ನವದೆಹಲಿ : ಎಲ್ಲಾ ಸಿಹಿತಿಂಡಿಗಳು ರುಚಿಕರವಾಗಿರುತ್ತವೆ. ಆದರೆ ರಸಗುಲ್ಲಾದ (Rasgulla) ಹೆಸರು ಕೇಳಿದರೆ ಎಲ್ಲರ ಬಾಯಲ್ಲಿ ನೀರು ಬರುತ್ತದೆ. ವಿಶೇಷವಾಗಿ ಪಶ್ಚಿಮ ಬಂಗಾಳದವರಿಗೆ ರಸಗುಲ್ಲಾದ ಮೇಲೆ ವಿಶೇಷ ಪ್ರೀತಿ ಇರುತ್ತದೆ. ಈ ಸಿಹಿ ತಿನಿಸಿನ ರುಚಿಯ ಬಗ್ಗೆ ಬಿಡಿಸಿ ಹೇಳಬೇಕಿಲ್ಲ. ಬಾಯಿಗೆ ಹಾಕಿದ ಕೂಡಲೇ ಕರಗಿ ಹೋಗುವ ಈ ತಿನಿಸನ್ನು ವರ್ಣಿಸಿದಷ್ಟು ಕಡಿಮೆಯೇ.
ರಸಗುಲ್ಲಾವನ್ನು ಇಂಗ್ಲಿಷ್ ನಲ್ಲಿ ಏನೆಂದು ಕರೆಯುತ್ತಾರೆ :
ಈ ರಸಗುಲ್ಲಾವನ್ನು ತಮ್ಮದಾಗಿಸಿಕೊಳ್ಳಲು ದೇಶದ ಎರಡು ರಾಜ್ಯಗಳ ನಡುವೆ ಸಾಕಷ್ಟು ಜಗಳವೇ ನಡೆದು ಹೋಗಿತ್ತು. ರಸಗುಲ್ಲಾವನ್ನು ತಮ್ಮ ರಾಜ್ಯದಲ್ಲಿ ಆವಿಷ್ಕರಿಸಲಾಗಿದೆ ಎಂದು ಪಶ್ಚಿಮ ಬಂಗಾಳ (West Bengal) ಸರ್ಕಾರ ಹೇಳಿದರೆ, ಒಡಿಶಾ ಅದನ್ನು ತನ್ನದು ಎಂದು ವಾದಿಸಿತ್ತು. ಅಂತಿಮವಾಗಿ, ಈ ಸಿಹಿ ತಿನಿಸಿನ ಹೆಸರಿನ ಏಕಸ್ವಾಮ್ಯದ ಬಗ್ಗೆ ಒಡಿಶಾದೊಂದಿಗೆ (Odisha) ಸುದೀರ್ಘ ಕಾನೂನು ಹೋರಾಟದ ನಂತರ ಪಶ್ಚಿಮ ಬಂಗಾಳಕ್ಕೆ ಜಿಯೋಗ್ರಾಫಿಕಲ್ ಐಡೆನ್ ಟಿಫಿಕೆಶನ್ ಟ್ಯಾಗ್ ಸಿಕ್ಕಿತ್ತು. ಈ ಸಿಹಿತಿಂಡಿಯ ಮಾಧುರ್ಯದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಇದನ್ನು ಇಂಗ್ಲಿಷ್‌ನಲ್ಲಿ (English) ಏನೆಂದು ಕರೆಯುತ್ತಾರೆ ಅನ್ನುವುದು ಗೊತ್ತಿದೆಯಾ? ಇದನ್ನು ತಿಳಿದು ಕೊಳ್ಳುವ ಪ್ರಯತ್ನ ಎಂದಾದರು ನಡೆದಿದೆಯಾ ?
ಇದನ್ನೂ ಓದಿ: "ಎರಡು ಡೋಸ್ ಲಸಿಕೆ ಶೇ 95 ರಷ್ಟು ಸಾವಿನ ಪ್ರಮಾಣವನ್ನು ಕಡಿಮೆ ಮಾಡಿದೆ"
ರಸಗುಲ್ಲಾಗಿರುವ ಇಂಗ್ಲಿಷ್ ಹೆಸರು :
ರಸಗುಲ್ಲಾಗೆ (Rasagulla) ಇಂಗ್ಲೀಷ್ ನಲ್ಲಿ ಏನೆಂದು ಕರೆಯುತ್ತಾರೆ ಎನ್ನುವುದನ್ನು ಅನೇಕ ದೊಡ್ಡ ಸಂದರ್ಶನಗಳಲ್ಲಿ ಕೇಳಲಾಗಿದೆ. ಆದರೆ ಹೆಚ್ಚಿನ ಅಭ್ಯರ್ಥಿಗಳಿಗೆ ಸರಿಯಾದ ಉತ್ತರ ತಿಳಿದಿರಲಿಲ್ಲ. ಈ ಪ್ರಶ್ನೆಗೆ ಉತ್ತರ ಹುಡುಕಲು ಆಕ್ಸ್‌ಫರ್ಡ್ ನಿಘಂಟು ಪರಿಶೀಲಿಸಿದ್ದಾಗಿದೆ. ಗೂಗಲ್ ನ (Google) ಸಹಾಯ ಪಡೆದದ್ದೂ ಆಗಿದೆ. ಎಲ್ಲಾ ಹುಡುಕಾಟದ ನಂತರ ಸಿಕ್ಕಿರುವ ಉತ್ತರವೆಂದರೆ ರಸಗುಲ್ಲಾಗೆ ಇಂಗ್ಲೀಷ್ ನಲ್ಲಿ ಸಿರಪ್ ಫಿಲ್ಡ್ ರೋಲ್ (Syrup Filled Roll) ಎಂದು ಕರೆಯಲಾಗುತ್ತದೆ ಎನ್ನುವುದು. ಅಂದರೆ ಇಂಗ್ಲೀಷ್ ನಲ್ಲಿ ರಸಗುಲ್ಲಾದ ಹೆಸರು ಸಿರಪ್ ಫಿಲ್ಡ್ ರೋಲ್.
ಇದನ್ನೂ ಓದಿ: "ಕೊರೊನಾ ಮೂರನೇ ಅಲೆ ಹಿನ್ನಲೆಯಲ್ಲಿ ಮುಂದಿನ 100 ದಿನಗಳು ನಿರ್ಣಾಯಕ"
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.