Covid-19 Updates: Odisha ಸ್ಕೂಲ್-ಕಾಲೇಜುಗಳಲ್ಲಿ ಕೊರೊನಾ ವಿಸ್ಫೋಟ, 75 ವಿದ್ಯಾರ್ಥಿಗಳು Covid-19 Positive

Covid -19 Outbreak In Scool-College: ಒಡಿಶಾದ (Odisha) ಸುಂದರ್‌ಗಢ್ (Sundergad) ಜಿಲ್ಲೆಯ ಸರ್ಕಾರಿ ಅನುದಾನಿತ ಪ್ರೌಢಶಾಲೆಯ (Higher Secondary School)  53 ವಿದ್ಯಾರ್ಥಿನಿಯರು ಮತ್ತು ಸಂಬಲ್‌ಪುರದ ಬುರ್ಲಾದ ವೀರ್ ಸುರೇಂದ್ರ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ (VIMSAR) 22 ಎಂಬಿಬಿಎಸ್ ವಿದ್ಯಾರ್ಥಿಗಳು (MBBS Students) ಕಳೆದ ಮೂರು ದಿನಗಳಲ್ಲಿ ವೈರಸ್‌ ಪರೀಕ್ಷೆಗೆ ಪಾಸಿಟಿವ್ ಪ್ರತಿಕ್ರಿಯೆ ನೀಡಿದ್ದಾರೆ. 

Written by - Nitin Tabib | Last Updated : Nov 23, 2021, 06:20 PM IST
  • ಓಡಿಷಾದ ಸ್ಕೂಲ್-ಕಾಲೇಜಿನಲ್ಲಿ ಕೋರೋನಾ ವಿಸ್ಫೋಟ.
  • ಖಾಸಗಿ ಶಾಲೆ ಹಾಗೂ MBBS ಕಾಲೇಜು ಸೇರಿ ಒಟ್ಟು 75 ವಿದ್ಯಾರ್ಥಿಗಳಿಗೆ ಕೊವಿಡ್-19 ಸೋಂಕು.
  • ಸ್ಥಳೀಯ ಆರೋಗ್ಯಾಧಿಕಾರಿಗಳಿಂದ ಮಾಹಿತಿ.
Covid-19 Updates: Odisha ಸ್ಕೂಲ್-ಕಾಲೇಜುಗಳಲ್ಲಿ ಕೊರೊನಾ ವಿಸ್ಫೋಟ, 75 ವಿದ್ಯಾರ್ಥಿಗಳು Covid-19 Positive title=
Covid-19 Outbreak In Odisha (File Photo)

Covid -19 Outbreak In Scool-College: ಒಡಿಶಾದ (Odisha) ಸುಂದರ್‌ಗಢ್ (Sundergad) ಜಿಲ್ಲೆಯ ಸರ್ಕಾರಿ ಅನುದಾನಿತ ಪ್ರೌಢಶಾಲೆಯ (Higher Secondary School)  53 ವಿದ್ಯಾರ್ಥಿನಿಯರು ಮತ್ತು ಸಂಬಲ್‌ಪುರದ ಬುರ್ಲಾದ ವೀರ್ ಸುರೇಂದ್ರ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ (VIMSAR) 22 ಎಂಬಿಬಿಎಸ್ ವಿದ್ಯಾರ್ಥಿಗಳು (MBBS Students) ಕಳೆದ ಮೂರು ದಿನಗಳಲ್ಲಿ ವೈರಸ್‌ ಪರೀಕ್ಷೆಗೆ ಪಾಸಿಟಿವ್ ಪ್ರತಿಕ್ರಿಯೆ ನೀಡಿದ್ದಾರೆ. ಅಂದರೆ ಅವರ Covid-19 ಪರೀಕ್ಷಾ ವರದಿ ಪಾಸಿಟಿವ್ (Codrona Positive) ಬಂದಿದೆ. ಸ್ಥಳೀಯ ಆರೋಗ್ಯಾಧಿಕಾರಿ ಈ ಕುರಿತು ಮಾಹಿತಿ ನೀಡಿದ್ದಾರೆ.

