ಬೆಂಗಳೂರು : ತೌಕ್ತೆ ಚಂಡಮಾರುತ (Tauktea Cyclone) ರಾಜ್ಯ ಕರಾವಳಿ ಪ್ರವೇಶಿಸಿದೆ. ಗಂಟೆಗೆ ಸುಮರು 160 ಕಿಲೋಮೀಟರ್ ವೇಗದಲ್ಲಿ ಸುಂಟರಗಾಳಿ ಬೀಸುತ್ತಿದೆ. ಕಡಲು ಉಕ್ಕೇರಿ ನೆಲ ನುಂಗುತ್ತಿದೆ. ಸಮುದ್ರದ ಆರ್ಭಟಕ್ಕೆ ಕಡಲ ತೀರದ ಜನ ಕಂಗಾಲಾಗಿ ಹೋಗಿದ್ದಾರೆ. ಇದು ಪ್ರಳಯೋ ಅಥವಾ ಇನ್ನೇನೋ ಎಂಬಂತೆ ಉದ್ಘರಿಸುತ್ತಿದ್ದಾರೆ. ಇದೊಂದು ಅಪತ್ಕಾಲ. ಇದು ಹೆದರಿ ಕಂಗಾಲಾಗುವ ಸಮಯ ಅಲ್ಲ. ಬದಲಿಗೆ ಬಂದಿರುವ ವಿಪತ್ತನ್ನು ಎದುರಿಸಲು ಕೆಲವೊಂದು ಮುಂಜಾಗ್ರತೆ ವಹಿಸಬೆಕು. ಚಂಡಮಾರುತ ಬರುವ ಮೊದಲು, ಮತ್ತು ಬರುವಾಗ ನಾವೇನು ಮಾಡಬೇಕು ಎಂಬುದನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ಕೆಲವೊಂದು ಮಾಹಿತಿಗಳನ್ನು ಹೇಳಿದೆ. ಅದನ್ನಿಲ್ಲಿ ಸಿಂಪಲ್ಲಾಗಿ ಹೇಳುತ್ತೇವೆ. ಓದಿ.
ಚಂಡ ಮಾರುತಕ್ಕೆ ಮುನ್ನ ಏನು ಮಾಡಬೇಕು.?
1. ವದಂತಿ ಸುಳ್ಳು ಸುದ್ದಿಗಳನ್ನು ನಂಬಬೇಡಿ. ಮುಖ್ಯವಾಗಿ ಗಾಬರಿಯಾಗಬೇಡಿ.
2. ಯಾವುದೇ ಕ್ಷಣಕ್ಕೆ ಪವರ್ ಕಟ್ (Power cut) ಆಗಬಹುದು. ಮನೆಯ ಎಲ್ಲಾ ಮೊಬೈಲ್‍ಗಳನ್ನು (Mobile) ಸಂಪೂರ್ಣ ಚಾರ್ಜ್ ಮಾಡಿಟ್ಟುಕೊಳ್ಳಿ. ಎಸ್‍ಎಂಎಸ್ ಬಳಸಿ
3. ಟೀವಿ ನೋಡಿ. ಪೇಪರ್ ಓದಿ. ಚಂಡಮಾರುತದ ಲೇಟೆಸ್ಟ್ ಸ್ಥಿತಿ ತಿಳಿದುಕೊಳ್ಳಿ
4. ಒಂದು ಎಮೆರ್ಜೆನ್ಸಿ ಕಿಟ್ (Emergency Kit) ರೆಡಿ ಮಾಡಿಟ್ಟುಕೊಳ್ಳಿ. ಅದರಲ್ಲಿ ನಿಮಗೆ ಎಮರ್ಜೆನ್ಸಿಗೆ ಬೇಕಾದ ಎಲ್ಲಾ ವಸ್ತುಗಳನ್ನು ಇಡಿ. ಔಷಧಿಗಳನ್ನೂ ತಯಾರಿಟ್ಟುಕೊಳ್ಳಿ
5. ಮನೆಯ ಕಿಟಕಿ ಬಾಗಿಲು ಭದ್ರ ಪಡಿಸಿಟ್ಟುಕೊಳ್ಳಿ. ಮರದ ಯಾವುದಾದರೂ ದುರ್ಬಲ ಟೊಂಗೆ ಇದ್ದರೆ ಮೊದಲೇ ಕಟ್ ಮಾಡಿ.
