/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ:  Remdesiver Export Banned - ದೇಶಾದ್ಯಂತ ಹೆಚ್ಚಾಗುತ್ತಿರುವ ಕೊರೊನಾವೈರಸ್ ಸೋಂಕಿನ (Corona In India) ಎರಡನೇ ಅಲೆಯ ಮಧ್ಯೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ರೆಮ್ಡೆಸಿವಿರ್ ಇಂಜೆಕ್ಷನ್ ಹಾಗೂ ಔಷಧಿಯ ರಫ್ತಿನ ಮೇಲೆ ಸರ್ಕಾರ (Government Of India) ನಿಷೇಧ ವಿಧಿಸಿದೆ.  ದೇಶದಲ್ಲಿ ಕರೋನದ ಸ್ಥಿತಿಯನ್ನು ಸರಿಪಡಿಸುವವರೆಗೆ ಈ ನಿಷೇಧ ಮುಂದುವರೆಯಲಿದೆ. ಇದೆ ವೇಳೆ  ಅದೇ ಸಮಯದಲ್ಲಿ, ರೆಮ್‌ಡೆಸಿವಿರ್  ಔಷಧಿಯನ್ನು (Remdesivir Medicine)  ರೋಗಿಗಳು ಮತ್ತು ಆಸ್ಪತ್ರೆಗಳಿಗೆ ತಲುಪಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಕೇಂದ್ರ ಸರ್ಕಾರ ನಿರ್ದೇಶನಗಳನ್ನು ಜಾರಿಗೊಳಿಸಿದೆ.

ಸ್ಟಾಕ್ ನಲ್ಲಾದ ಕೊರತೆ ಚಿಂತೆ ಹೆಚ್ಚಿಸಿದೆ
ಹೆಚ್ಚುತ್ತಿರುವ ಕೊರೊನಾವೈರಸ್‌ನಿಂದಾಗಿ ದೇಶದಲ್ಲಿ ರೆಮಿಡಿಸಿವಿರ್ ಔಷಧಿಯ ದಾಸ್ತಾನಿನಲ್ಲಿ ಎದುರಾದ ಕೊರತೆ ಸರ್ಕಾರದ ಚಿಂತೆ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಈ ನಿರ್ಧಾರ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ದೇಶದ ರೋಗಿಗಳಿಗೆ ರೆಮ್‌ಡೆಸಿವಿರ್ ಇಂಜೆಕ್ಷನ್ ತಲುಪಲು ಸುಲಭವಾಗುವಂತೆ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಸತತ ಚೆಕಿಂಗ್ ನಡೆಸಲಾಗುವುದು
ರೆಮ್ಡಿಸಿವಿರ್ ಔಷಧಿಯ ಸ್ಟಾಕ್ / ವಿತರಣೆಯ ವಿವರಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಕೇಂದ್ರ ಸರ್ಕಾರ ರೆಮ್‌ಡೆಸಿವಿರ್‌ನ ಎಲ್ಲಾ ದೇಶೀಯ ಉತ್ಪಾದಕರಿಗೆ ಸೂಚಿಸಿದೆ. ಡ್ರಗ್ ಇನ್ಸ್‌ಪೆಕ್ಟರ್‌ಗಳು ಮತ್ತು ಇತರ ಅಧಿಕಾರಿಗಳಿಗೆ ಸ್ಟಾಕ್ ಚೆಕ್ ನಡೆಸಲು ಮತ್ತು ಹಿಡುವಳಿ, ಕಪ್ಪು ಮಾರ್ಕೆಟಿಂಗ್ ನಿಲ್ಲಿಸಲು ಸೂಚನೆ ನೀಡಿದೆ. ಇದಲ್ಲದೆ, ಮುಂದಿನ ದಿನಗಳಲ್ಲಿ ರೆಮಿಡಿಸೈವರ್ ಇಂಜೆಕ್ಷನ್ ಬೇಡಿಕೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಹೇಳಿದೆ.

ಉತ್ಪಾದನೆ ಹೆಚ್ಚಾಗಲಿದೆ
ಡಿಪಾರ್ಟ್ಮೆಂಟ್ ಆಫ್ ಫಾರ್ಮಾಸ್ಯೂಟಿಕಲ್ಸ್  ಇದಕ್ಕಾಗಿ ದೇಸೀಯ ರೆಮ್ಡಿಸಿವಿರ್ ನಿರ್ಮಾಪಕರೊಂದಿಗೆ ನಿರಂತರ ಸಂಪರ್ಕದಲ್ಲಿರಲು ಸರ್ಕಾರದ ವತಿಯಿಂದ ಸೂಚಿಸಲಾಗಿದೆ. ಈಗಾಗಲೇ ರೆಮಿಡೆಸಿವರ್ ಉತ್ಪಾದನೆಗೆ ಮತ್ತಷ್ಟು ಉತ್ತೇಜನ ನೀಡುವ ಪ್ರಯತ್ನಗಳು ನಡೆಯುತ್ತಿವೆ. ಈ ಕುರಿತು ಹೇಳಿಕೆ ನೀಡಿರುವ ಸಚಿವಾಲಯ, ಏಳು ಭಾರತೀಯ ಕಂಪನಿಗಳು ಮೆಸರ್ಸ್ ಗಿಲಿಡ್ ಸೈನ್ಸಸ್, ಅಮೇರಿಕಾ ಜೊತೆಗೆ ಸ್ವಯಂಪ್ರೇರಿತ ಲೈಸೆನ್ಸಿಂಗ್ ಕರಾರಿನ ಅಡಿ ಇಂಜೆಕ್ಷನ್ ಉತ್ಪಾದನೆಯನ್ನು ನಡೆಸುತ್ತಿವೆ. ಇವು ಪ್ರತಿ ತಿಂಗಳು ಸುಮಾರು 38.80 ಲಕ್ಷ ಯುನಿಟ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿವೆ. 