ಮಂಗಳವಾರದ ವೇಳೆಗೆ ರಾಜ್ಯದಲ್ಲಿ (Covid-19 Outbreak In Odisha) ಕೊರೊನಾ ಸೋಂಕಿತರ ಸಂಖ್ಯೆ 10,47,386ಕ್ಕೆ ಏರಿಕೆಯಾಗಿದೆ. 70 ಮಕ್ಕಳು ಸೇರಿದಂತೆ 212 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಎರಡು ಹೊಸ ಸಾವುಗಳಿಂದ ಸಾವಿನ ಸಂಖ್ಯೆ ಇದೀಗ 8,396 ಕ್ಕೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸೇಂಟ್ ಮೇರಿಸ್ ಬಾಲಕಿಯರ ಶಾಲೆಯ (St.Meries Girls Highschool) ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಪ್ಯಾಟ್ರಿಕಾ “ಪ್ರಸ್ತುತ ಪಾಸಿಟಿವ್ ಬಂದಿರುವ ಬಾಲಕಿಯರನ್ನು ಪ್ರತ್ಯೇಕಿಸಲಾಗಿದೆ ಮತ್ತು ಅವರ ಚಿಕಿತ್ಸೆಗಾಗಿ ವಿಶೇಷ ನಿಬಂಧನೆಗಳನ್ನು ಮಾಡಲಾಗಿದೆ. ಅವರ ಆರೋಗ್ಯ ಸ್ಥಿತಿ ಸಹಜವಾಗಿದ್ದು, ಒಂದು ವಾರದಿಂದ ಶಿಕ್ಷಣ ಸಂಸ್ಥೆಯನ್ನು ಮುಚ್ಚಲಾಗಿದೆ. ಸೋಂಕಿತ ವಿದ್ಯಾರ್ಥಿಗಳು 8, 9 ಮತ್ತು 10 ನೇ ತರಗತಿಯಲ್ಲಿ ಓದುತ್ತಿದ್ದಾರೆ. ಶೀತ ಮತ್ತು ಕೆಮ್ಮಿನ ಲಕ್ಷಣಗಳು ಅವರಲ್ಲಿ ಕಂಡು ಬಂದ ನಂತರ ಅವರಲ್ಲಿ ಹೆಚ್ಚಿನವರನ್ನು COVID-19 ಗಾಗಿ ಪರೀಕ್ಷಿಸಲಾಯಿತು. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದಿದ್ದಾರೆ. 

ಇದನ್ನೂ ಓದಿ-ಈ ರಾಜ್ಯದಲ್ಲಿ ಶೇಕಡಾ 100 ರಷ್ಟು ಸಾಮರ್ಥ್ಯದೊಂದಿಗೆ ದೈಹಿಕ ತರಗತಿ ಪುನರಾರಂಭ..!

ಖುರ್ದಾ ಜಿಲ್ಲೆಯಲ್ಲಿ ಗರಿಷ್ಠ 90 ಹೊಸ ರೋಗಿಗಳು ಕಂಡುಬಂದಿದ್ದಾರೆ, ರಾಜಧಾನಿ ಭುವನೇಶ್ವರ ಕೂಡ ಈ ಜಿಲ್ಲೆಯ ಭಾಗವಾಗಿದೆ. ಇದರ ನಂತರ, ಸುಂದರ್‌ಗಢದಲ್ಲಿ 39 ಮತ್ತು ಮಯೂರ್‌ಭಂಜ್‌ನಲ್ಲಿ 13 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿವೆ. ರಾಜ್ಯದ 14 ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ಒಂದೇ ಒಂದು ಕೊರೊನಾ ವೈರಸ್ ಸೋಂಕಿನ ಪ್ರಕರಣ ವರದಿಯಾಗಿಲ್ಲ. ಖುರ್ದಾ ಜಿಲ್ಲೆಯಲ್ಲಿಯೇ ಕೋವಿಡ್ -19 ನಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ, ರಾಜ್ಯದಲ್ಲಿ ಕೋವಿಡ್-19 ಪತ್ತೆಗಾಗಿ 2.33 ಕೋಟಿ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ 48,143 ಮಾದರಿಗಳನ್ನು ಭಾನುವಾರ ಪರೀಕ್ಷಿಸಲಾಗಿದೆ. ಸೋಂಕಿನ ಪ್ರಮಾಣ ಶೇ. 4.48 ಕ್ಕೆ ಏರಿದೆ.

ಇದನ್ನೂ ಓದಿ-ಕೋವಿಡ್ ಸಹಾಯಧನ ಪಡೆಯದಿರುವ ಕಟ್ಟಡ ಕಾರ್ಮಿಕರು ಮಾಹಿತಿ ನೀಡಲು ಸೂಚನೆ

ರಾಜ್ಯದಲ್ಲಿ 2,191 ರೋಗಿಗಳು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು 10,36,746 ಜನರು ಸೋಂಕಿನಿಂದ ಮುಕ್ತರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 245 ರೋಗಿಗಳು ಗುಣಮುಖರಾಗಿದ್ದಾರೆ. ಒಡಿಶಾದಲ್ಲಿ ಇಲ್ಲಿಯವರೆಗೆ 1.45 ಕೋಟಿ ಜನರು ಕೋವಿಡ್-19 ವಿರೋಧಿ ಲಸಿಕೆಯ ಎರಡೂ ಡೋಸ್‌ಗಳನ್ನು ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ-COVID-19 ವಿರುದ್ಧ ಕೋವಾಕ್ಸಿನ್ ಶೇ 77.8 ರಷ್ಟು ಪರಿಣಾಮಕಾರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News