ಇದನ್ನೂ ಓದಿ : Rainfall Alert : ತೌಕ್ತೆ ಚಂಡಮಾರುತ ಪರಿಣಾಮ ರಾಜ್ಯದಲ್ಲಿ ಇನ್ನೂ 3 ದಿನ ಭಾರೀ ಮಳೆ..!
6. ಮನೆಯ ಯಾವುದೇ ದುರ್ಬಲ ಅಥವಾ ಗಾಳಿಗೆ ಹಾರಿಹೋಗಬಹುದಾದ, ಗಾಳಿಗೆ ಬಿದ್ದು ಹೋಗ ಬಹುದಾದ ವಸ್ತುಗಳನ್ನು ಮೊದಲೇ ಭದ್ರ ಪಡಿಸಿಕೊಳ್ಳಿ
7. ನೀವಷ್ಟೇ ಅಲ್ಲ, ಮನೆಯ ಜಾನುವಾರು, ಕೊಟ್ಟಿಗೆಯನ್ನೂ ಭದ್ರವಾಗಿಟ್ಟುಕೊಳ್ಳಿ. ಗಾಳಿಗೆ ಬೀಳಬಹುದಾದ ಅಥವಾ ಹಾರಿಹೋಗಬಹುದಾದ ವಸ್ತುಗಳನ್ನು ಮೊದಲೇ ಊಹಿಸಿ ಭದ್ರ ಪಡಿಸಿಕೊಳ್ಳಿ. ಜಾನುವಾರುಗಳನ್ನು ಸರಿಯಾಗಿ ಕಟ್ಟಿ. ಗಾಳಿ ಮಳೆಗೆ ಜಾನುವಾರುಗಳು ಕಂಗಾಲಾಗಬಹುದು. ಹಾಗಾಗಿ, ಕೊಟ್ಟಿಗೆ ಬಾಗಿಲು, ಕಿಟಕಿ ಸರಿಯಾಗಿ ಮುಚ್ಚಿ. ಯಾವುದೇ ವಸ್ತುಗಳು ಜಾನುವಾರುಗಳ ಮೇಲೆ ಬೀಳದಂತೆ ಮುನ್ನೆಚ್ಚರಿಕೆ ವಹಿಸಿ.
8. ಸರ್ಕಾರದ ಮುನ್ಸೂಚನೆಗಳನ್ನು ಕಡೆಗಣಿಸಬೇಡಿ. ಕಡಲ ತೀರ, ನದಿ ತೀರಗಳಿಗೆ ತಪ್ಪಿಯೂ ಹೋಗಬೇಡಿ. ದೋಣಿಗಳನ್ನು (Boat) ನದಿಗೆ, ಸಮುದ್ರಕ್ಕೆ ಇಳಿಸುವ ಮೂರ್ಖತನ ಮಾಡಬೇಡಿ
9. ಸರ್ಕಾರ ನಿಮ್ಮ ಸ್ಥಳಾಂತರಕ್ಕೆ ಆದೇಶಿಸಿದ್ದರೆ, ಸರ್ಕಾರ (Government) ಹೇಳಿದಂತೆ ನಡೆದುಕೊಳ್ಳಿ. ಮನೆಯಲ್ಲಿರುವ ಸಾಮಾನು ಸರಂಜಾಮು ಇಲೆಕ್ಟ್ರಾನಿಕ್ ವಸ್ತುಗಳನ್ನು ಸುರಕ್ಷಿತವಾಗಿರಿಸಿ. ಮುಖ್ಯವಾಗಿ ನಿಮ್ಮ ಕ್ಷೇಮವನ್ನೂ ನೋಡಿಕೊಳ್ಳಿ.
