ಮುಂಬೈ: ಹೋಟೆಲ್ ಹೊರಗೆ ಡಿಕೆಶಿ ತಡೆಹಿಡಿದ ಪೊಲೀಸರು

ಬಂಡಾಯ ಶಾಸಕರನ್ನು ಭೇಟಿ ಮಾಡಲು ಹಿರಿಯ ಕಾಂಗ್ರೆಸ್ ಮುಖಂಡ  ಡಿ.ಕೆ.ಶಿವಕುಮಾರ್ ಮತ್ತು ಜೆಡಿಎಸ್ ಶಾಸಕ ಶಿವಲಿಂಗೇ ಗೌಡ ಮುಂಬೈ ತಲುಪಿದ್ದಾರೆ.

Last Updated : Jul 10, 2019, 09:32 AM IST
ಮುಂಬೈ: ಹೋಟೆಲ್ ಹೊರಗೆ ಡಿಕೆಶಿ ತಡೆಹಿಡಿದ ಪೊಲೀಸರು title=
Pic Courtesy: ANI

ಮುಂಬೈ: ಬಂಡಾಯ ಶಾಸಕರನ್ನು ಭೇಟಿ ಮಾಡಲು ಮುಂಬೈಗೆ ಬಂದಿರುತ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಮತ್ತು ಜೆಡಿಎಸ್ ಶಾಸಕ ಶಿವಲಿಂಗೇ ಗೌಡ ಅವರನ್ನು ಮುಂಬೈ ಪೊಲೀಸರು ರೆನೈಸೆನ್ಸ್ ಹೋಟೆಲ್ ಗೇಟ್ ಹೊರಗೆ ತಡೆಹಿಡಿದಿದ್ದು, ಬಂಡಾಯ ಶಾಸಕರನ್ನು ಭೇಟಿಯಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ನಾನು ನನ್ನ ಸ್ನೇಹಿತರನ್ನು ಭೇಟಿ ಮಾಡಿ ಮಾತನಾಡಲು ಬಂದಿದ್ದೇನೆ. ನಾನು ಇದೇ ಹೋಟೆಲ್‌ನಲ್ಲಿ ಒಂದು ರೂಂ ಬುಕ್ ಕಾಯ್ದಿರಿಸಿದ್ದೇನೆ. ನನ್ನ ಸ್ನೇಹಿತರೂ ಇಲ್ಲಿಯೇ ಇದ್ದಾರೆ. ಒಂದು ಸಣ್ಣ ಸಮಸ್ಯೆ ಇದೇ, ನನ್ನ ಸ್ನೇಹಿತರೊಂದಿಗೆ ಮಾತುಕತೆ ನಡೆಸಬೇಕಿದೆ. ನಾವು ಅವರಿಗೆ ಬೆದರಿಕೆ ಹಾಕುವ ಪ್ರಶ್ನೆಯೇ ಇಲ್ಲ. ನಾವು ಪರಸ್ಪರ ಪ್ರೀತಿಸುತ್ತೇವೆ ಮತ್ತು ಗೌರವಿಸುತ್ತೇವೆ. ನಮ್ಮ ಬಳಿ ಯಾವುದೇ ಶಸ್ತ್ರಾಸ್ತ್ರಗಳಿಲ್ಲ ಕೇವಲ ಹೃದಯವಿದೆ ಎಂದು ನೈಸೆನ್ಸ್ ಹೋಟೆಲ್ ಗೇಟ್ ಹೊರಗೆ ಡಿ.ಕೆ. ಶಿವಕುಮಾರ್ ಪೊಲೀಸರ ಬಳಿ ಮನವಿ ಮಾಡಿದರೂ ಮುಂಬೈ ಪೊಲೀಸರು ಡಿಕೆಶಿ ಅವರನ್ನು ಒಳಗೆ ಬಿಡುತ್ತಿಲ್ಲ.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ನಮ್ಮ ಸ್ನೇಹಿತರು ಕರಿಯದೇ ನಾನು ಬರುತ್ತೇನೆಯೇ? ಬೋಪಯ್ಯ, ಆರ್. ಅಶೋಕ್ ಎಲ್ಲರಿಗೂ ಒಳಗೆ ಪ್ರವೇಶಿಸಲು ಅವಕಾಶವಿದೆ. ನಮ್ಮನ್ನು ಮಾತ್ರ ಒಳಗೆ ಬಿಡುತ್ತಿಲ್ಲ. ಬಿಜೆಪಿಯವರು ರಣಹೇಡಿಗಳು. ನಮ್ಮನ್ನೇ ಒಳಗೆ ಬಿಡುತ್ತಿಲ್ಲ. ನಮ್ಮ ಶಾಸಕರನ್ನು ಭೇಟಿಯಾಗದೆ ನಾನು ಇಲ್ಲಿಂದ ಹೋಗುವುದಿಲ್ಲ ಎಂದು ಹೇಳಿದರು.

ಬಳಿಕ ಮಾತನಾಡಿದ ಶಿವಲಿಂಗೇ ಗೌಡ, ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಬಿಜೆಪಿಯವರೇ ಈ ನಾಟಕದ ಸೂತ್ರಧಾರರು ಎಂದು ಆರೋಪಿಸಿದರು.

ಏತನ್ಮಧ್ಯೆ, ಜೆಡಿ (ಎಸ್) ಶಾಸಕ ನಾರಾಯಣ್ ಗೌಡ ಅವರ ಬೆಂಬಲಿಗರು ಡಿ.ಕೆ.ಶಿವಕುಮಾರ್ ಹೋಟೆಲ್ ಬಳಿ ಬರುತ್ತಿದ್ದಂತೆ "ಗೋ ಬ್ಯಾಕ್, ಗೋ ಬ್ಯಾಕ್" ಘೋಷಣೆ ಕೂಗುತ್ತಿದ್ದಾರೆ.
 

Trending News