ನವದೆಹಲಿ: ಲೆಫ್ಟಿನೆಂಟ್ ಗವರ್ನರ್ (LG) ವಿ.ಕೆ.ಸೆಕ್ಸೇನಾ ಅವರು ನನ್ನೊಂದಿಗೆ ಸಿಟ್ಟು ಮಾಡಿಕೊಂಡಷ್ಟು, ನನ್ನ ಹೆಂಡತಿಯೂ ಸಿಟ್ಟು ಮಾಡಿಕೊಂಡಿಲ್ಲ ಅಂತಾ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವ್ಯಂಗ್ಯವಾಡಿದ್ದಾರೆ.
ದೆಹಲಿ ಸರ್ಕಾರದೊಂದಿಗೆ ವಿ.ಜಿ.ಸೆಕ್ಸೇನಾ ಅವರು ಸಾಕಷ್ಟು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಹೀಗಾಗಿ ಸೆಕ್ಸೇನಾ ಕುರಿತು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡುವ ಮೂಲಕ ಕಿಚಾಯಿಸಿದ್ದಾರೆ.
ಇದನ್ನೂ ಓದಿ: ಅತ್ಯಂತ ಅಗ್ಗವಾಗಿ ಸ್ಯಾಮ್‌ಸಂಗ್‌ನ Flip & Fold ಸ್ಮಾರ್ಟ್‌ಫೋನ್ ಮಾರಾಟ!?
ಆಮ್ ಆದ್ಮಿ ಪಕ್ಷದ (AAP) ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್ ತಮ್ಮ ಟ್ವೀಟ್‍ನಲ್ಲಿ, ‘ಲೆಫ್ಟಿನೆಂಟ್ ಗವರ್ನರ್ ಸಾಹೇಬರು ಪ್ರತಿದಿನ ನನ್ನ ಮೇಲೆ ಸಿಟ್ಟು ಮಾಡಿಕೊಂಡಷ್ಟು, ನನ್ನ ಹೆಂಡತಿಯೂ ಸಿಟ್ಟು ಮಾಡಿಕೊಂಡಿಲ್ಲ. ಎಲ್‌ಜಿ ಅವರು ಕಳೆದ 6 ತಿಂಗಳಲ್ಲಿ ನನಗೆ ಬರೆದಷ್ಟು ‘ಪ್ರೇಮ ಪತ್ರ’ಗಳನ್ನು ನನ್ನ ಹೆಂಡತಿಯೂ ಬರೆದಿಲ್ಲ. ಎಲ್‌ಜಿ ಸಾಹೇಬರೇ ಚೂರು ಆರಾಮಾಗಿರಿ. ಚೂರು ಆರಾಮಾಗಿ ಇರುವಂತೆ ನಿಮ್ಮ ಸೂಪರ್ ಬಾಸ್‍ಗೂ ಹೇಳಿ’ ಎಂದು ತಮಾಷೆಯಿಂದಲೇ ಟೀಕಿಸಿದ್ದಾರೆ.
LG साहिब रोज़ मुझे जितना डाँटते हैं, उतना तो मेरी पत्नी भी मुझे नहीं डाँटतीं।
पिछले छः महीनों में LG साहिब ने मुझे जितने लव लेटर लिखे हैं, उतने पूरी ज़िंदगी में मेरी पत्नी ने मुझे नहीं लिखे।
LG साहिब, थोड़ा chill करो। और अपने सुपर बॉस को भी बोलो, थोड़ा chill करें।
— Arvind Kejriwal (@ArvindKejriwal) October 6, 2022
ದೆಹಲಿ ಸಿಎಂ ಕೇಜ್ರಿವಾಲ್ ಹಾಗೂ ಸಂಪುಟದ ಸಚಿವರು ಮಹಾತ್ಮಾ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನದಂದು ರಾಜ್ ಘಾಟ್ ಹಾಗೂ ವಿಜಯ ಘಾಟ್‌ನಲ್ಲಿ ನಡೆದ ಕಾರ್ಯಕ್ರಮಗಳಿಗೆ ಹಾಜರಾಗದೆ ಸಂಪೂರ್ಣ ಅಸಡ್ಡೆ ತೋರಿದ್ದಾರೆ ಅಂತಾ ಆರೋಪಿಸಿ ಸಕ್ಸೇನಾ ಕೇಜ್ರಿವಾಲ್‌ಗೆ ಪತ್ರ ಬರೆದಿದ್ದರು.
ಗುಜರಾತ್‌ನಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗಾಗಿ ಅರವಿಂದ್ ಕೇಜ್ರಿವಾಲ್ ಅವರು ಪ್ರಚಾರ ಮಾಡುತ್ತಿರುವುದರಿಂದ ಮಹಾತ್ಮಾ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲವೆಂದು ಎಎಪಿ ಸ್ಪಷ್ಟನೆ ನೀಡಿತ್ತು. ಇದೀಗ ಇದೇ ವಿಚಾರವಾಗಿ ಕೇಜ್ರಿವಾಲ್ ಟ್ವೀಟ್ ಮಾಡಿದ್ದು, ಸೆಕ್ಸೇನಾಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: 120 ಕೋಟಿ ಮೌಲ್ಯದ ಡ್ರಗ್ ಸಾಗಾಟ; ಏರ್ ಇಂಡಿಯಾದ ಮಾಜಿ ಪೈಲಟ್ ಸೇರಿ 6 ಮಂದಿ ಬಂಧನ!
ಮೂಲಸೌಕರ್ಯ ಯೋಜನೆಗಳು ವಿಳಂಬವಾಗುತ್ತಿವೆ ಎಂದು ಉಲ್ಲೇಖಿಸಿ, ಮರಗಳನ್ನು ಕಡಿಯಲು ತ್ವರಿತವಾಗಿ ಅನುಮತಿ ನೀಡುವಂತೆ ಕಳೆದ ವಾರ ಸಕ್ಸೇನಾ ಕೇಜ್ರಿವಾಲ್‌ಗೆ ಪತ್ರ ಬರೆದಿದ್ದರು. ಕೇಜ್ರಿವಾಲ್‌ಗೆ ಬಣ್ಣ ಬದಲಾಯಿಸುವ ಹಳೆಯ ಅಭ್ಯಾಸವಿದೆ ಎಂದು ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ಆರೋಪಿಸಿದ್ದಾರೆ. ಹೀಗಾಗಿ ಇದೀಗ ದೆಹಲಿ ಸರ್ಕಾರದಲ್ಲಿ ಅರವಿಂದ್ ಕೇಜ್ರಿವಾಲ್ Vs ವಿ.ಕೆ.ಸೆಕ್ಸೇನಾ ಜಟಾಪಟಿ ಮುಂದುವರೆದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.