ಇದನ್ನೂ ಓದಿ : Tauktae Cyclone : ತೌಕ್ತೆ ಚಂಡಮಾರುತಕ್ಕೆ ತತ್ತರಿಸಿದ ರಾಜ್ಯ ಕರಾವಳಿ ಪ್ರದೇಶ..!
ಚಂಡಮಾರುತ ಅಪ್ಪಳಿಸುವಾಗ ಮತ್ತು ಅಪ್ಪಳಿಸಿಹೋದ ಮೇಲೆ ನಾವೇನು ಮಾಡಬೇಕು.?
1. ಚಂಡಮಾರುತ (Cyclone) ಅಪ್ಪಳಿಸುವಾಗ ನೀವೇ ಹೋಗಿ ಮನೆಯ ವಿದ್ಯುತ್ ಸಂಪರ್ಕ ತೆಗೆದುಬಿಡಿ.
2. ಪೈಪ್ ಗ್ಯಾಸ್ (Pipe gas) ಇದ್ದರೆ ಸಪ್ಲೈ ಬಂದ್ ಮಾಡಿ. ಸಿಲೆಂಡರ್ ಗ್ಯಾಸ್ (Cylinder gas) ಇದ್ದರೆ ಎಲ್ಲಾ ನ್ಯಾಬ್ ಬಂದ್ ಮಾಡಿ
3. ಮನೆಯ ಎಲ್ಲಾ ಕಿಟಕಿ, ಬಾಗಿಲು ಬಂದ್ ಮಾಡಿ. ಸಾಕು ಪ್ರಾಣಿಗಳ ಬಗ್ಗೆ ಎಚ್ಚರವಿರಲಿ.
4. ರೇಡಿಯೋ (radio) ಕೇಳುತ್ತಿರಿ. ಚಂಡಮಾರುತದ ಲೇಟೆಸ್ಟ್ ಅಪ್ ಡೇಟ್ ಪಡೆಯಿರಿ.
5. ಕುದಿಸಿ ಆರಿಸಿದ ನೀರನ್ನೇ (Water) ಕುಡಿಯಿರಿ. ಮೊದಲೇ ನೀರು ಕುದಿಸಿ ಆರಿಸಿಟ್ಟುಕೊಳ್ಳಿ.
6. ಅಗತ್ಯವೆನಿಸಿದರೆ ಕೂಡಲೇ ಸುರಕ್ಷಿತ ಸ್ಥಳಕ್ಕೆ ತೆರಳಿ. ಈ ನಿರ್ಧಾರವನ್ನು ಮೊದಲೇ ತೆಗೆದುಕೊಳ್ಳಿ.
7. ಚಂಡಮಾರುತ ಅಪ್ಪಳಿಸುವಾಗ ಮನೆಯಿಂದ ಹೊರಬರುವ ಮೂರ್ಖತನ ಮಾಡಬೇಡಿ.
8. ಮನೆ ದುರ್ಬಲವಾಗಿದ್ದರೆ, ಖಂಡಿತವಾಗಿ ಅದರೊಳಗೆ ಇರಬೇಡಿ.
9. ನಿಮ್ಮ ಮನೆಯ ಸುತ್ತ ದೈತ್ಯ ಮರಗಳಿದ್ದರೆ ಆದಷ್ಟೂ ಮೊದಲೇ ಸುರಕ್ಷಿತ ಜಾಗಕ್ಕೆ ತೆರಳಿ
10. ಸರ್ಕಾರದ ಜಿಲ್ಲಾಡಳಿತದ ಸಹಾಯವಾಣಿಗಳನ್ನು (Helpline) ಒಂದು ಚೀಟಿಯಲ್ಲಿ ಬರೆದಿಟ್ಟುಕೊಳ್ಳಿ.
ಇದನ್ನೂ ಓದಿ : HD Deve Gowda : 'ಈ ಸಂಕಷ್ಟದಲ್ಲಿ ನನ್ನ ಹುಟ್ಟುಹಬ್ಬ ಆಚರಿಸುವುದು ಬೇಡ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.