ನಿಮ್ಮ ದೇಶದ ರಾಜಕೀಯದಲ್ಲಿ ನಮ್ಮನ್ನು ಬೆರೆಸಬೇಡಿ -ತೈವಾನಿನ ಮಹಿಳೆ ತಾಕೀತು

       

Last Updated : Dec 13, 2017, 01:45 PM IST
ನಿಮ್ಮ ದೇಶದ ರಾಜಕೀಯದಲ್ಲಿ  ನಮ್ಮನ್ನು ಬೆರೆಸಬೇಡಿ -ತೈವಾನಿನ ಮಹಿಳೆ ತಾಕೀತು title=

ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಪ್ರಚಾರದ ಸಂದರ್ಭದಲ್ಲಿ ಮೋದಿಯವರ ಆಹಾರ ಪದ್ದತಿಯನ್ನು ವ್ಯಂಗ ಮಾಡುತ್ತಾ  ಅವರು ಪ್ರತಿ ದಿನ ನಾಲ್ಕು ಲಕ್ಷದ ಅಣಬೆಗಳನ್ನು ಸೇವಿಸುತ್ತಾರೆ ಎಂದು ಕುಟುಕಿದ್ದರು. 
ಆದ್ದರಿಂದ ಕಪ್ಪಗೆ ಇರುವ ಮೋದಿ ಬಿಳಿ ಬಣ್ಣಕ್ಕೆ ಪರಿವರ್ತನೆಯಾಗಿದ್ದಾರೆ ಎಂದು ಕುಹಕವಾಡಿದ್ದರು.

ಇನ್ನು ಮುಂದುವರೆದು  ಮೋದಿಯವರು ಗುಜರಾತಿನ ಮುಖ್ಯಮಂತ್ರಿಯದಾಗಿನಿಂದ  ತೈವಾನಿನಿಂದ ಆಮದು ಮಾಡಿಕೊಂಡ ಅಣಬೆಯನ್ನು  ಸೇವಿಸುತ್ತಿದ್ದಾರೆ. ಒಂದು ಅಣಬೆ 80,000 ರೂಪಾಯಿಗಳಂತೆ  ಒಟ್ಟು ಐದು ಅಣಬೆಗಳಿಗೆ ನಾಲ್ಕು ಲಕ್ಷ ರೂಪಾಯಿಗಳನ್ನು ಮೋದಿಯವರು ವ್ಯಚ್ಚ ಮಾಡುತ್ತಿದ್ದಾರೆ, ಇನ್ನು  ಅವರ ಬಿಜೆಪಿ ಕಾರ್ಯಕರ್ತರು ಎಷ್ಟು ತಿನ್ನುತ್ತಾರೆ?" ನೀವೇ ಯೋಚಿಸಿ ಎಂದು ಭಾಷಣ ಮಾಡಿದ್ದರು.

ಆದರೆ ಅಲ್ದೇಶ ಠಾಕೂರ್ ರವರ ಹೇಳಿಕೆಯನ್ನು  ತೈವಾನಿನ ಮಹಿಳೆಯು ತಿರಸ್ಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸುಮಾರು 27 ಸೆಕೆಂಡುಗಳ ವಿಡಿಯೋವೊಂದನ್ನು  ಹಾಕಿರುವ ಅವಳು  ಅದರಲ್ಲಿ "ಭಾರತದಿಂದ ಇಂದು ಒಂದು ಸುದ್ದಿ ನೋಡಿದ್ದೇನೆ ಅದರಲ್ಲಿ 12 ಸಾವಿರ ಡಾಲರುಗಳ ತೈವಾನ್ ಅಣಬೆಯನ್ನು ತಿಂದರೆ  ಬಿಳಿ ಬಣ್ಣಕ್ಕೆ ತಿರುಗುತ್ತಾರೆ ಎನ್ನುವ ಅಂಶವನ್ನು ನಾನಂತು ನನ್ನ ದೇಶದಲ್ಲಿ  ಕೇಳಿಲ್ಲ. ಇದು ನಿಜಕ್ಕೂ  ಅಸಾಧ್ಯವಾದ ಮಾತು.  ಹಾಗಾಗಿ ನಿಮ್ಮ ದೇಶದ ರಾಜಕೀಯದಲ್ಲಿ ನನ್ನ ದೇಶವನ್ನು ಬೆರೆಸಬೇಡಿ ಎಂದು ಆ ತೈವಾನ್ ಮಹಿಳೆ ತಾಕೀತು ಮಾಡಿದ್ದಾರೆ. ಈ ವಿಡಿಯೋ ವನ್ನು ಬಿಜೆಪಿ ವಕ್ತಾರ ತೇಜಿಂದರ್ ಸಿಂಗ್ ಬಾಗ್ಗಾ ಅವರ ಟ್ವಿಟರ್ ಹ್ಯಾಂಡಲ್ನಲ್ಲಿ ವೀಡಿಯೊ ಹಂಚಿಕೊಂಡಿದ್ದಾರೆ.
 

Trending News