ನವದೆಹಲಿ: ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಫಾನಿ ಚಂಡಮಾರುತ ಮತ್ತಷ್ಟು ತೀವ್ರವಾಗುವ ಸಾಧ್ಯತೆಯಿದ್ದು, ಮೇ 3ರಂದು ಒಡಿಶಾ ಕರಾವಳಿ ಪ್ರದೇಶಗಳಿಗೆ ಅಪ್ಪಳಿಸಲಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚನೆ ನೀಡಿದೆ.
ಈ ಬಗ್ಗೆ ಎಎನ್ಐಗೆ ಹೇಳಿಕೆ ನೀಡಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಅತ್ಯಂತ ತೀವ್ರ ಸ್ವರೂಪ ಪಡೆದಿರುವ 'ಫಾನಿ' ಚಂಡಮಾರುತ, ಗೋರಕ್ಪುರ್ ಮತ್ತು ಚಂದಬಲಿ ನಡುವೆ, ಒಡಿಶಾದ ಪುರಿಯ ದಕ್ಷಿಣ ಭಾಗಕ್ಕೆ ಮೇ 3ರಂದು 175-185 ಕಿ.ಮೀ ವೇಗದಲ್ಲಿ ಅಪ್ಪಳಿಸುವ ಸಾಧ್ಯತೆ ಇದೆ.
ಮಂಗಳವಾರ ರಾತ್ರಿ 1 ಘಂಟೆಯ ಬಳಿಕ ಚಂಡಮಾರುತದ ತೀವ್ರತೆ ಹೆಚ್ಚಾಗಲಿದ್ದು, ಬುಧವಾರ ಸಂಜೆವರೆಗೆ ವಾಯವ್ಯ ದಿಕ್ಕಿನಲ್ಲಿ ಸಾಗುವ ಸಾಧ್ಯತೆ ಇದೆ. ಬಳಿಕ ಉತ್ತರ-ಈಶಾನ್ಯ ದಿಕ್ಕಿನಲ್ಲಿ ಒಡಿಶಾ ಕರಾವಳಿಗೆ ಅಪ್ಪಳಿಸಲಿದೆ ಎನ್ನಲಾಗಿದೆ.
NDMA (National Disaster Management Authority) India: Extremely Severe Cyclonic Storm Fani likely to hit Odisha coast between Gopalpur and Chandbali, south of Puri on 3rd May with wind speed of 175-185 kmph gusting upto 205 kmph.
— ANI (@ANI) April 30, 2019
ಒಡಿಶಾ ಕರಾವಳಿ ಮತ್ತು ಆಂಧ್ರಪ್ರದೇಶದ ಉತ್ತರದ ಕರಾವಳಿ ಸಮೀಪದ ಜಿಲ್ಲೆಗಳಲ್ಲಿ ಮೇ 3 ಮತ್ತು ಮೇ 4 ರಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.