೆ ಪ್ರಧಾನಿ ಸಂಶೋಧನಾ ಫೆಲೋಶಿಪ್ ಘೋಷಣೆ.
- ಬುಡಕಟ್ಟು ಮಕ್ಕಳಿಗಾಗಿ ನವೋದಯ ಮಾದರಿಯಲ್ಲಿ ಏಕಲವ್ಯ ವಸತಿ ಶಾಲೆ.
- ಶಿಕ್ಷಕರಿಗೆ ಇಂಟಿಗ್ರೇಟೆಡ್ ಬಿಇಡಿ ಪ್ರಾರಂಭ.
- ವಡೋದರಾದಲ್ಲಿ ರೈಲ್ವೆ ವಿಶ್ವವಿದ್ಯಾಲಯ ನಿರ್ಮಾಣ ಘೋಷಣೆ.