ಸಾರ್ವಜನಿಕರ ಜೊತೆ ಸಂಪರ್ಕಕ್ಕಾಗಿ ದೆಹಲಿ ಸಿಎಂ ಮಾಡಿದ್ರು ಈ ಕೆಲಸ!

ನೀವು ದೆಹಲಿಯಲ್ಲಿ ವಾಸಿಸುತ್ತಿದ್ದರೆ, ಸಿಎಂ ಅರವಿಂದ ಕೇಜ್ರಿವಾಲ್ ಅವರು ಯಾವಾಗ ಬೇಕಾದರೂ ನಿಮ್ಮ ಮನೆಗೆ ಬರಬಹುದು. ಇದನ್ನು ನಾವು ಹೇಳುತ್ತಿಲ್ಲ ಸ್ವತಃ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೇ ಹೇಳಿದ್ದಾರೆ.

Written by - Yashaswini V | Last Updated : Jan 28, 2020, 08:38 AM IST
ಸಾರ್ವಜನಿಕರ ಜೊತೆ ಸಂಪರ್ಕಕ್ಕಾಗಿ ದೆಹಲಿ ಸಿಎಂ ಮಾಡಿದ್ರು ಈ ಕೆಲಸ! title=
File Image

ನವದೆಹಲಿ: ನೀವು ದೆಹಲಿಯಲ್ಲಿ ವಾಸಿಸುತ್ತಿದ್ದರೆ, ಸಿಎಂ ಅರವಿಂದ ಕೇಜ್ರಿವಾಲ್ ಅವರು ಯಾವಾಗ ಬೇಕಾದರೂ ನಿಮ್ಮ ಮನೆಗೆ ಬರಬಹುದು. ಇದನ್ನು ನಾವು ಹೇಳುತ್ತಿಲ್ಲ ಸ್ವತಃ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೇ ಹೇಳಿದ್ದಾರೆ. ಹೌದು, AAP ಮುಖ್ಯಸ್ಥ ಹಾಗೂ ದೆಹಲಿ ಸಿಎಂ  ಅರವಿಂದ್ ಕೇಜ್ರಿವಾಲ್(Arvind Kejriwal) ಸಾರ್ವಜನಿಕರೊಂದಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಸಾಫ್ಟ್‌ವೇರ್ ಜೊತೆಗೆ 7690944444 ಮೊಬೈಲ್ ಸಂಖ್ಯೆಯನ್ನು ನೀಡಿದ್ದಾರೆ. ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿದಾಗ, ಮೊಬೈಲ್‌ನಲ್ಲಿ ಸಂದೇಶ ಬರುತ್ತದೆ. ಇದರಲ್ಲಿ www.welcomekejriwal.in ಹೆಸರಿನ ಲಿಂಕ್ ಕಂಡುಬರುತ್ತದೆ. ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಕೇಜ್ರಿವಾಲ್ ಅವರೇ ನಿಮ್ಮ ಮನೆಗೆ ಬರುತ್ತಾರೆ.

ಇದಲ್ಲದೆ ವಿದ್ಯುತ್, ನೀರು, ಆರೋಗ್ಯ, ಶಿಕ್ಷಣ, ಮೂಲಸೌಕರ್ಯ, ಮಹಿಳಾ ಸುರಕ್ಷತೆ ಮತ್ತು ಕಚ್ಚಾ ವಸಾಹತು ಸೇರಿದಂತೆ ಹಲವು ಆಯ್ಕೆಗಳು ಮೊಬೈಲ್ ಪರದೆಯಲ್ಲಿ ಬರಲಿವೆ. ದೆಹಲಿ ನಿವಾಸಿಗಳು ಯಾವುದೇ ಆಯ್ಕೆಯನ್ನು ಆರಿಸಿಕೊಳ್ಳಬಹುದು ಮತ್ತು ಮುಖ್ಯಮಂತ್ರಿಯೊಂದಿಗೆ ನೇರವಾಗಿ ಮಾತನಾಡಬಹುದು ಮತ್ತು ನಿಮ್ಮ ಪ್ರತಿಕ್ರಿಯೆಯನ್ನು ನೀಡಬಹುದು ಎಂದು ಮಾಹಿತಿ ನೀಡಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಅರವಿಂದ್ ಕೇಜ್ರಿವಾಲ್, ನನಗೆ ಇಷ್ಟೊಂದು ಪ್ರೀತಿ ನೀಡಿದ ದೆಹಲಿಯ ಜನತೆಗೆ ನಾನು ಚಿರಋಣಿ. ರಾಜ್ಯದ ಜನತೆ ಪ್ರೀತಿ ಪಡೆದ ನಾನೇ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ನಾವು ದೆಹಲಿಯ ಜನರನ್ನು ತುಂಬಾ ಪ್ರೀತಿಸುತ್ತೇವೆ. ದೆಹಲಿಯಲ್ಲಿ ಎರಡು ಕೋಟಿ ಜನರು ವಾಸಿಸುತ್ತಿದ್ದಾರೆ. ಸುಮಾರು 50 ಲಕ್ಷ ಕುಟುಂಬಗಳಿವೆ. ನಾನು ವೈಯಕ್ತಿಕವಾಗಿ ಮನೆ ಮನೆಗೆ ತೆರಳಿ ವೈಯಕ್ತಿಕವಾಗಿ ಕುಟುಂಬ ಸದಸ್ಯರನ್ನು ಭೇಟಿಯಾಗಬೇಕೆಂದು ನನಗೆ ತುಂಬಾ ಆಸೆ ಇತ್ತು. ನಾನು ಪ್ರತಿ ವರದಿ ಕಾರ್ಡ್ ಅನ್ನು ಪ್ರತಿ ಬಾಗಿಲಿಗೆ ತೆರಳಿ ತೋರಿಸಬೇಕು ಮತ್ತು ಕಳೆದ ಐದು ವರ್ಷಗಳಲ್ಲಿ ಮಾಡಿದ ಕೆಲಸವನ್ನು ಅವರಿಗೆ ತಿಳಿಸಬೇಕು ಮತ್ತು ಅವರ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂಬ ಅಭಿಲಾಷೆ ವ್ಯಕ್ತಪಡಿಸಿದರು.

ಆದರೆ ವಾಸ್ತವವಾಗಿ ಅಷ್ಟೂ ಮನೆಗಳಿಗೆ ಭೇಟಿ ನೀಡಲು ಸಾಧ್ಯವಿಲ್ಲ. ಹಾಗಾಗಿ ತಂತ್ರಜ್ಞಾನವನ್ನು ಆಶ್ರಯಿಸಬೇಕಾಗಿದೆ ಎಂದ ಕೇಜ್ರಿವಾಲ್, ದೆಹಲಿ ವಿಧಾನಸಭಾ ಚುನಾವಣೆ (Delhi Assembly elections 2020)ಯಲ್ಲಿ ಎಎಪಿ ಸರ್ಕಾರದ ಕೆಲಸವನ್ನು ಪರಿಗಣಿಸಿ ಮತ ಚಲಾಯಿಸುವಂತೆ ಜನರಿಗೆ ಮನವಿ ಮಾಡಿದರು.

Trending News