Good News! Retirement ವಯಸ್ಸಿನಲ್ಲಿ ಹೆಚ್ಚಳ, Pension ಮೊತ್ತದಲ್ಲೂ ಹೆಚ್ಚಳ! ಇಲ್ಲಿದೆ ಸರ್ಕಾರದ ಹೊಸ ಪ್ಲಾನ್

Pension Update: ಪ್ರಧಾನಿಯವರ ಆರ್ಥಿಕ ಸಲಹಾ ಸಮಿತಿಯು ದೇಶದಲ್ಲಿ ನಿವೃತ್ತಿ ವಯಸ್ಸನ್ನು ಹೆಚ್ಚಿಸುವುದರ ಜೊತೆಗೆ ಸಾರ್ವತ್ರಿಕ ಪಿಂಚಣಿ ವ್ಯವಸ್ಥೆಯನ್ನು (Universal Pension Income Programme) ಸಹ ಪ್ರಾರಂಭಿಸಬೇಕು ಎಂದು ಪ್ರಸ್ತಾಪಿಸಿದೆ. ಪ್ರಸ್ತಾವನೆಯಲ್ಲಿ ಇನ್ನೇನು ಹೇಳಲಾಗಿದೆ ತಿಳಿದುಕೊಳ್ಳೋಣ ಬನ್ನಿ.

Written by - Nitin Tabib | Last Updated : Jan 30, 2022, 07:16 PM IST
  • ಪ್ರಧಾನಿ ಆರ್ಥಿಕ ಸಲಹಾ ಸಮಿತಿಯಿಂದ ಸಲಹೆ
  • ನಿವೃತ್ತಿಯ ವಯಸ್ಸಿನ ಜೊತೆಗೆ ಪಿಂಚಣಿ ಕೂಡ ಹೆಚ್ಚಳ
  • ಸಲಹಾ ಸಮಿತಿ ಹೇಳಿದ್ದೇನು ತಿಳಿಯಲು ಸುದ್ದಿ ಓದಿ
Good News! Retirement ವಯಸ್ಸಿನಲ್ಲಿ ಹೆಚ್ಚಳ, Pension ಮೊತ್ತದಲ್ಲೂ ಹೆಚ್ಚಳ! ಇಲ್ಲಿದೆ ಸರ್ಕಾರದ ಹೊಸ ಪ್ಲಾನ್  title=
PM's Economic Advisory Committee Recommendations(File Photo)

ನವದೆಹಲಿ: Pension Update - ಕೇಂದ್ರ ನೌಕರರಿಗೆ ಸರ್ಕಾರ ಶೀಘ್ರದಲ್ಲೇ ಮತ್ತೊಂದು ಶುಭ ಸುದ್ದಿ ನೀಡಲಿದೆ. ನೌಕರರ ನಿವೃತ್ತಿ ವಯಸ್ಸು ಮತ್ತು ಪಿಂಚಣಿ ಮೊತ್ತವನ್ನು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಪ್ರಧಾನಿ ಅವರ ಆರ್ಥಿಕ ಸಲಹಾ ಸಮಿತಿ ಈ ಪ್ರಸ್ತಾವನೆಯನ್ನು ಸಾರ್ವತ್ರಿಕ ಪಿಂಚಣಿ ವ್ಯವಸ್ಥೆ(Universal Pension System) ಕಳುಹಿಸಿದೆ. ಇದರಲ್ಲಿ ದೇಶದ ಜನರ ದುಡಿಯುವ ವಯಸ್ಸಿನ ಮಿತಿಯನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಲಾಗಿದೆ. ಇದರೊಂದಿಗೆ ದೇಶದಲ್ಲಿ ನಿವೃತ್ತಿ ವಯಸ್ಸನ್ನು ಹೆಚ್ಚಿಸುವುದರ (Higher Retirement Age) ಜೊತೆಗೆ ಸಾರ್ವತ್ರಿಕ ಪಿಂಚಣಿ ವ್ಯವಸ್ಥೆಯನ್ನೂ ಆರಂಭಿಸಬೇಕು ಎಂದು ಪ್ರಧಾನಿಯವರ (Modi Government) ಆರ್ಥಿಕ ಸಲಹಾ ಸಮಿತಿ (PM's Economic Advisory Committee) ಹೇಳಿದೆ.

ಹಿರಿಯ ನಾಗರಿಕರ ಸುರಕ್ಷತೆ
ಸಮಿತಿಯ ವರದಿಯ ಪ್ರಕಾರ, ಈ ಸಲಹೆಯ ಅಡಿಯಲ್ಲಿ, ಪ್ರತಿ ತಿಂಗಳು ನೌಕರರಿಗೆ ಕನಿಷ್ಠ 2000 ರೂ ಪಿಂಚಣಿ ನೀಡಬೇಕು. ಆರ್ಥಿಕ ಸಲಹಾ ಸಮಿತಿಯು ದೇಶದ ಹಿರಿಯ ನಾಗರಿಕರ ಸುರಕ್ಷತೆಗಾಗಿ ಉತ್ತಮ ವ್ಯವಸ್ಥೆಗಳನ್ನು ಶಿಫಾರಸು ಮಾಡಿದೆ ಎಂಬುದು ಇಲ್ಲಿ ಗಮನಾರ್ಹ. ಇದರಿಂದ ಪಿಂಚಣಿದಾರರಿಗೆ (Boost Income Security) ಹೆಚ್ಚಿನ ಪ್ರಮಾಣದಲ್ಲಿ ಅನುಕೂಲವಾಗಲಿದೆ.

