ಕಳೆದ 24 ಗಂಟೆಗಳಲ್ಲಿ 58,097 ಹೊಸ ಕೋವಿಡ್ ಪ್ರಕರಣಗಳು ವರದಿ.. ಒಂದೇ ದಿನದಲ್ಲಿ 55% ಏರಿಕೆ

COVID-19 India: ಸರ್ಕಾರವು ದೇಶಾದ್ಯಂತ ಲಸಿಕೆ ಅಭಿಯಾನವನ್ನು ನಿರಂತರವಾಗಿ ವೇಗಗೊಳಿಸುತ್ತಿದೆ. ಈ ಮಧ್ಯೆ  ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 58,097  ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ.

Edited by - Zee Kannada News Desk | Last Updated : Jan 5, 2022, 10:35 AM IST
  • ಕಳೆದ 24 ಗಂಟೆಗಳಲ್ಲಿ 58,097 ಹೊಸ COVID-19 ಪ್ರಕರಣಗಳು ವರದಿ
  • ನಿನ್ನೆಯ 37,379 ಪ್ರಕರಣಗಳಿಗಿಂತ 55 ಶೇಕಡಾ ಏರಿಕೆ
  • ದೇಶದಲ್ಲಿ 2,135 ಒಮಿಕ್ರಾನ್ ಸೋಂಕಿನ ಪ್ರಕರಣಗಳು
  • ಮಹಾರಾಷ್ಟ್ರದಲ್ಲಿ 653 ಪ್ರಕರಣಗಳು, ದೆಹಲಿಯಲ್ಲಿ 464 ಕೇಸ್
ಕಳೆದ 24 ಗಂಟೆಗಳಲ್ಲಿ 58,097  ಹೊಸ ಕೋವಿಡ್ ಪ್ರಕರಣಗಳು ವರದಿ.. ಒಂದೇ ದಿನದಲ್ಲಿ 55% ಏರಿಕೆ title=
ಕೋವಿಡ್

ನವದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ 58,097 ಹೊಸ COVID-19 ಪ್ರಕರಣಗಳನ್ನು ವರದಿ ಮಾಡಿದೆ. ಇದು ನಿನ್ನೆಯ 37,379 ಪ್ರಕರಣಗಳಿಗಿಂತ 55 ಶೇಕಡಾ ಹೆಚ್ಚಾಗಿದೆ. 

ದೇಶದಲ್ಲಿ 2,135 ಒಮಿಕ್ರಾನ್ (OMICRON) ಸೋಂಕಿನ ಪ್ರಕರಣಗಳಿವೆ, ಮಹಾರಾಷ್ಟ್ರದಲ್ಲಿ 653 ಪ್ರಕರಣಗಳು, ದೆಹಲಿಯಲ್ಲಿ 464 ಪ್ರಕರಣಗಳಿವೆ.

ಭಾರತವು ದೇಶಾದ್ಯಂತ ಲಸಿಕೆ ಅಭಿಯಾನವನ್ನು ನಿರಂತರವಾಗಿ ವೇಗಗೊಳಿಸುತ್ತಿದೆ. 15-18 ವರ್ಷದೊಳಗಿನವರಿಗೆ ಈಗ ಲಸಿಕೆ ಹಾಕಲಾಗುತ್ತಿದೆ. 

ಭಾರತದಲ್ಲಿ 147 ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು (Corona Vaccine) ನೀಡಲಾಗಿದ್ದು, ಇದು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಮಹತ್ವದ ಮೈಲಿಗಲ್ಲು.

ಚೇತರಿಕೆಯ ಪ್ರಮಾಣವು (The recovery rate) ಪ್ರಸ್ತುತ ಶೇಕಡಾ 98.01 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ಕನಿಷ್ಠ 15,389 ಜನರು ಚೇತರಿಸಿಕೊಂಡಿದ್ದಾರೆ. ಗುಣಮುಖರಾದ ಒಟ್ಟು ಜನರ ಸಂಖ್ಯೆ 3,43,21,803.

ಸಕ್ರಿಯ ಪ್ರಕರಣಗಳು ಒಟ್ಟು ಪ್ರಕರಣಗಳಲ್ಲಿ ಶೇಕಡಾ 1 ಕ್ಕಿಂತ ಕಡಿಮೆ, ಪ್ರಸ್ತುತ ಶೇಕಡಾ 0.61 ರಷ್ಟಿದೆ. ಸಕ್ರಿಯ ಪ್ರಕರಣಗಳು 2,14,004 ಆಗಿದೆ.

ಸಾಪ್ತಾಹಿಕ ಸಕಾರಾತ್ಮಕತೆಯ ದರವು (Weekly positivity rate) 2.60 ಪ್ರತಿಶತ ಆಗಿದ್ದು, ದೈನಂದಿನ ಧನಾತ್ಮಕತೆಯ ದರವು 4.18 ಶೇಕಡಾ ಆಗಿದೆ. ಆರೋಗ್ಯ ಸಚಿವಾಲಯದ ಇತ್ತೀಚಿನ ಅಂಕಿಅಂಶಗಳ ಡೇಟಾ ಪ್ರಕಾರ, ಸುಮಾರು 534 ಜನರು ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ.  

ಇದನ್ನೂ ಓದಿ: Karnataka Lockdown: ರಾಜ್ಯಾದ್ಯಂತ 2 ವಾರಗಳ ಕಾಲ ವೀಕೆಂಡ್ ಲಾಕ್​ಡೌನ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News