ಇದನ್ನೂ ಓದಿ-  Covid-19 Second Wave: ಕೋವಿಡ್ 2ನೇ ಅಲೆಯ 'ಹೊಸ ರೋಗ ಲಕ್ಷಣಗಳ' ಬಗ್ಗೆ ಇರಲಿ ಎಚ್ಚರ!

ರೆಮಡೆಸಿವಿರ್ ಬೇಡಿಕೆಯಲ್ಲಿ ಹೆಚ್ಚಳ
ಭಾರತದಲ್ಲಿ ಕೋವಿಡ್ (Covid 19) ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ದೇಶದಲ್ಲಿ ಏಪ್ರಿಲ್ 11 ರವರೆಗೆ ಚಿಕಿತ್ಸೆ ಪಡೆಯುವುದು. ರೋಗಿಗಳ ಸಂಖ್ಯೆ 11.08 ಲಕ್ಷಕ್ಕೆ ತಲುಪಿದ್ದು, ಈ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಈ ಕಾರಣದಿಂದಾಗಿ, ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ಬಳಸಲಾಗುವ ರೆಮಡೆಸಿವಿರ್ ಚುಚ್ಚುಮದ್ದಿನ ಬೇಡಿಕೆ ವೇಗವಾಗಿ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇದರ ಬೇಡಿಕೆ ಮತ್ತಷ್ಟು ಹೆಚ್ಚಾಗಬಹುದು ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಇದನ್ನೂ ಓದಿ- Ginger Water For Glowing Skin:ಹೊಳೆಯುವ ಚರ್ಮಕ್ಕಾಗಿ ನಿತ್ಯ ಬಳಸಿ ಶುಂಠಿ ನೀರು

ಕಪ್ಪುಮಾರುಕಟ್ಟೆಯ ಮೇಲೆ ನಿಯಂತ್ರಣ ಸಾಧಿಸಲಾಗುವುದು
ರೆಮಡೆಸಿವಿರ್ ಇಂಜೆಕ್ಷನ್ ಗೆ ಸಂಬಂಧಿಸಿದಂತೆ ಹೆಚ್ಚಾಗುತ್ತಿರುವ ಕಪ್ಪುಮಾರುಕಟ್ಟೆಯ ಹಿನ್ನೆಲೆ ಸರ್ಕಾರ ಈ ಹೆಜ್ಜೆಯನ್ನು ಇಟ್ಟಿರುವುದು ಇಲ್ಲಿ ಗಮನಾರ್ಹವಾಗಿದೆ. ದೇಶದಲ್ಲಿ ಕೊರೊನಾ ಸೋಂಕಿನ ಚಿಕಿತ್ಸೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ರೆಮಡೆಸಿವಿರ್  ಇಂಜೆಕ್ಷನ್ ನ ಕಪ್ಪುಮಾರುಕತೆಯ ಪ್ರಕರಣಗಳ ಸಂಖ್ಯೆ ನಿರಂತರ ಹೆಚ್ಚಾಗುತ್ತಿರುವ ಹಿನ್ನೆಲೆ ಸರ್ಕಾರ ತನ್ನ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲಿದೆ.

ಇದನ್ನೂ ಓದಿ-Clove Benefits: ಪ್ರತಿದಿನ ರಾತ್ರಿ 2 ಲವಂಗ ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳು ಗೋತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
Croronavirus: remdesivir injection export prohibited till covid 19 situation in india improves says government
News Source: 
Home Title: 

Remdesivir ರಫ್ತಿನ ಮೇಲೆ ನಿರ್ಬಂಧ, ಮೊದಲು ನಮ್ಮ ದೇಶ ಎಂದ ಮೋದಿ ಸರ್ಕಾರ

Remdesiver Export Banned: Coronavirus: Remdesivir ರಫ್ತಿನ ಮೇಲೆ ನಿರ್ಬಂಧ, ಮೊದಲು ನಮ್ಮ ದೇಶ ಎಂದ ಮೋದಿ ಸರ್ಕಾರ
Caption: 
Remdesiver Export Banned (File Photo)
Yes
Is Blog?: 
No
Tags: 
Facebook Instant Article: 
Yes
Highlights: 

Remdesivir ರಫ್ತಿನ ಮೇಲೆ ಕೇಂದ್ರ ಸರ್ಕಾರ ನಿಷೇಧ.

ದೇಶದಲ್ಲಿ ಕೊವಿಡ್ ಪರಿಸ್ಥಿತಿ ಸುಧಾರಿಸುವವರೆಗೆ ಈ ನಿರ್ಬಂಧ ಮುಂದುವರೆಯಲಿದೆ.

ಕಪ್ಪುಮಾರುಕಟ್ಟೆ ಮಾಡುವವರ ವಿರುದ್ಧ ಕೂಡ ಕಠಿಣ ಕ್ರಮ.

Mobile Title: 
Remdesivir ರಫ್ತಿನ ಮೇಲೆ ನಿರ್ಬಂಧ, ಮೊದಲು ನಮ್ಮ ದೇಶ ಎಂದ ಮೋದಿ ಸರ್ಕಾರ
Nitin Tabib
Publish Later: 
No
Publish At: 
Sunday, April 11, 2021 - 20:56
Created By: 
Nitin Tabib
Updated By: 
Nitin Tabib
Published By: 
Nitin Tabib
Request Count: 
2
Is Breaking News: 
No