ಕೌಶಲ್ಯ ಅಭಿವೃದ್ಧಿ ಅತ್ಯಗತ್ಯ
ದುಡಿಯುವ ವಯಸ್ಸಿನ ಜನಸಂಖ್ಯೆ ಹೆಚ್ಚಾಗಬೇಕಾದರೆ, ಇದಕ್ಕಾಗಿ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಅನಿವಾರ್ಯತೆ ಇದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ. ಸಾಮಾಜಿಕ ಭದ್ರತಾ ವ್ಯವಸ್ಥೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಇದನ್ನು ಜಾರಿಗೆ ತರುವ ಸಾಧ್ಯತೆ ಇದೆ. ವರದಿಯು 50 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳ ಕೌಶಲ್ಯ ಅಭಿವೃದ್ಧಿಯ ಬಗ್ಗೆಯೂ ಮಾತನಾಡಿದೆ.

ಇದನ್ನೂ ಓದಿ-ಪುರುಷರ ಟಾಯ್ಲೆಟ್​ಗೆ ನುಗ್ಗಿದ್ದ ದೀಪಿಕಾ, ಆಲಿಯಾ.. ಆ ರಾತ್ರಿ ನಡೆದಿದ್ದಾದರೂ ಏನು?

ಸರ್ಕಾರಗಳು ನೀತಿ ರೂಪಿಸುತ್ತವೆ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂತಹ ನೀತಿಗಳನ್ನು ರೂಪಿಸಬೇಕು ಇದರಿಂದ ಕೌಶಲ್ಯಾಭಿವೃದ್ಧಿ ಮಾಡಬಹುದು ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಯತ್ನ ಅಸಂಘಟಿತ ವಲಯದಲ್ಲಿ ವಾಸಿಸುವವರನ್ನು, ದೂರದ ಪ್ರದೇಶಗಳಲ್ಲಿ ವಾಸಿಸುವವರನ್ನು, ನಿರಾಶ್ರಿತರು, ತರಬೇತಿ ಪಡೆಯಲು ದಾರಿಯಿಲ್ಲದ ಇರುವ ವಲಸಿಗರನ್ನು ಒಳಗೊಂಡಿರಬೇಕು, ಆದರೆ ಅವರಿಗೆ ತರಬೇತಿ ನೀಡಬೇಕು. ಹೀಗಾದಲ್ಲಿ  ಯಾವುದೇ ಇಲಾಖೆಯಲ್ಲಿ ನುರಿತವರ ಕೊರತೆ ಇಲ್ಲ.

ಇದನ್ನೂ ಓದಿ-Viral Video:ಚಟ್ನಿಯೊಂದಿಗೆ ಗೋಲ್ಗಪ್ಪ ಐಸ್ ಕ್ರೀಮ್ ರೋಲ್! ಎಂದಾದರೂ ತಿಂದಿದ್ದೀರಾ?

ವರ್ಲ್ಡ್ ಪಾಪ್ಯುಲೇಶನ್ ಪ್ರಾಸ್ಪೆಕ್ಟಸ್ 2019 ವರದಿ
ವಿಶ್ವ ಜನಸಂಖ್ಯೆಯ ಪ್ರಾಸ್ಪೆಕ್ಟಸ್ 2019 ರ ಪ್ರಕಾರ, 2050 ರ ವೇಳೆಗೆ ಭಾರತದಲ್ಲಿ ಸುಮಾರು 32 ಕೋಟಿ ಹಿರಿಯ ನಾಗರಿಕರು ಇರಲಿದ್ದಾರೆ ಎನ್ನಲಾಗಿದೆ. ಅಂದರೆ, ದೇಶದ ಜನಸಂಖ್ಯೆಯ ಸುಮಾರು 19.5 ಪ್ರತಿಶತದಷ್ಟು ಜನರು ನಿವೃತ್ತರ ವರ್ಗಕ್ಕೆ ಸೇರಲಿದ್ದಾರೆ. 2019 ರಲ್ಲಿ, ಭಾರತದ ಜನಸಂಖ್ಯೆಯ ಸುಮಾರು 10 ಪ್ರತಿಶತ ಅಥವಾ 140 ಮಿಲಿಯನ್ ಜನರು ಹಿರಿಯ ನಾಗರಿಕರ ವರ್ಗದಲ್ಲಿದ್ದಾರೆ.

ಇದನ್ನೂ ಓದಿ-ಟಾಲಿವುಡ್​ ನಲ್ಲೂ ಕಿಚ್ಚನ ಹವಾ... ಫೆಬ್ರವರಿ 4ರಂದು ರಿಲೀಸ್​ ಆಗುತ್ತಿದೆ ಸುದೀಪ್ ಸಿನಿಮಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News