ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 12 ಗಂಟೆಗಳಲ್ಲಿ 5 ಮರ್ಡರ್‌!

ದೆಹಲಿಯ ನಂದನಗರಿ ರೆಡ್‌ ಲೈಟ್‌ ಪ್ರದೇಶದಲ್ಲಿ ಕಾರಿನಲ್ಲಿದ್ದ ಇಬ್ಬರ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ. 

Last Updated : Jun 14, 2019, 06:58 PM IST
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 12 ಗಂಟೆಗಳಲ್ಲಿ 5 ಮರ್ಡರ್‌! title=
ಸಾಂದರ್ಭಿಕ ಚಿತ್ರ, ಕೃಪೆ: ANI

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಸರಣಿ ಹತ್ಯೆ ನಡೆದಿದ್ದು, ಕೇವಲ 12 ಗಂಟೆಗಳಲ್ಲಿ ಐವರ ಕೊಲೆ ನಡೆದಿದೆ. ಈ ಘಟನೆಯಿಂದಾಗಿ ದೆಹಲಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ದೆಹಲಿಯ ನಂದನಗರಿ ರೆಡ್‌ ಲೈಟ್‌ ಪ್ರದೇಶದಲ್ಲಿ ಕಾರಿನಲ್ಲಿದ್ದ ಇಬ್ಬರ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ.  ಕೂಡಲೇ ಸ್ಥಳಿಯರು ಗಾಯಾಳುಗಳನ್ನು ಜಿಟಿಬಿ ಆಸ್ಪತ್ರೆಗೆ ಕರೆತರಲಾಯಿತಾದರೂ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಮೃತರನ್ನು ನಂದ ನಾಗರಿಯ ಕುರ್ವೇಶ್ ಎಂದು ಗುರುತಿಸಲಾಗಿದ್ದು, ಘಟನೆ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಎಲ್ಲಾ ಆಯಾಮಗಳಿಂದಲೂ  ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಉಳಿದಂತೆ ನಗರದ ಇತರ ಭಾಗಗಳಲ್ಲಿ ಉಳಿದ ಮೂರು ಹತ್ಯೆಗಳು ನಡೆದಿದ್ದು, ಭಾಸ್ವಾಲಾ ಪ್ರದೇಶದಲ್ಲಿ ಇಬ್ಬರು ಮತ್ತು ವಿಕಾಸ್‌ಪುರಿ ಪ್ರದೇಶದಲ್ಲಿ ಓರ್ವನ ಹತ್ಯೆ ನಡೆದಿದೆ. ಸದ್ಯ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Trending News