ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಶಶಿಕಲಾ, ಪತಿ ಯಕೃತ್ ಕಸಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಶಶಿಕಲಾಗೆ ಐದು ದಿನಗಳ ಷರತ್ತು ಬದ್ಧ ಪೆರೋಲ್ ಮಂಜೂರಾಗಿದೆ.
ಚೆನ್ನೈನ ಗ್ಲೆನಿಗಲ್ಸ್ ಗ್ಲೋಬಲ್ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟರಾಜನ್ ಅವರನ್ನು ನೋಡಿಕೊಳ್ಳಲು ಶಶಿಕಲಾ 15 ದಿನಗಳ ಪೆರೋಲ್ಗೆ ಅರ್ಜಿ ಸಲ್ಲಿಸಿದ್ದರು. ಜೈಲು ಆಡಳಿತವು ಅರ್ಜಿಯನ್ನು ತಿರಸ್ಕರಿಸಿತಾದರೂ, ಸೂಕ್ತ ದಾಖಲೆಗಳೊಂದಿಗೆ ನಿನ್ನೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸಿ ಐದು ದಿನಗಳ ಷರತ್ತು ಬದ್ದ ಪೆರೋಲ್ ಅನ್ನು ಮಂಜೂರು ಮಾಡಲಾಗಿದೆ. ತರುವಾಯ, ತಮಿಳುನಾಡು ಸರಕಾರವು ಶಶಿಕಾಲಾಗೆ ಪೆರೋಲ್ ನೀಡಿಕೆಗೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ಘೋಷಿಸಿದೆ.
ಆಸ್ಪತ್ರೆಗೆ 5 ದಿನ ಪೆರೋಲ್ ಭೇಟಿ
* ಶಶಿಕಲಾರನ್ನು ಎಐಎಡಿಎಂಕೆ ಅಧಿಕಾರಿಗಳ ಭೇಟಿಗೆ ಅನುಮತಿಸಲಾಗುವುದಿಲ್ಲ.
* ಶಶಿಕಲಾಳಿಗೆ ತನ್ನ ಮನೆಗೆ ಮತ್ತು ಆಸ್ಪತ್ರೆಗೆ ಹೋಗಲು ಮಾತ್ರ ಅನುಮತಿ.
ಶಶಿಕಾಲಾ ಪೆರೋಲ್ ಅರ್ಜಿ ಅನುಸರಿಸಿ ಕರ್ನಾಟಕ ಸರ್ಕಾರವು ತಮಿಳುನಾಡು ಸರಕಾರಕ್ಕೆ ಪತ್ರವೊಂದನ್ನು ಕಳುಹಿಸಿದೆ.
They (Jail auth) got e-mail from Chennai police commissioner agreeing for parole with certain conditions, sources said: Sasikala's lawyer pic.twitter.com/BEh6GHRxvV
— ANI (@ANI) October 6, 2017
ಚಿನ್ನಮ್ಮರನ್ನು ಕರೆದೊಯ್ಯಲು ಟಿಟಿವಿ ದಿನಕರನ್ ಪರಪ್ಪನ ಅಗ್ರಹಾರದ ಮುಂದೆ ಕಾಯುತ್ತಿದ್ದಾರೆ.
Visuals of Central Jail in Bengaluru where Sasikala is lodged pic.twitter.com/ziFpDP3Yg8
— ANI (@ANI) October 6, 2017