ಬೆಳಗಾವಿ ಗಡಿ ವಿವಾದದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದೇನು ಗೊತ್ತೇ?

ಕರ್ನಾಟಕ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳು ದಶಕಗಳಿಂದ ನಡೆಯುತ್ತಿರುವ ರಾಜ್ಯ ಗಡಿ ವಿವಾದದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಅಂತಿಮ ನಿರ್ಣಯ ನೀಡುವವರೆಗೆ ತಮ್ಮ ಹಕ್ಕುಗಳನ್ನು ಪ್ರತಿಪಾದಿಸದಿರಲು ಒಪ್ಪಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉಭಯ ನಾಯಕರೊಂದಿಗಿನ ಸಭೆಯ ನಂತರ ಇಂದು ಹೇಳಿದ್ದಾರೆ.

Written by - Zee Kannada News Desk | Last Updated : Dec 14, 2022, 10:29 PM IST
  • ಕರ್ನಾಟಕಕ್ಕೆ ಸೇರಿಸುವುದರ ವಿಚಾರವಾಗಿ ಮಹಾರಾಷ್ಟ್ರವು ಅಸಮಾಧಾನಗೊಂಡಿತ್ತು.
  • ಇದು ಪ್ರಸ್ತುತ ಕರ್ನಾಟಕದ ಭಾಗವಾಗಿರುವ 814 ಮರಾಠಿ ಮಾತನಾಡುವ ಹಳ್ಳಿಗಳಿಗೆ ಹಕ್ಕು ಸಲ್ಲಿಸಿದೆ
  • ವಿಧಾನಸಭಾ ಚುನಾವಣೆ ಇರುವುದರಿಂದಾಗಿ ಕೇಂದ್ರ ಸರ್ಕಾರವು ಜಾಣ್ಮೆಯಿಂದ ಹೆಜ್ಜೆ ಇಡಲು ಮುಂದಾಗಿದೆ
 ಬೆಳಗಾವಿ ಗಡಿ ವಿವಾದದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದೇನು ಗೊತ್ತೇ? title=
Photo Courtsey: Twitter

ನವದೆಹಲಿ: ಕರ್ನಾಟಕ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳು ದಶಕಗಳಿಂದ ನಡೆಯುತ್ತಿರುವ ರಾಜ್ಯ ಗಡಿ ವಿವಾದದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಅಂತಿಮ ನಿರ್ಣಯ ನೀಡುವವರೆಗೆ ತಮ್ಮ ಹಕ್ಕುಗಳನ್ನು ಪ್ರತಿಪಾದಿಸದಿರಲು ಒಪ್ಪಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉಭಯ ನಾಯಕರೊಂದಿಗಿನ ಸಭೆಯ ನಂತರ ಇಂದು ಹೇಳಿದ್ದಾರೆ.

1957 ರ ಹಿಂದಿನ ವಿವಾದ ಮತ್ತೆ ಭುಗಿಲೆದ್ದ ಹಿನ್ನೆಲೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೊಂದಿಗೆ ಗೃಹ ಸಚಿವ ಅಮಿತ್ ಶಾ ಸಭೆ ನಡೆದರು.

ಭಾಷಾವಾರು ರಾಜ್ಯಗಳ ಮರುಸಂಘಟನೆಯ ಸಂದರ್ಭದಲ್ಲಿ ಮರಾಠಿ ಮಾತನಾಡುವ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸುವುದರ ವಿಚಾರವಾಗಿ ಮಹಾರಾಷ್ಟ್ರವು ಅಸಮಾಧಾನಗೊಂಡಿತ್ತು.ಇದು ಪ್ರಸ್ತುತ ಕರ್ನಾಟಕದ ಭಾಗವಾಗಿರುವ 814 ಮರಾಠಿ ಮಾತನಾಡುವ ಹಳ್ಳಿಗಳಿಗೆ ಹಕ್ಕು ಸಲ್ಲಿಸಿದೆ.

ಇದನ್ನೂ ಓದಿ: Deepika padukone : ದೀಪಿಕಾ ʼಕೇಸರಿ ಬಿಕಿನಿʼ ಮೇಲೆ ನೆಟ್ಟಿಗರ ಕಣ್ಣು.. ʼಪಠಾಣ್‌ ಬಾಯ್ಕಾಟ್‌ʼ ಘೋಷಣೆ

ಕಳೆದ ಕೆಲವು ವಾರಗಳಿಂದ, ಕರ್ನಾಟಕದಲ್ಲಿ ಮಹಾರಾಷ್ಟ್ರದ ಟ್ರಕ್‌ಗಳ ಮೇಲೆ ದಾಳಿ ನಡೆಸಲಾಗಿತ್ತು, ಅತ್ತ ರಾಜ್ಯದ ಬಸ್‌ಗಳನ್ನು ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಕಾರ್ಯಕರ್ತರು ವಿರೂಪಗೊಳಿಸಿದ್ದರು.

ಈ ವಿಷಯವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಬೆನ್ನಲ್ಲೇ ಈಗ ಈಗ ಬಿಜೆಪಿ ಆಡಳಿತ ಎರಡೂ ರಾಜ್ಯಗಳಲ್ಲಿ ಪರಿಸ್ಥಿತಿಯನ್ನು ಸಹಜತೆಯತ್ತ ಕೊಂಡೊಯ್ಯುವುದು ಅನಿವಾರ್ಯವಾಗಿದೆ.2023 ರಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಇರುವುದರಿಂದಾಗಿ ಕೇಂದ್ರ ಸರ್ಕಾರವು ಜಾಣ್ಮೆಯಿಂದ ಹೆಜ್ಜೆ ಇಡಲು ಮುಂದಾಗಿದೆ.

ಇದನ್ನೂ ಓದಿ:  ಬಿಬಿಎಂಪಿ ಮತದಾರರ ಪಟ್ಟಿ ಪರಿಷ್ಕರಣೆ: ನೇರವಾಗಿ ಫೀಲ್ಡ್ ಗೆ ಇಳಿದ ಬಿಬಿಎಂಪಿ ಆಯುಕ್ತ

ಇನ್ನೊಂದೆಡೆಗೆ ಮಹಾರಾಷ್ಟ್ರದಲ್ಲಿ ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿಯ ಮೈತ್ರಿಕೂಟ ಪಕ್ಷದ ಭಾಗವಾಗಿರುವ, ನ್ಯಾಶನಲಿಸ್ಟ್ ಕಾಂಗ್ರೆಸ್ ಮುಖ್ಯಸ್ಥ ಶರದ್ ಪವಾರ್ ಅವರು ಈಗ ಅಂತಿಮ ತಿರ್ಮಾನ ತೆಗೆದುಕೊಳ್ಳುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News